Asianet Suvarna News Asianet Suvarna News

Daily Horoscope| ದಿನಭವಿಷ್ಯ: ಕಟಕ ರಾಶಿಯವರು ತಂದೆ ಬಂಧುಗಳಿಂದ ಅಂತರ ಕಾಯ್ದುಕೊಳ್ಳಿ!

* 20 ಅಕ್ಟೋಬರ್ 2021 ಬುಧವಾರದ ಭವಿಷ್ಯ

* ಕಟಕ ರಾಶಿಯವರು ತಂದೆ ಬಂಧುಗಳಿಂದ ಅಂತರ ಕಾಯ್ದುಕೊಳ್ಳಿ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 20 October 2021 astrological Predictions for Libra and other in Kannada pod
Author
Bangalore, First Published Oct 20, 2021, 7:12 AM IST
  • Facebook
  • Twitter
  • Whatsapp

ಗ್ರಹಗತಿ:

ವೃಷಭ ರಾಶಿಯಲ್ಲಿ ರಾಹು
ಕನ್ಯಾ ರಾಶಿಯಲ್ಲಿ ಬುಧ ಹಾಗೂ ಕುಜರಿದ್ದಾರೆ.
ತುಲಾ ರಾಶಿಯಲ್ಲಿ ರವಿ. 
ವೃಶ್ಚಿಕ ರಾಶಿಯಲ್ಲಿ ಕೇತು ಹಾಗೂ ಶುಕ್ರ ಇದ್ದಾನೆ. 
ಧನುಸ್ಸು ರಾಶಿಯಲ್ಲಿ ಮಾಂದಿ
ಮಕರ ರಾಶಿಯಲ್ಲಿ ಗುರು, ಶನಿ 
ಮೀನ ರಾಶಿಯಲ್ಲಿ ಚಂದ್ರ ಇದ್ದಾನ

ಹೀಗಿರುವಾಗ ಹನ್ನೆರಡು ರಾಶಿಗಳ ಫಲಾಫಲ ಹೇಗಿರುತ್ತದೆ? ನಿಮ್ಮ ರಾಶಿಗೇನು ಫಲ? ಇಲ್ಲಿದೆ ವಿವರ
 
ಮೇಷ(Aries):ಈ ರಾಶಿಯಿಂದ ಚಂದ್ರ ದೂರದಲ್ಲಿದ್ದಾನೆ ಆದರೆ ಪಕ್ಷದ ಬಲ ತುಂಬಾ ಚೆನ್ನಾಗಿದೆ. ಹೀಗಾಗಿ ಯಾವುದಾದರೂ ಹೊಸ ಹೂಡಿಕೆ ಮಾಡಿದರೆ ಉತ್ತಮ ಅವಕಾಶ. ನಿಮ್ಮ ರಾಶಿಯಿಂದ ಮಾಂದಿ ಭಾಗ್ಯದಲ್ಲಿಉದಯಿ ಆಗಿದ್ದಾನೆ, ಇದರಿಂದ ತಂದೆ-ಮಕ್ಕಳಲ್ಲಿ ವಿರೋಧ ಉಂಟು ಮಾಡಲಿದೆ. ತಂದೆ ಮಕ್ಕಳ ನಡುವಿನ ವಿರೋಧ ಬರುವುದು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ. ಇದರ ಪರಿಹಾರ ಮೌನ ಹಾಗೂ ಸಹನೆ, ಇದನ್ನು ನಾವು ಅಭ್ಯಾಸ ಮಾಡಬೇಕು. ಇದನ್ನು ಹೊರತುಪಡಿಸಿ ಪಿತೃದೇವತೆಗಳ ಆರಾಧನೆ ಮಾಡಿ.

