Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಲಾಭದ ದಿನ, ಮಕ್ಕಳಿಂದ ಅನುಕೂಲ!

28 ಜೂನ್ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 28 June 2021 in kannada pod
Author
Bangalore, First Published Jun 28, 2021, 7:11 AM IST
  • Facebook
  • Twitter
  • Whatsapp

ಮೇಷ: ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ಇರಲಿ. ಸೂಕ್ತವಾದ ನಿರ್ಧಾರದಿಂದ ಉದ್ಯಮದಲ್ಲಿ ಯಶಸ್ಸು ಕಾಣಲಿದ್ದೀರಿ. ಧೈರ್ಯ ಇರಲಿ.

ವೃಷಭ: ಸ್ನೇಹಿತರ ಜೊತೆಗೂಡಿ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಿರಿ. ಮಾಡುವ ಕೆಲಸವನ್ನು ಮನಸಾರೆ ಮಾಡಿ ಮುಗಿಸಿದರೆ ಒಳ್ಳೆಯ ಫಲ

ಮಿಥುನ: ತಂದೆಯ ಮಾತಿನಿಂದ ಪ್ರೇರಣೆ ದೊರೆಯಲಿದೆ. ಆಪ್ತರು ಮಾಡಿದ ಕೆಲಸದಲ್ಲಿ ಹುಳುಕನ್ನೇ ಹುಡುಕುತ್ತಾ ಕೂರುವುದು ಬೇಡ.

ಕಟಕ: ಒಳ್ಳೆಯದ್ದು, ಕೆಟ್ಟದ್ದು ಎಲ್ಲಾ ಕಡೆಯಲ್ಲಿಯೂ ಇರುತ್ತದೆ. ನೀವು ಒಳ್ಳೆಯ ಅಂಶಗಳತ್ತಲೇ ಗಮನ ನೀಡಲಿದ್ದೀರಿ. ಲಾಭ ಹೆಚ್ಚಾಗಲಿದೆ.

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಸಿಂಹ - ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ನಷ್ಟ ಸಂಭವ, ಸಾಲಬಾಧೆ ಬಾಧಿಸಲಿದೆ, ಶತ್ರುಗಳ ಕಾಟ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ಏರುಪೇರು, ದೃಷ್ಟಿಯಾಗುವ ಸಾಧ್ಯತೆ, ಆಹಾರದಲ್ಲಿ ವ್ಯತ್ಯಾಸ, ಅಸಮಧಾನದ ದಿನ, ಈಶ್ವರ ಪ್ರಾರ್ಥನೆ ಮಾಡಿ

ತುಲಾ - ನಷ್ಟ ಸಂಭವ, ಪ್ರಯಾಣಿಕರು ಎಚ್ಚರವಾಗಿರಬೇಕು, ನೀರಿನ ಒದ್ದಾಟ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಲಾಭದ ದಿನ, ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು: ಸ್ವಂತ ಬುದ್ಧಿಯಿಂದ ಮಾಡಿದ ಎಲ್ಲಾ ಕಾರ್ಯಗಳಲ್ಲೂ ಯಶ ಕಾಣಲಿದ್ದೀರಿ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳಿತು.

ಮಕರ: ಹಣಕಾಸಿನ ತೊಂದರೆ ಉಂಟಾಗಲಿದೆ. ಉದ್ಯೋಗದಲ್ಲಿ ಪ್ರಗತಿ. ಸಂಸಾರದಲ್ಲಿ ಇರುವ ಗೊಂದಲಗಳು ನಿವಾರಣೆಯಾಗಲಿವೆ.

ಕುಂಭ: ಬಾಯಿ ಚಪಲಕ್ಕಾಗಿ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿ

ಮೀನ: ನಿಮ್ಮ ಸುತ್ತಲೂ ಇರುವ ಸ್ವಾರ್ಥಿಗಳ ಬಗ್ಗೆ ಎಚ್ಚರ ಇರಲಿ. ಸ್ವಲ್ಪ ಮೈ ಮರೆತರೂ ಅಪಾಯ ಎದುರಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios