Asianet Suvarna News Asianet Suvarna News

Daily Horoscope| ಈ ರಾಶಿಯವರು ಸ್ತ್ರೀಯರ ಜೊತೆ ವ್ಯವಹರಿಸುವಾಗ ಎಚ್ಚರ!

* 13 ಅಕ್ಟೋಬರ್ 2021 ಬುಧವಾರದ ಭವಿಷ್ಯ

* ಈ ರಾಶಿಯವರು ಸ್ತ್ರೀಯರ ಜೊತೆ ವ್ಯವಹರಿಸುವಾಗ ಎಚ್ಚರ!

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 13 October 2021 astrological Predictions for Pisces and other in Kannada pod
Author
Bangalore, First Published Oct 13, 2021, 7:13 AM IST
  • Facebook
  • Twitter
  • Whatsapp

ಗ್ರಹಗತಿ: 

ವೃಷಭ ರಾಶಿಯಲ್ಲಿ ರಾಹು
ಕನ್ಯಾ ರಾಶಿಯಲ್ಲಿ ರವಿ, ಬುಧ ಹಾಗೂ ಕುಜರಿದ್ದಾರೆ. 
ವೃಶ್ಚಿಕ ರಾಶಿಯಲ್ಲಿ ಕೇತು ಹಾಗೂ ಶುಕ್ರ ಇದ್ದಾನೆ. 
ಚಂದ್ರ ಧನುಸ್ಸು ರಾಶಿಯಲ್ಲಿದ್ದಾನೆ
ಮಕರ ರಾಶಿಯಲ್ಲಿ ಗುರು, ಶನಿ

ಹೀಗಿರುವಾಗ ಹನ್ನೆರಡು ರಾಶಿಗಳ ಫಲಾಫಲ ಹೇಗಿರುತ್ತದೆ? ನಿಮ್ಮ ರಾಶಿಗೇನು ಫಲ? ಇಲ್ಲಿದೆ ವಿವರ
 
ಮೇಷ(Aries):ಈ ರಾಶಿಯಿಂದ ಭಾಗ್ಯ ಸ್ಥಾನದಲ್ಲಿ ಚಂದ್ರ, ಮಾಧಿಯರು ಇದ್ದಾಗ ದೇವತಾ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಉಂಟಾಗುತ್ತವೆ. ಸ್ತ್ರೀಯರಿಗೆ ಪ್ರಧಾನವಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಡ್ಡಿ ಎದುರಾಗಲಿದೆ. ಕರ್ಮ ಸ್ಥಾನ ಗಮನಿಸಿದರೆ ಮಂದಗತಿಯಲ್ಲಿ ಕಾರ್ಯಕ್ರಮಗಳು ನೆರವೇರುತ್ತವೆ. ಪ್ರಧಾನವಾಗಿ ನಿಮ್ಮ ತಂದೆಯ ಬಂಧುಗಳಲ್ಲಿ ಕೊಂಚ ಕಲಹದ ವಾತಾವರಣ ಸೂಚಿಸುತ್ತದೆ, ಹೀಗಾಗಿ ಎಚ್ಚರಿಕೆಯಿಂದಿರಿ. ಇಂದು ಮಹಾಗೌರಿ ಪ್ರಾರ್ಥನೆ ಮಾಡಿ. 

