ಮೇಷ: ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಹೆಚ್ಚು ವಹಿವಾಟು ನಡೆಯಲಿದೆ. ಕೃಷಿಕರಿಗೆ ಲಾಭ. ದೊಡ್ಡವರ ಮಾತಿಗೆ ಹೆಚ್ಚು ಮಾನ್ಯತೆ ನೀಡಿ.

ವೃಷಭ: ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ. ಚಳಿಯ ಹೊಡೆತಕ್ಕೆ ಸಿಲುಕಿಕೊಳ್ಳುವಿರಿ. ದುಡಿಯುವ ವರ್ಗಕ್ಕೆ ಇಂದು ಶುಭ ಫಲ.

ಮಿಥುನ: ತಾಳ್ಮೆಯೇ ನಿಮಗೆ ಶುಭದಾಯಕವಾಗಲಿದೆ. ಸಂಜೆ ವೇಳೆಗೆ ಅಪರಿಚಿತರ ಭೇಟಿಯಾಗಲಿದೆ. ಅಂದುಕೊಂಡ ಕಾರ್ಯ ನೆರವೇರಲಿದೆ.

ಕಟಕ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲಿದ್ದೀರಿ. ಆಸ್ತಿ ವಿಚಾರವಾಗಿ ಗೊಂದಲ ಉಂಟಾಗಲಿದೆ. ಎಚ್ಚರಿಕೆ ಇರಲಿ.

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

ಸಿಂಹ: ಕಿವುಡನ ಮುಂದೆ ನಿಂತು ಕಿನ್ನರಿ ನುಡಿಸಿದಂತೆ ನಿಮ್ಮ ಸ್ಥಿತಿ ಆಗಲಿದೆ. ಎಲ್ಲಾ ಕಡೆಯೂ ಮೂಗು ತೂರಿಸಿಕೊಂಡು ಹೋಗದಿರಿ.

ಕನ್ಯಾ:  ಹತ್ತು ಖಾಲಿ ಮಾತಿಗಿಂತ ಒಂದು ತೂಕದ ಮಾತಿಗೆ ಬೆಲೆ ಹೆಚ್ಚು. ನಿಮ್ಮಿಂದ ಇತರರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ. ಶುಭ ಫಲ.

ತುಲಾ: ಮನೆಯ ಮುಖ್ಯಸ್ಥನ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಎಲ್ಲದ್ದಕ್ಕೂ ಕಾರಣ ಕೇಳುತ್ತಾ ಕೂರುವುದು ಬೇಡ.

ವೃಶ್ಚಿಕ: ನಿಮ್ಮೊಳಗಿನ ದಯಾ ಗುಣವೇ ನಿಮಗೆ ವರವಾಗಿ ಪರಿಣಮಿಸಲಿದೆ. ದೊಡ್ಡ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡಲಿದ್ದೀರಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