ವೃಷಭ(Taurus):ನಿಮ್ಮ ರಾಶಿಯ ಅಧಿಪತಿ ಶುಕ್ರ, ಸಪ್ತಮದಲ್ಲಿ ಕೇತುಯುಕ್ತನಾಗಿದ್ದಾನೆ. ಸ್ವಲ್ಪ ಸ್ನೇಹ ಭಾವವ್ಯತ್ಯಾಸವಾಗಲಿದೆ. ವಸ್ತುನಷ್ಟ, ಕಾರಣವಿಲ್ಲದೆ ವಾಗ್ವಾದ, ಘರ್ಷಣೆಯಾಗಲಿದೆ. ಅವಶ್ಯಕತೆ ಇಲ್ಲದಿದ್ದರೂ ವಾದ ಸರಿಯಲ್ಲ. ನಿಮ್ಮ ರಾಶಿಯಿಂದ ಚಂದ್ರ ಲಾಭದಲ್ಲಿದ್ದಾನೆ ಇದು ಬಹಳ ಒಳ್ಳೆಯದು. ಸ್ತ್ರೀಯರಿಗೆ ಲಾಭ, ಬಲವಿದೆ. ಅಕ್ಕಂದಿರು, ಅಣ್ಣದಿರಿಂದ ವಿಶೇಷವಾದ ಅನುಕೂ. ವಿದೇಶದಿಂದ ಒಳ್ಳೆಯ ವಾರ್ತೆ. ಗುರು ಪ್ರಾರ್ಥನೆ ಮಾಡಿ. 

ಮಿಥುನ(Gemini):ನಿಮ್ಮ ರಾಶಿಯ ಅಧಿಪತಿಯಾಗಿರುವ ಬುಧಬಲಿಷ್ಠನಾಗಿದ್ದಾನೆ, ಸ್ವಕ್ಷೇತ್ರದಲ್ಲಿದ್ದಾನೆ. ಹೀಗಾಗಿ ಬಂಧುಗಳ ಸಹಕಾರ ಚೆನ್ನಾಗಿರುತ್ತದೆ. ಸೌಖ್ಯ, ಗೃಹ ಸೌಖ್ಯ ಚೆನ್ನಾಗಿದೆ. ಕರ್ಮ ಸ್ಥಾನದಲ್ಲಿ ಚಂದ್ರ ಇದ್ದಾನೆ. ಧನಾಧಿಪತಿ, ಧನ ಸಮೃದ್ಧಿ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆದರೆ ದಾಂಪತ್ಯದಲ್ಲಿ ಕೊಂಚ ಅಸಮಾಧಾನ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ. 

ಕಟಕ(Cancer):ಪೂಜಾ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ. ಮನಸ್ಸಿಗೆ ಸಮಾಧಾನ ನೀಡುವ ಮಾರ್ಗ ಸಿಗಲಿದೆ, ಅನುಕೂಲವಾಗಲಿದೆ. ನಿಮ್ಮ ರಾಶಿಯಲ್ಲಿ ಮಾಂದಿ ಷಷ್ಠದಲ್ಲಿದ್ದಾನೆ, ಆರೋಗ್ಯದ ಬಗ್ಗೆ ಗಮನವಿಡಿ. ತಂದೆ ಬಂಧುಗಳಿಂದ ಅಂತರ ಕಾಯ್ದುಕೊಳ್ಳಿ. ಈಶ್ವರನ ಆರಾಧನೆ ಮಾಡಿ. 

ಸಿಂಹ(Leo):ನಿಮ್ಮ ರಾಶಿಯಿಂದ ಚಂದ್ರ ಅಷ್ಟಮದಲ್ಲಿದ್ದಾನೆ. ವ್ಯಯಾಧಿಪತಿ, ಹೀಗಾಗಿ ಸ್ವಲ್ಪ ನಷ್ಟವಾಗಲಿದೆ. ಇದು ಒಳ್ಳೆಯ ವಿಚಾರಕ್ಕೇ ವಿನಿಯೋಗ ಆಗುತ್ತದೆ. ಪಂಚಮದಲ್ಲಿರುವ ಮಾಂದಿಯಿಂದ ಕೊಂಚ ಬುದ್ಧಿ ಮಂಕಾಗುತ್ತದೆ. ಆಲೋಚನಾ ಶಕ್ತಿ ಕುಂದಿ ಹೋಗುತ್ತದೆ. ಮುಖ್ಯ ಕಡತಗಳಿಗೆ ಸಹಿ ಹಾಕುವಾಗ, ಪ್ರಮಾಣ ಮಾಡುವಾಗ, ಮಾತು ಕೊಡುವಾಗ ಎಚ್ಚರದಿಂದಿರಿ. ಗುರು ಪ್ರಾರ್ಥನೆ ಮಾಡಿ. 
 