ವೃಷಭ(Taurus):ನಿಮ್ಮ ರಾಶಿಯಿಂದ ಅಷ್ಟಮದಲ್ಲಿ ಚಂದ್ರ, ಮಾಂದಿಯರು ಇರುವಂತಹದ್ದು. ಸ್ತ್ರೀಯರು ಈ ದಿನ ಬಹಳ ಎಚ್ಚರದಿಂದಿರಿ. ನಿಮ್ಮ ಮುಖ್ಯ ಕಡತಗಳು, ವಸ್ತುಗಳ ಬಗ್ಗೆ ಜಾಗೃತೆ ವಹಿಸಿ. ವಾಗ್ವಾದ ಬೆಳೆಸಲು ಹೋಗಬೇಡಿ. ನಿಮ್ಮ ರಾಶಿಯಿಂದ ಈ ದಿನ ರಾಶಿ ಅಧಿಪತಿಯಾಗಿರುವವನು ಕೇತುಯುಕ್ತವಾಗಿದ್ದಾನೆ. ಹಗಾಗಿ ದಾಂಪತ್ಯದಲ್ಲಿ ಸ್ವಲ್ಪ ಅಸಮಾಧಾನವಾಗಲಿದೆ. ನಿಮ್ಮ ಮಾತು ಚೆನ್ನಾಗಿರಬಹುದು. ಆದರೆ ಸಹಾಯ ಸಿಗುವುದಿಲ್ಲ. ಹೀಗಾಗಿ ಮಹಾ ಗಣಪತಿ ಪ್ರಾರ್ಥನೆ ಮಾಡಿ.  

ಮಿಥುನ(Gemini):ನಿಮ್ಮ ರಾಶಿಯಿಂದ ಸಪ್ತಮ ಸ್ಥಾನದಲ್ಲಿ ಚಂದ್ರ, ಮಾಂದಿಯರಿದ್ದಾರೆ. ಧನಾಧಿಪತಿಯಾಗಿರುವ ಚಂದ್ರ, ಕುಟುಂಬಾಧಿಪತಿಯಾಗಿರುವವನು ಮಾಂದಿಯುಕ್ತನಾಗುವಾಗ ಕುಟುಂಬದಲ್ಲಿ ಘರ್ಷಣೆ ಸಾಮಾನ್ಯ, ಹೆಂಡತಿಯ ಮಾತಿನಿಂದ, ಗಂಡನ ಮಾತಿನಿಂದ ಕುಟುಂಬದವರ ಬಗ್ಗೆ ಮಾತುಗಳು ಬಂದಾಗ ಭಾವನೆಗಳಲ್ಲಿ ವ್ಯತ್ಯಾಸವಾಗಲಿದೆ. ನಿಮ್ಮ ರಾಶಿಯಿಂದ ಚತುರ್ಥ ಸ್ಥಾನವನ್ನು ಗಮನಿಸಿದರೆ, ಕುಜ ಲಾಭಾಧಿಪತಿಯಾಗಿರುವ ಕುಜ ಇದ್ದಾನೆ. ಹೀಗಾಗಿ ಕಟ್ಟಡ ನಿರ್ಮಾಣ, ಸೈಟ್ ಅಥವಾ ಭೂಮಿಯ ವ್ಯವಹಾರ ನಡೆಸುವವರಿಗೆ ಲಾಭ ಬರಲಿದೆ. ಫಲಾಫಲ ಮಿಶ್ರವಾಗಿದೆ. ಹೀಗಾಗಿ ಇಂದು ಪ್ರಧಾನವಾಗಿ ಶಿವ-ಶಕ್ತಿಯ ಆರಾಧನೆ ಮಾಡಿ.

ಕಟಕ(Cancer):ಈ ರಾಶಿಯಿಂದ ಚಂದ್ರ ಷಷ್ಠದಲ್ಲಿದ್ದಾನೆ. ಸ್ತ್ರೀಯರ ಆರೋಗ್ಯ ಕೊಂಚ ಏರುಪೇರಾಗುತ್ತದೆ. ಎಡವಿ ಬೀಳುವುದು, ಗಾಯಗಳಾಗುವುದು ಇಂತಹದ್ದು ಸಾಮಾನ್ಯ. ಹಳ್ಳಿಗಳಲ್ಲಿದ್ದರೆ, ಗಾಡಿ ಓಡಿಸುವಾಗ ಎಚ್ಚರಿಕೆಯಿಂದ ಓಡಾಡಿ. ತಂದೆಯ ಬಂಧುಗಳೊಂದಿಗೆ ವಾಗ್ವಾದ, ಘರ್ಷಣೆ ಸಮಾನ್ಯ. ಅವರಿಂದ ಅಂತರ ಕಾಯ್ದುಕೊಳ್ಳಿ. ಧನಾಧಿಪತಿ ತೃತೀಯದಲ್ಲಿರುವುದರಿಂದ ಸಹೋದರ ಸಹಾಯ, ತಂದೆಯಿಂದ ಸನುಕೂಲವಾಗುತ್ತದೆ, ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.  

