ಇಂದಿನ ರಾಶಿ ಫಲಗಳು: ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯವಾಣಿ.
ಮೇಷ(Aries): ಪಾಲುದಾರಿಕೆ ಕೆಲಸಗಳಲ್ಲಿ ಹೆಚ್ಚಿನ ಲಾಭವಿರಲಿದೆ. ವೃತ್ತಿಯಲ್ಲಿ ಒತ್ತಡ ಎಂದಿಗಿಂತ ಹೆಚ್ಚಿರಲಿದೆ. ಆತ್ಮವಿಶ್ವಾಸದಿಂದ ನಿಭಾಯಿಸುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧೆ, ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಕ್ಕು ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.
ವೃಷಭ(Taurus): ಹೊಸ ಉದ್ಯಮ ಆರಂಭಿಸಲು ಶುಭ ದಿನವಾಗಿದೆ. ಮನೆಯಲ್ಲಿ ಎಲೆಕ್ಟ್ರಿಕ್ ಉಪಕರಣಗಳು ರಿಪೇರಿಗೆ ಬಂದು ಕಿರಿಕಿರಿಯಾಗಬಹುದು. ಹೊಸ ಸಂಘಸಂಸ್ಥೆಗಳನ್ನು ಸೇರಿಕೊಳ್ಳುವಿರಿ. ಇದರಿಂದ ಮನಸ್ಸಿಗೆ ಚೈತನ್ಯ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದೇಶದಲ್ಲಿ ಅವಕಾಶಗಳು ಸಿಗಲಿವೆ. ಕೃಷ್ಣನಿಗೆ ತುಳಸಿ, ಅವಲಕ್ಕಿ ಅರ್ಪಿಸಿ.
ಮಿಥುನ(Gemini): ಆಪ್ತರೆನಿಸಿಕೊಂಡವರ ಮಾತುಗಳು ಮನಸ್ಸಿಗೆ ನೋವು ತರುತ್ತವೆ. ಅದರಲ್ಲಿ ಸತ್ಯವಿದೆಯೇ ಪರಾಂಬರಿಸಿ. ಉದ್ಯೋಗದಲ್ಲಿ ಸಾಮಾನ್ಯ ದಿನ. ದೂರ ಪ್ರಯಾಣದಿಂದ ಕಾರ್ಯ ಸಿದ್ಧಿಯಾಗುವುದು. ಮಕ್ಕಳ ಬೆಳವಣಿಗೆ ಸಂತಸ ತರುವುದು. ರಾಮ ಧ್ಯಾನ ಮಾಡಿ.
ಕಟಕ(Cancer): ಉದ್ಯೋಗದಲ್ಲಿ ಬದಲಾವಣೆ ಗಾಳಿ ಬೀಸಲಿದೆ. ತಲೆ, ಕತ್ತು, ಬೆನ್ನು ನೋವಿಗೆ ಹೈರಾಣಾಗುವಿರಿ. ವ್ಯಾಪಾರ ಉತ್ತಮವಾಗಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವುವು. ಮೂರನೆಯವರ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಲು ಹೋಗಬೇಡಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.
ಸಿಂಹ(Leo): ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಉದರ ಸಂಬಂಧಿ ಸಮಸ್ಯೆಗಳನ್ನು ನಿರ್ಲಕ್ಷಿಸದೆ ವೈದ್ಯರಲ್ಲಿ ತಪಾಸಣೆ ಮಾಡಿಸಿ. ಪ್ರವಾಸದಿಂದ ಉಲ್ಲಾಸವಾಗುವುದು. ಸಂಗಾತಿಯ ಮಾತುಗಳು ಸಂತಸ ತರುವುವು. ನಿಮಗೆ ಕಲಿಸಿದ ಗುರು ಹಿರಿಯರನ್ನು ಸ್ಮರಿಸಿಕೊಳ್ಳಿ.
ವೃಶ್ಚಿಕ(Scorpio): ಅನುಭವಿಗಳ ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ ಸಿಗಲಿದೆ. ಉದ್ಯೋಗದಲ್ಲಿ ಹಿರಿಯರಿಂದ ಶ್ಲಾಘನೆ ಕೇಳುವಿರಿ, ಉಡುಗೊರೆಗಳು ಸಂತಸ ತರಲಿವೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು, ಬಡವರಿಗೆ ಹಣ ನೀಡಿ.
ಧನುಸ್ಸು(Sagittarius): ಕೈ ತಪ್ಪಿ ಹೋಯಿತೆಂದು ಬೇಸರ ತಂದಿದ್ದ ಯೋಜನೆಯೊಂದು ಮರಳಿ ನಿಮ್ಮ ಕೈಗೆ ಬಂದು ಸಂತಸವಾಗುವುದು. ವೃತ್ತಿರಂಗದಲ್ಲಿ ಹೆಸರು, ಪ್ರತಿಷ್ಠೆ ಹೆಚ್ಚುವುದು. ಅನಿರೀಕ್ಷಿತ ಧನಲಾಭವಿರಲಿದೆ. ಹಳದಿ ವಸ್ತ್ರ ಧರಿಸಿ ದೇವಾಲಯಕ್ಕೆ ಭೇಟಿ ನೀಡಿ.
ಮಕರ(Capricorn): ಶ್ರಮವಿಲ್ಲದೆ ಯಾವುದೂ ಸಾಧನೆಯಾಗದು. ಅದೃಷ್ಟದ ಬಲದಿಂದ ಬಂದರೂ ಅದನ್ನು ಉಳಿಸಿಕೊಳ್ಳಲಾದರೂ ಶ್ರಮ ಹಾಕಲೇಬೇಕು ಎಂಬುದನ್ನು ನೆನಪಿಟ್ಟರೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು. ಕುಟುಂಬದಲ್ಲಿ ವಾಗ್ವಾದ. ರಾಮ ನಾಮ ಸ್ಮರಣೆ ಮಾಡಿ.
ಕುಂಭ(Aquarius): ವ್ಯಾಪಾರ, ಉದ್ದಿಮೆಗಳಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಆಯ್ಕೆಗಳು ಹೆಚ್ಚಲಿವೆ. ಆದಷ್ಟು ಎಚ್ಚರದಿಂದ ಲಾಭ ನಷ್ಟ ಅಳೆದು ತೂಗಿ ಸರಿಯಾದುದನ್ನು ಆರಿಸಿ. ಉದ್ಯೋಗದಲ್ಲಿ ಹೊಸತನ ಕಾಣಬಹುದು. ಗೋ ಗ್ರಾಸ ನೀಡಿ.
ಮೀನ(Pisces): ಬ್ಯಾಂಕ್ ಕೆಲಸಗಳು ಸರಾಗವಾಗಿ ಆಗಿ ಸಮಾಧಾನ ತರಲಿದೆ. ತಂದೆಯ ಕಡೆಯಿಂದ ಆಸ್ತಿಯಲ್ಲಿ ಪಾಲು ಸಿಗಬಹುದು. ಉದ್ಯೋಗದಲ್ಲಿ ತಪ್ಪುಗಳಾಗುವ ಸಾಧ್ಯತೆ. ಅಪವಾದ ಎದುರಿಸಬೇಕಾಗಬಹುದು. ಹಕ್ಕಿಗಳಿಗೆ ನೀರು, ಧಾನ್ಯ ನೀಡಿ.
