ಮೇಷ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಸಿಂಹ: ಸಹೋದರನ ಸಹಕಾರದಿಂದ ಕಿರು ಉದ್ಯಮ ಸ್ಥಾಪನೆ ಮಾಡುವಿರಿ. ನಂಬಿಕೆಯಿಂದ ಆತ್ಮ ಶಕ್ತಿ ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ.

ಕನ್ಯಾ: ನಿಮ್ಮ ಪಾಡಿಗೆ ನೀವು ಇದ್ದು ಬಿಡಿ. ನೆರಯವರ ಕಷ್ಟಕ್ಕೆ ನೆರವಾಗುವಿರಿ. ಇಡೀ ದಿನ ಉಲ್ಲಾಸದಿಂದ ಇರುವಿರಿ. ನೆಮ್ಮದಿ ಹೆಚ್ಚಲಿದೆ.

ತುಲಾ: ಸ್ನೇಹಿತರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ. ಮೇಲಾಧಿಕಾರಿಯಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ಶುಭಫಲ.

ವೃಶ್ಚಿಕ: ಇಂದು ನಿಮಗೆ ಗುರು ಬಲ ಚೆನ್ನಾಗಿದೆ. ಗಣೇಶನ ಆರಾಧನೆ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ.

ಧನಸ್ಸು: ಖರ್ಚಿನ ಮೇಲೆ ಹಿಡಿತ ಇರಲಿ. ಕಂಡದ್ದಲ್ಲವೂ ಬೇಕು ಎನ್ನುವ ಹಠ ಬೇಡ. ಒಳ್ಳೆಯ ಮನಸ್ಸಿನಿಂದ ದಾನ, ಧರ್ಮ ಮಾಡುವಿರಿ.

ಮಕರ: ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಲಿದೆ. ಆಪ್ತರು ನೆರವಿಗೆ ಬರಲಿದ್ದಾರೆ. ಹೊಸ ವಸ್ತು ಕೊಳ್ಳುವ ಯೋಗ.

ಕುಂಭ:  ಬದುಕು ಹೊಸ ಸಾಧ್ಯತೆಯತ್ತ ಹೊರಳಿಕೊಳ್ಳುವ ಹಂತ ಇದು. ಸಂತೋಷದಿಂದ ಇದ್ದರೆ ಏನು ಬೇಕಿದ್ದರೂ ಮಾಡಬಹುದು.

ಮೀನ: ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಒಡನಾಟ ಬೆಳೆಯಲಿದೆ. ದೊಡ್ಡ ಆಸೆ ಹೊತ್ತುಕೊಂಡು ಅದರತ್ತ ಚಿತ್ತ ಹರಿಸಿ.