ಸಿಂಹ(Leo):ರಾಶಿಯಿಂದ ದ್ವಿತೀಯದಲ್ಲಿರುವ ನಿಮ್ಮ ರಾಶಿಯಾಧಿಪತಿ ಬಲದಿಂದ ಕುಟುಂಬ ಸೌಖ್ಯ, ತಂದೆಯಿಂದ ಹಣಕಾಸಿನ ಸಹಾಯವಾಗಲಿದೆ. ಪಂಚಮದಿಂದ ಮಾಂದಿ ಉದಯಿಯಾಗಿದ್ದಾನೆ ಹೀಗಾಗಿ ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು, ಹೊಟ್ಟೆಯ ಸಮಸ್ಯೆ ಕಾಣಲಿದೆ. ಉದರ ಸಮಸ್ಯೆ ಕಾಣಲಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉದರಕ್ಕೆ ಸಂಬಂಧಿಸಿದ ತೊಂದರೆ ಕಾಣಲಿದೆ. ಬುದ್ಧಿ ಸ್ವಲ್ಪ ಮಂದವಾಗುತ್ತದೆ, ಹೀಗಾಗಿ ಗಾಯತ್ರಿ ಉಪಾಸನೆ ಮಾಡಿ.
 
ಕನ್ಯಾ(Virgo):ನಿಮ್ಮ ರಾಶಿಯಿಂದ ಚತುರ್ಥದಲ್ಲಿ ಚಂದ್ರ, ಮಾಂದಿಯರಿದ್ದಾರೆ. ಇದರಿಂದ ರಸ ವ್ಯಾಪಾರಿಗಳಿಗೆ ವಿಶೇಷ ಲಾಭ ತಂದುಕೊಡಲಿದೆ. ಕೃಷಿಕರಿಗೆ ಅನುಕೂಲ ಇದೆ, ಆದರೆ ವಿಘ್ನಗಳು ಕಾಣಲಿವೆ. ವಿಘ್ನ ತೊಡೆದು ಕೆಲಸ ಮಾಡಬೇಕು ನೀರಿನ ಸಮೀಪದಲ್ಲಿ ಎಚ್ಚರಿಕೆಯಿಂದ ಓಡಾಡಿ. ಅಗ್ನಿ ಸಂಬಂಧಿ ಕೆಲಸದ ವೇಳೆ ಎಚ್ಚರ. ಎಚ್ಚರ ಬೇಕು, ಅನುಕೂಲ ಇದೆ, ಯೋಚನೆ ಬೇಡ. ನಿಮ್ಮ ರಾಶಿ ಅಧಿಪತಿಯೇ ಚೆನ್ನಾಗಿದ್ದಾನೆ. ಹೀಗಾಗಿ ದೇಹಬಲ, ಉದ್ಯೋಗ ಬಲ ಚೆನ್ನಾಗಿದೆ. ಇಂದು ದುರ್ಗಾ ಕವಚ ಪಠಿಸಿ.