ಕನ್ಯಾ(Virgo):ನಿಮ್ಮ ರಾಶಿಯಿಂದ ಚಂದ್ರ ಸಪ್ತಮದಲ್ಲಿದ್ದಾನೆ. ಅದು ಬಹಳ ಒಳ್ಳೆಯದು. ಸಂಗಾತಿಯಿಂದ ವಿಶೇಷವಾದ ಲಾಭ ಸಿಗಲಿದೆ. ಅವರ ಮಾರ್ಗದರ್ಶನ ಅಥವಾ ಸಹಾಯ ಲಾಭ ತಂದುಕೊಡಲಿದೆ. ನಿಮ್ಮ ರಾಶಿಯಿಂದ ಚತುರ್ಥದಲ್ಲಿ ಮಾಂದಿ ಉದಯಿಯಾಗಿದೆ, ಇದರಿಂದ ಪ್ರಯಾಣದಲ್ಲಿ ತೊಂದರೆ, ಕೃಷಿ ಚಟುವಟಿಕೆಯಲ್ಲಿ ಕೊಂಚ ವಿಘ್ನ. ಕಟ್ಟಡ ನಿರ್ಮಾಣ ಮಾಡುವವರು ವಿಷ ಜಂತುಗಳ ಭಯದಿಂದ ನಲುಗಲಿದ್ದಾರೆ. ಗಣಪತಿ ಪ್ರಾರ್ಥನೆ ಮಾಡಿ. 

ತುಲಾ(Libra):ನಿಮ್ಮ ರಾಶಿಯಿಂದ ಚಂದ್ರ ಷಷ್ಠದಲ್ಲಿದ್ದಾನಡ, ಕರ್ಮಾಧಿಪತಿ. ಇಂದು ಉದ್ಯೋಗದಲ್ಲಿ ಒಂದು ಬಗೆಯ ಸಾಮಾನ್ಯ ಕಿರಿಕಿ ಇರುತ್ತದೆ. ಅಮ್ಮನ ಆರೋಗ್ಯದಲ್ಲಿ ಕೊಂಚ ಏರುಪೇರು, ಎಚ್ಚರಿಕೆ ಬೇಕು. ಶನೈಶ್ಚರನ ದೃಷ್ಟಿ ಚಂದ್ರನ ಮೇಲೆ ಹೀಗಾಗಿ ಕೊಂಚ ಎಚ್ಚರಿಕೆ ಬೇಕು. ಗಂಟಲು ಬಾಧೆ ಇರಲಿದೆ. ದುರ್ಗಾ ಕವಚ ಪಠಿಸಿ.

  
ವೃಶ್ಚಿಕ(Scorpio): ಈ ರಾಶಿಯವರಿಗಿಂದು ಮಾತಿಗೆ ಸಂಬಂಧಿಸಿದ ತೊಡಕಾಗಲಿದೆ. ಮಾತಿನಿಂದ ಕೆಲಸ ಹಾಳಾಗಲಿದೆ. ಹಣ ಕಾಸಿಗೆ ಸಂಬಂಧಿಸಿದಂತೆ, ವಿಸೇಚಷವಾಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವವರಿಗೆ ಅನಿವಾರ್ಯ ಸ್ಥಿತಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಎಚ್ಚರಿಕೆಯಿಂದ ಕೆಲಸ ಮಾಡಿ. ಉಪನ್ಯಾಸ ಮಾಡುವವರು, ಅರ್ಚಕ ವೃತ್ತಿಯಲ್ಲಿರುವವರು ಜಾಗೃತೆಯಿಂದಿರಿ. ಇಂದು ಮಾತು ಬೇರೆಯವರಿಗೆ ತೊಂದರೆಯುಂಟು ಮಾಡಲಿದೆ. ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ.  

