Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ವಸ್ತುಗಳನ್ನು ಕೊಳ್ಳುವಾಗ ಗುಣ ಮಟ್ಟಕ್ಕೆ ಒತ್ತು ನೀಡಿ!

13 ನವೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 13 November 2020 in kannada pod
Author
Bangalore, First Published Nov 13, 2020, 7:08 AM IST

ಮೇಷ: ನಿಮ್ಮ ಸ್ನೇಹಿತರಿಗೆ ಆತ್ಮವಿಶ್ವಾಸ ತುಂಬುವಲ್ಲಿ ನಿಮ್ಮ ಪಾತ್ರ ದೊಡ್ಡದು. ರಗಳೆಗಳಿಂದ ಹೊರ ಬರಲಿದ್ದೀರಿ. ಸಂತೋಷ ಹೆಚ್ಚಾಗಲಿದೆ

ವೃಷಭ: ಪದೇ ಪದೇ ಕಾಡುತ್ತಿದ್ದ ಸಮಸ್ಯೆಗೆ ಇಂದು ಶಾಶ್ವತವಾದ ಪರಿಹಾರ ದೊರೆಯಲಿದೆ. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಇದ್ದೇ ಇದೆ.

ಮಿಥುನ: ವಸ್ತುಗಳನ್ನು ಕೊಳ್ಳುವಾಗ ಗುಣ ಮಟ್ಟಕ್ಕೆ ಒತ್ತು ನೀಡಿ, ಸಂಬಂಧಗಳನ್ನು ಮಾಡುವಾಗ ವ್ಯಕ್ತಿತ್ವಕ್ಕೆ ಒತ್ತು ನೀಡಿ. ಕಾಲ ಬದಲಾಗಲಿ

ಕಟಕ: ನನಗೇ ಯಾಕೆ ಇಷ್ಟೊಂದು ಕಷ್ಟ ಎಂದು ಕೊರಗುತ್ತಾ ಕೂರುವುದಕ್ಕೆ ಬದಲಾಗಿ, ಧೈರ್ಯದಿಂದ ಮುಂದೆ ಸಾಗುತ್ತಿರಿ. ಶುಭಫಲ.

ಸಿಂಹ: ಕೊಂಡ ವಸ್ತುವಿನ ಲೋಪ ಕಂಡು ಮರುಗುವುದಕ್ಕೆ ಬದಲಾಗಿ ಹೊಸ ವಸ್ತು ಕೊಳ್ಳುವ ಮೊದಲೇ ಎಚ್ಚರಿಕೆ ವಹಿಸುವುದು ಸೂಕ್ತ.

ಕನ್ಯಾ: ಬಂಗಾರದಿಂದ ಬಾಳು ಬಂಗಾರವಾಗದು. ಸಂತೋಷದಿಂದ ಇದ್ದರೆ ಅದೇ ಬಂಗಾರ. ಹೆಚ್ಚು ಆಸೆ ಬೇಡ. ಸಿಕ್ಕಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳಿ.

ತುಲಾ: ಸುಮ್ಮನೆ ಇದ್ದರೆ ತಲೆಯ ಮೇಲೆ ಕೂರುವ ಜನರ ಮುಂದೆ ತಿರುಗಿ ಬೀಳುವುದನ್ನು ಕಲಿತರೆ ತುಲಾ ಒಳಿತು. ಧೈರ್ಯದಿಂದ ಮುಂದೆ ಸಾಗಿ

ವೃಶ್ಚಿಕ: ನಿಮ್ಮ ವೈರಿಯ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾದ ಸ್ಥಿತಿ ಬರಲಿದೆ. ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ. ಆತ್ಮವಿಶ್ವಾಸ ಇರಲಿ.

ಧನುಸ್ಸು: ಹಬ್ಬಕ್ಕೆ ಮನೆಯಲ್ಲಿ ಪೂರ್ವ ತಯಾರಿಗಳು ಶುರುವಾಗಲಿವೆ. ಶುಭ ಕಾರ್ಯಗಳಿಗೆ ಇದು ಸಕಾಲ. ವ್ಯವಹಾರ ಪ್ರಗತಿ ಕಾಣಲಿದೆ

ಮಕರ: ಸಣ್ಣ ವ್ಯಾಪಾರಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ. ಒಳ್ಳೆಯ ಮಾತುಗಳಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರಕುತ್ತದೆ.

ಕುಂಭ: ಅತಿಯಾದ ಆಸೆ ಬೇಡ. ಹಾಗೆಂದು ವಿರಾಗಿಯ ರೀತಿ ಕೂರುವುದೂ ಬೇಡ. ನಿಮ್ಮ ಪಾಲನ್ನು ನೀವು ಪಡೆದುಕೊಳ್ಳುವುದು ಲೇಸು.

ಮೀನ: ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಸಾಹಿತ್ಯದ ಕಡೆಗೆ ಆಸಕ್ತಿ ಹೆಚ್ಚಲಿದೆ. ಪರರ ಸಂತೋಷದಲ್ಲಿಯೇ ನಿಮ್ಮ ಸಂತೋಷ ಅಡಗಿದೆ.

Follow Us:
Download App:
  • android
  • ios