ತುಲಾ(Libra):ನಿಮ್ಮ ರಾಶಿಯಿಂದ ರಾಶಿ ಅಧಿಪತಿ ದ್ವಿತೀಯದ ಇದ್ದಾನೆ. ಚಂದ್ರ ಹಾಗೂ ಮಾಂದಿ ತೃತೀಯದಲ್ಲಿದ್ದಾರೆ. ಇದು ಆಹಾರದಲ್ಲಿ ವ್ಯತ್ಯಾಸ ಮುಡಬಹುದು. ಕುಟುಂಬದಲ್ಲಿ ಸ್ತ್ರೀಯರು ಘರ್ಷಣೆಗೆ ಒಳಪಡಬಹುದು ಎಚ್ಚರಿಕೆಯಿಂದಿರಿ. ನಿಮ್ಮ ರಾಶಿಯಿಂದ ತೃತೀಯದಲ್ಲಿ ಇರುವ ಚಂದ್ರ ಮಾಂದಿಯಲ್ಲಿ ನೋವು, ಸಹೋದರ ಭಾವ ಕಿರಿ ಕಿರಿ ಉಮಟು ಮಾಡಬಹುದು. ಅಚಾನಕ್ಕಾಗಿ ಬರುವ ಆತಂಕಗಳು ಸ್ತ್ರೀಯರಿಗೆ ಬಹಳ ಪ್ರಧಾನವಾಗಿದೆ. ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆಯಿಂದಿರಿ. ಲಲಿತಾ ಪ್ರಾರ್ಥನೆ ಮಾಡಿ
  
ವೃಶ್ಚಿಕ(Scorpio): ಆರೋಗ್ಯದಲ್ಲಿ ಏರುಪೇರು, ಆಹಾರದಲ್ಲಿ, ನೀರಿನಲ್ಲಿ ವ್ಯತ್ಯಾಸವಾಗಲಿದೆ. ಇದರಿಂದ ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣಗಳು ಕಾಣಬಹುದು. ಸ್ತ್ರೀಯರು ಮಾತನಾಡುವಾಗ ಮೃದುವಾಗಿರಿ. ಕಠಿಣವಾದ ಅಂಶ ಸಾಧನೆ ವೇಳೆಯಷ್ಟೇ ಬಳಸಿ. ಮಾತನಾಡುವಾಗ ಯಾರ ಬಳಿ ಮಾತನಾಡುತ್ತಿದ್ದೀರಿ ಎಂಬುವುದು ಗಮನದಲ್ಲಿರಲಿ. ಕರ್ಮ ಸ್ಥಾನ, ಅಧಿಪತಿ ಲಾಭದಲ್ಲಿರುವುದರಿಂದ ಬಹಳ ಉತ್ತಮ. ರಾಜಕಾರಣ, ಸರ್ಕಾರಿ ನೌಕರಿಯಲ್ಲಿರುವವರಿಗೆ ಬಹಳ ಲಾಭವಾಗಲಿದೆ. ಹಣ ಹಾಗೂ ಮಾತಿನ ಬಗ್ಗೆ ಎಚ್ಚರವಹಿಸಿ. ಪರಿಹಾರಕ್ಕೆ ವಾಗ್ದೇವಿ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ಧನು ರಾಶಿಯವರಿಗೆ, ನಿಮ್ಮ ರಾಶಿಯಲ್ಲಿರುವ ಚಂದ್ರ ಮಾಂದಿಯರು ಅಷ್ಠಮಾಧಿಪತಿ ಜನ್ಮಕ್ಕೆ ಬಂದಾಗ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹೆಣ್ಮಕ್ಕಳ ಆರೋಗ್ಯ ಕೊಂಚ ಅತಂತ್ರವಾಗುತ್ತದೆ. ತಲೆನೋವು, ತಲೆ ಸಿಡಿತ ಬರಬಹುದು. ಕೆಲಸ ಕಾರ್ಯ ನಡೆಯುತ್ತಿದ್ದರೂ ವೃಥಾ ಟೆನ್ಶನ್. ಇಂದು ಶಾಂತವಾಗಿರಿ. ಕರ್ಮ ಸ್ಥಾನದಲ್ಲಿ ಕರ್ಮಾಧಿಪತಿ ಹಾಗೂ ಭಾಗ್ಯಾಧಿಪತಿಗಳಿದ್ದಾರೆ. ಹೀಗಾಗಿ ಆತಂಕ ಬೇಡ. ದ್ವಿತೀಯದಲ್ಲಿ ಗುರು ಮತ್ತು ಶನಿ ಇದ್ದಾರೆ. ಹೀಗಾಗಿ ಹಿರಿಯರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದಿರಿ. ಹಿರಿಯರಿಗೆ ಗೌರವ ಕೊಡಿ. ಇಂದು ಗುರು ಪ್ರಾರ್ಥನೆ ಮಾಡಿ. 

