Asianet Suvarna News

ದಿನ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ!

02 ಜುಲೈ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 02 July 2021 in kannada pod
Author
Bangalore, First Published Jul 2, 2021, 7:07 AM IST
  • Facebook
  • Twitter
  • Whatsapp

ಮೇಷ - ಸ್ತ್ರೀಯರು ಆರೋಗ್ಯದ ಕಡೆ ಗಮನವಹಿಸಿ, ಮನಸ್ಸು ಮಂಕಾಗಿರಲಿದೆ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ವೃಷಭ - ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಗರ್ಭಿಣಿಯರು, ಸ್ತ್ರೀಯರು ಎಚ್ಚರವಾಗಿರಿ, ಆರೋಗ್ಯದ ಕಡೆ ಗಮನವಿಡಿ, ಪಿತೃದೇವತೆಗಳ ಆರಾಧನೆ ಮಾಡಿ

ಮಿಥುನ - ಪ್ರಯಾಣದಲ್ಲಿ ಎಚ್ಚರವಾಗಿರಿ, ಕೃಷಿಕರು ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಅಂಜಿಕೆ, ಭಯದ ವಾತಾವರಣ, ಜಾಗ್ರತೆ ಬೇಕು, ಹಣನಷ್ಟ ಸಾಧ್ಯತೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಮ್ಮನವರ ಪ್ರಾರ್ಥನೆ ಮಾಡಿ

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

ಸಿಂಹ - ಹಣಕಾಸು ಕೊಂಚ ಖರ್ಚಾಗಲಿದೆ, ಸಮೃದ್ಧಿಗಾಗಿ 108 ಬಾರಿ ಮಹಾಲಕ್ಷ್ಮೀ ಮಂತ್ರ ಪಠಿಸಿ

ಕನ್ಯಾ - ನಷ್ಟ ಸಂಭವ, ಆರೋಗ್ಯದ ಕಡೆ ಗಮನವಿರಲಿ, ಉಳಿದಂತೆ ಎಲ್ಲವೂ ಅನುಕೂಲಕರವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಉತ್ಕೃಷ್ಟ ಲಾಭದ ದಿನ, ಸಮ ಮನಸ್ಥಿತಿ ಇರಲಿ, ಸಹೋದರರ ಮಾರ್ಗದರ್ಶನ ಸಿಗಲಿದೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಉದ್ಯೋಗಿಗಳು ಎಚ್ಚರವಾಗಿರಬೇಕು, ಸ್ತ್ರೀಯರಿಗೆ ಜಾಗ್ರತೆ ಬೇಕು, ಕೊಂಚ ಅಸಮಧಾನ ಇರಲಿದೆ, ದುರ್ಗಾ ದೇವಸ್ಥಾನಕ್ಕೆ ಕೆಂಪು ಹೂವನ್ನು ಕೊಟ್ಟು ಬನ್ನಿ

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ಧನುಸ್ಸು - ಉತ್ತಮ ಲಾಭ, ಕೃಷಿಕರಿಗೆ ಅನುಕೂಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಶುಭಲಾಭ, ವೃದ್ಧರಿಗೆ ಅನುಕೂಲದ ದಿನ, ಸಂಗಾತಿಯ ಸಹಕಾರ, ಹುರುಳಿ-ಉದ್ದು ಧಾನ್ಯ ದಾನ ಮಾಡಿ

ಕುಂಭ - ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ದೇಹದಲ್ಲಿ ತರಚುವ ಸಾಧ್ಯತೆ ಇದೆ, ಉಳಿದಂತೆ ಅನುಕೂಲದ ವಾತಾವರಣ ಇದೆ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

 

Follow Us:
Download App:
  • android
  • ios