ಮೇಷ - ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ವ್ಯವಹಾರಗಳು ಹೆಚ್ಚಲಿವೆ. ಹಣಕಾಸಿನ ವಿಚಾರದಲ್ಲಿ ಜಾಗೃತೆಯಿಂದ ನಡೆದುಕೊಳ್ಳಿ

ವೃಷಭ - ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ. ಹೊರಗಡೆ ಊಟ ಕಡಿಮೆ ಮಾಡುವಿರಿ. ಎಲ್ಲವೂ ನಿಮ್ಮಂತೆಯೇ ಆಗಬೇಕೆನ್ನುವ ಹಠ ಬೇಡ

ಮಿಥುನ - ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕನ್ಯಾ - ಬೇಸರವಾದಾಗ ಯಾರೊಂದಿಗೂ ಮಾತನಾಡುವುದು ಬೇಡ. ಒಬ್ಬರೇ ಕುಳಿತು ಏಕಾಂತದಲ್ಲಿ ಸಂಗೀತ ಕೇಳಿ. ಚಿತ್ತ ಶುದ್ಧಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ - ಹೊಸದನ್ನು ತಿಳಿಯಲು ಹಿಂಜರಿಕೆ ಬೇಡ. ನೀವು ಕಷ್ಟಪಟ್ಟು ಮಾಡಿದ ಕಾರ್ಯಗಳಿಗೆ ಸರಿಯಾದ ಪ್ರತಿಫಲ ಪಡೆದುಕೊಳ್ಳಲಿದ್ದೀರಿ.

ಕಟಕ - ಮೇಲಾಧಿಕಾರಿಗಳ ಮಾತಿಗೆ ಕಟ್ಟು ಬೀಳಬೇಕಾಗಿ ಬರಬಹುದು. ಹೆಚ್ಚು ಮಾತು, ಕಡಿಮೆ ಸಂಪಾದನೆ. ನೆಮ್ಮದಿ ಇರಲಿ

ತುಲಾ - ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡುತ್ತಾ ಕೂರಬೇಡಿ. ಯಾವ ಕೆಲಸ ಯಾವಾಗ ಮಾಡಬೇಕು ಎಂದು ಪಟ್ಟಿ ಮಾಡಿ.

ವೃಶ್ಚಿಕ - ಸುತ್ತಾಟಗಳು ಹೆಚ್ಚಾಗಲಿವೆ. ಇದರಿಂದ ಮುಂದೆ ನಿಮಗೆ ಹೆಚ್ಚು ಅನುಕೂಲ ಆಗಲಿದೆ. ಗೆಲುವು ಅಷ್ಟು ಸುಲಭಕ್ಕೆ ನಿಮ್ಮ ಪಾಲಾಗದು

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಅನ್ಯ ಕಾರ್ಯ ನಿಮಿತ್ತ ದೂರದ ಪ್ರಯಾಣ ಸಾಧ್ಯತೆ. ನಿಮ್ಮ ಮೂಗಿನ ನೇರಕ್ಕೆ ಇರುವುದು ಮಾತ್ರ ಸತ್ಯ ಎಂದು ತಿಳಿಯುವುದು ಬೇಡ.

ಮಕರ - ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ನಿಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಮನೆಯಲ್ಲಿ ನೆಮ್ಮದಿ ನೆಲೆಯಾಗಲಿದೆ.

ಕುಂಭ- ಸಹೋದ್ಯೋಗಿಗಳೊಂದಿಗಿನ ಮನಸ್ತಾಪ ಅಂತ್ಯವಾಗಲಿದೆ. ಗೌರವ ಬಯಸುವ ನೀವು ಮತ್ತೊಬ್ಬರಿಗೂ ಗೌರವ ನೀಡಲಿದ್ದೀರಿ.

ಮೀನ - ಆಪ್ತ ಸ್ನೇಹಿತರಿಗೆ ಇಂದು ಆರ್ಥಿಕ ಸಹಾಯ ಮಾಡಲಿದ್ದೀರಿ. ಹೊಸ ವಸ್ತುಗಳನ್ನು ಕೊಳ್ಳು ವಾಗ ಎಚ್ಚರ ಇರಲಿ. ಹಿರಿಯರ ಮಾತು ಕೇಳಿ.