ಮಕರ(Capricorn): ನಿಮಗಿಂದು ಖರ್ಚು ಹೆಚ್ಚು, ನಿಮ್ಮ ಸಂಗಾತಿ, ಹೆಂಡತಿ ಇವರಿಗಾಗಿ ಏನಾದರೂ ಕೊಂಡುಕೊಳ್ಳೋಣ, ಖರ್ಚು ಮಾಡುವ ಎಂಬ ಮನಸ್ಸು ಬರುತ್ತದೆ.  ಕರ್ಮ ಸ್ಥಾನ ಗಮನಿಸಿ, ಅಧಿಪತಿ ಲಾಭದಲ್ಲಿದ್ದಾನೆ. ಹೀಗಾಗಿ ಏನೂ ಯೋಚನೆ ಬೇಡ. ಉದ್ಯೋಗ ಚೆನ್ನಾಗಿರುತ್ತದೆ, ಯಾವ ಭಯವೂ ಬೇಡ. ಇಂದು ಗುರು ಪ್ರಾರ್ಥನೆಯನ್ನೇ ಮಾಡಿ. 
 
ಕುಂಭ(Aquarius): ಕುಂಭ ರಾಶಿಯವರಿಗೆ, ಚಂದ್ರ ಮಾಂದಿಯವರು ವಿಶೇಷ ಲಾಭ, ವಿದೇಶದಲ್ಲಿರುವವರು ಸ್ವಲ್ಪ ನಿಮ್ಮ ಖಾತೆಗೆ ಹಣ ಹಾಕುತ್ತಾರೆ. ಅಣ್ಣ- ಅಕ್ಕಂದಿರಿಂದ ಸಹಾಯ ಸಿಗಲಿದೆ. ಅಮ್ಮನವರ ಸನ್ನಿಧಾನಕ್ಕೆ ಹೋಗಿ ಹೂವು ಅರ್ಪಿಸಿ, ಗುರು ಚರಿತ್ರೆ ಪಠಿಸಿ.

ಮೀನ(Pisces): ಮೀನ ರಾಶಿಯವರಿಗೆ ನಿಮ್ಮ ರಾಶಿಯಿಂದ ಕರ್ಮ ಸ್ಥಾನದಲ್ಲಿರುವ ಚಂದ್ರ ಮಾಧಿಯಿಂದ ಸಮಸ್ಯೆಗಳು ಬರಬಹುದು. ಉದ್ಯೋಗ ಸ್ಥಳದಲ್ಲಿ ಕೊಂಚ ಅಸಮಾಧಾನ. ಸ್ತ್ರೀಯರ ಜೊತೆ ವ್ಯವಹರಿಸುವಾಗ ಎಚ್ಚರ. ನೀವು ಒಳ್ಳೆಯದಕ್ಕೆ ಹೇಳಿರುತ್ತೀರಿ, ಆದರೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಬಹಳ ನಾಜೂಕತೆಯಿಂದ  ಬೇಕು. ಉದ್ಯೋಗಿಗಳು ಎಚ್ಚರ. ಬಂಧುಗಳ ಸಹಾಯ ಚೆನ್ನಾಗಿರುತ್ತದೆ. ಸಂಗಾತಿಯ ಬೋಧನೆ, ಮಾರ್ಗದರ್ಶನ ಪಡೆದರೆ ಸಹಾಯ ಸಿಗಲಿದೆ. ಇಂದು ನೀವೂ ಕೂಡಾ ಗುರುಚರಿತ್ರೆ ಓದಿ. 

Follow Us:
Download App:
  • android
  • ios