ಮೇಷ - ತಾಳ್ಮೆಯಿಂದ ಇದ್ದರೆ ನಿಮಗೆ ಹೆಚ್ಚು ಅನುಕೂಲವಾಗುವುದು. ಚಿಂತೆ ನಿಮ್ಮನ್ನ ಬಾಧಿಸದು. ಸಕಲ ಕಾರ್ಯಗಳೂ ಆಗಲಿವೆ. 

ವೃಷಭ - ನೆರೆ ಮನೆಯವರ ಕಷ್ಟಕ್ಕೆ ನೆರವಾಗಲಿದ್ದೀರಿ. ನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ಬದಾವಣೆ ಕಂಡು ಬರಲಿದೆ. ಕಣ್ಣಿನ ಸಮಸ್ಯೆಗೆ ಪರಿಹಾರ.

ಮಿಥುನ - ಉಂಡುಹೋದ ಕೊಂಡು ಹೋದ ಎನ್ನುವಂತೆ ಮಾಡದಿರಿ. ದೇವರಲ್ಲಿ ಹೆಚ್ಚು ನಂಬಿಕೆ ಹುಟ್ಟಲಿದೆ. ತಂದೆಯ ಮಾತಿಗೆ ಬೆಲೆ ನೀಡಿ. 

ಕನ್ಯಾ - ಶತ್ರುಗಳು ಕೂಡ ಇಂದು ನಿಮಗೆ ಅನುಕೂಲವಾಗುವಂತೆ ಕೆಲಸ ಮಾಡಲಿದ್ದಾರೆ. ಸಣ್ಣ ವಿಚಾರಗಳಿಗೆ ಮನಸ್ಸು ಕೆಡಿಸಿಕೊಳ್ಳದಿರಿ.

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ - ನಿಮ್ಮ ಕಾರ್ಯಗಳಿಗೆ ನಿಮ್ಮ ವಿರುದ್ಧದ ಟೀಕೆಗೆ ಉತ್ತರವಾಗಲಿ. ಮಾತಿನಿಂದ ಮಾನ ಹಾನಿಯಾಗುವ ಸಾಧ್ಯತೆ ಹೆಚ್ಚು.

ಕಟಕ - ದುಷ್ಟರನ್ನು ಕಂಡರೆ ದೂರವಿರಿ. ಆಹಾರ ಕ್ರಮದಲ್ಲಿ ವ್ಯತ್ಯಯವಾಗಲಿದೆ. ಇಂದು ಸ್ವಾರ್ಥ ವ್ಯಕ್ತಿಗಳಿಗೆ ತಕ್ಕ ಉತ್ತರ ನೀಡಲಿದ್ದೀರಿ.

ತುಲಾ - ನಿಧಾನವೇ ಪ್ರಧಾನವಾಗಿರಲಿ. ಮಕ್ಕಳ ವಿಚಾರದಲ್ಲಿ ಆತುರ ಪಡುವುದು ಬೇಡ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ವೃಶ್ಚಿಕ - ಹಣಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ನೀಡಿ. ನಿಮ್ಮ ಸಹಾಯಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಗೌರವ ಇರಲಿ. ಎಲ್ಲವೂ ಒಳ್ಳೆಯದ್ದೇ ಆಗಲಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ. ನೀವು ನಡೆಯುವ ದಾರಿ ಸರಿಯಾಗಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಮಕರ - ಹೆಚ್ಚು ಸಮಯ ಓದಿನಲ್ಲಿಯೇ ಕಳೆಯಲಿದ್ದೀರಿ. ಸ್ನೇಹಿತರೊಂದಿಗೆ ಹಣಕಾಸಿನ ವ್ಯವಹಾರ ಬೇಡ. ಆರೋಗ್ಯದಲ್ಲಿ ಚೇತರಿಕೆ.

ಕುಂಭ- ಶತ್ರುಗಳು ಎಂದುಕೊಂಡವರೂ ಇಂದು ನಿಮಗೆ ಸಹಾಯ ಮಾಡುತ್ತಾರೆ. ಸರಕಾರದ ಮಟ್ಟದಲ್ಲಿ ನಿಮ್ಮ ಕೆಲಸಗಳು ಆಗಲಿವೆ.

ಮೀನ - ಇಂದಿನ ಕೆಲಸ ಕಾರ್ಯಗಳನ್ನು ನಾಳೆಗೆ ಮುಂದೂಡುವುದು ಬೇಡ. ಇಡೀ ದಿನ ಮನಸ್ಸು ಶಾಂತವಾಗಿ ಇರಲಿದೆ. ಶುಭಫಲ.