ಧನುಸ್ಸು(Sagittarius): ನಿಮ್ಮ ರಾಶಿಯಿಂದ ಚತುರ್ಥದಲ್ಲಿರುವ ಚಂದ್ರ ಸಮಾಧಾನ ತಂದುಕೊಡುತ್ತಾನೆ. ಪ್ರಯಾಣದಲ್ಲಿ  ಸೌಖ್ಯ, ಸ್ತ್ರೀಯರಿಗೆ ಬಲ, ಕುಟುಂಬ ಸೌಖ್ಯ, ಬಂಧುಗಳ ಸಹಕಾರ, ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ನೀರಿನ ಸಂಬಂಧಿ ಕೆಲಸ ಮಾಡುವವರಿಗೆ ಉತ್ತಮ ಆದರೆ ಆರೋಗ್ಯದ ಕಡೆ ಗಮನವಿಡಿ. ಇಂದು ಆದಿತ್ಯ ಹೃದಯ ಪಠಿಸಿ.

ಮಕರ(Capricorn): ಈ ರಾಶಿಯಿಂದ ಚಂದ್ರ ತೃತೀಯದಲ್ಲಿದ್ದಾನೆ. ಇದು ಬಹಳ ಒಳ್ಳೆಯದು. ಸಹೋದರ ಸಹಕಾರ ತಂದುಕೊಡಲಿದೆ. ಶನೈಶ್ಚರನ ದೃಷ್ಟಿ ಇದೆ ಹೀಗಾಗಿ ಈಶ್ವರನ ಪ್ರಾರ್ಥನೆ ಮಾಡಿ, ಸಣ್ಣ ಪುಟ್ಟ ತೊಡಕು ನಿವಾರಣೆಯಾಗುತ್ತದೆ. ನಿಮ್ಮ ರಾಶಿಯಿಂದ ಮಾಂದಿ ದೂರವಿರುವುದರಿಂದ ಖರ್ಚು ಹೆಚ್ಚಾಗಲಿದೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. 
 
ಕುಂಭ(Aquarius): ಧನ ಸಮೃದ್ಧಿ, ಅನ್ನ ಸಮೃದ್ಧಿ, ಲಾಭ ಸಮೃದ್ಧಿಯಾಗಲಿದೆ. ಇದು ಬಹಳ ಉತ್ತಮ ದಿನ. ಪೌರ್ಣಮಿ ಪೂರ್ಣ ಪ್ರಮಾಣದ ಫಲ ತಂದುಕೊಡಲಿದೆ. ಆದರೆ ತಂದೆ ಮಕ್ಕಳಲ್ಲಿ ಕೊಂಚ ಅಸಮಾಧಾನ ಕಾಡಲಿದೆ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಮೀನ(Pisces): ದೇಹಬಲ ಚೆನ್ನಾಗಿದೆ. ವೃತ್ತಿಯಲ್ಲಿ ಕೊಂಚ ಕಿರಿ ಕಿರಿಯಾಗಲಿದೆ. ಶ್ರಮ ಜಾಸ್ತಿ ಹಾಕಿದರೂ ವಿರೋಧ ಎದುರಿಸಬೇಕಾಗುತ್ತದೆ. ಅವಕಾಶ ವಂಚನೆಯಾಗಲಿದೆ. ಲಲಿತಾ ಪ್ರಾರ್ಥನೆ ಮಾಡಿ. 

Follow Us:
Download App:
  • android
  • ios