Asianet Suvarna News Asianet Suvarna News

ಈ ರಾಶಿಯವರಿಗಿಂದು ಉತ್ಕೃಷ್ಟವಾದ ಫಲ: ಉಳಿದ ರಾಶಿಗೆ?

26 ಜನವರಿ 2019 ಭಾನುವಾರದ ದಿನ ಭವಿಷ್ಯ| ಯಾರಿಗೆ ಶುಭ? ಇಲ್ಲಿದೆ ನೋಡಿ ವಿವರ

Daily Horoscope Of  26th January 2019 in Kannada
Author
Bangalore, First Published Jan 26, 2020, 7:08 AM IST
  • Facebook
  • Twitter
  • Whatsapp

ಮೇಷ - ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಮಾತಿನಿಂದ ಕಾರ್ಯ ಸಿದ್ಧಿ, ಸಮಾಧಾನವಾಗಿರಿ, ಶುಭಾಶುಭ ಮಿಶ್ರಫಲಗಳಿವೆ, ಶಂಖ ದಾನ ಮಾಡಿ

ವೃಷಭ - ಹಣಕಾಸಿಗೆ ತೊಂದರೆ, ಮಾತಿನಿಂದ ವಿರೋಧ, , ಕುಟುಂಬದಲ್ಲಿ ಘರ್ಷಣೆ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ನವಗ್ರಹ ಪ್ರಾರ್ಥನೆ ಮಾಡಿ

ಮಿಥುನ - ಸಣ್ಣಮಕ್ಕಳಲ್ಲಿ ಬಾಲಾರಿಷ್ಟ ದೋಷ, ಆರೋಗ್ಯದಲ್ಲಿ ಗಂಭೀರ ಏರುಪೇರು, ವಾತ-ಕಫದ ದೋಷ ಕಾಡಲಿದೆ, ಆಹಾರದಲ್ಲಿ ಎಚ್ಚರಿಕೆ ಬೇಕು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ಕಟಕ - ದಾಂಪತ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ನಷ್ಟ, ಸಂಗಾತಿ-ಮಿತ್ರರ ನಡುವೆ ಭಿನ್ನಾಭಿಪ್ರಾಯ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಸಿಂಹ - ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ, ಹೊಸ ಶತ್ರುಗಳ ಕಾಟ, ಸಾಲ ಬಾಧೆ, ಮಾನಸಿಕ ಒತ್ತಡ, ಎಚ್ಚರಿಕೆ ಬೇಕು, ಈಶ್ವರ ಹಾಗೂ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಬುದ್ಧಿಶಕ್ತಿಗೆ ಮಂಕು ಕವಿಯುತ್ತದೆ, ನಿರ್ಧಾರಗಳಿಂದ ಸಮಸ್ಯೆಗಳಾಗಬಹುದು, ಶುಭಾಶುಭ ಮಿಶ್ರಫಲವಿದೆ, ಬುಧನ ಪೀಡಾಪರಿಹಾರ ಸ್ತೋತ್ರ ಪಠಿಸಿ

ಜಾತಕದಲ್ಲಿ ಸಂತಾನ ಯೋಗ, ದೋಷವಿದ್ದರೆ ಇಲ್ಲಿದೆ ಪರಿಹಾರ...

ತುಲಾ - ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಅಗ್ನಿ ಸಂಬಂಧಿ ಕೆಲಸಗಾರರಿಗೆ ಉತ್ತಮ ದಿನ, ಧನ ಪ್ರಾಪ್ತಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಕೃಷ್ಟವಾದ ಫಲವಿದೆ, ಧನಲಾಭ, ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ, ಅವರೆ ದಾನ ಮಾಡಿ

ಧನುಸ್ಸು - ಧನ ಸಮೃದ್ಧಿ, ಕುಟುಂಬದಲ್ಲಿ ಹೊಂದಾಣಿಕೆ, ಉತ್ತಮ ದಿನವಾಗಿರಲಿದೆ, ಗಣಪತಿ ಪ್ರಾರ್ಥನೆ ಮಾಡಿ

ಚೈನೀಸ್ ವರ್ಷದ ಪ್ರಕಾರ ನಿಮ್ಮ ಈ ವರ್ಷದ ಭವಿಷ್ಯ ಹೇಗಿರುತ್ತೆ?

ಮಕರ - ಸ್ವಲ್ಪ ಗೊಂದಲದ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಸ್ವಲ್ಪ ಸಮಸ್ಯೆ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ - ಖರ್ಚು ಹೆಚ್ಚಾಗಲಿದೆ, ನಿಮ್ಮ ಹಣ ಒಳ್ಳೇಕಾರ್ಯಕ್ಕೆ ವಿನಿಯೋಗವಾಗಲಿದೆ, ಉತ್ತಮ ಫಲ

ಮೀನ - ಲಾಭ ಸಮೃದ್ಧಿ, ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ, ಪ್ರಯಾಣದಲ್ಲಿ ಎಚ್ಚರವಿರಲಿ, ವಿಷ ಜಂತುಗಳ ಭಯ, ನಾಗ ಪ್ರಾರ್ಥನೆ ಮಾಡಿ

Follow Us:
Download App:
  • android
  • ios