ಮೇಷ: ಬಂಧುಗಳಿಂದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಸ್ತಾವಗಳು ಬರಲಿವೆ. ಒಡವೆ-ವಸ್ತ್ರಕೊಳ್ಳಲಿದ್ದೀರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ.

ವೃಷಭ: ಮೂರ್ಖರೊಂದಿಗೆ ಹೆಚ್ಚು ಮಾತನಾಡುವುದು ಬೇಡ. ಮಹಿಳೆಯರ ಪಾಲಿಗೆ ಈ ದಿನ ಹೆಚ್ಚು ಲಾಭವಾಗಲಿದೆ. ಮಕ್ಕಳ ಆರೋಗ್ಯ ವೃದ್ಧಿ

ಮಿಥುನ: ಕೆಲಸದಲ್ಲಿ ಆಸಕ್ತಿ ಇರಲಿ. ನಿಮ್ಮ ತಪ್ಪುಗಳೇ ಆತ್ಮವಿಶ್ವಾಸ ಕುಗ್ಗುವಂತೆ ಮಾಡಲಿದೆ. ವಯೋಸಹಜ ಸಮಸ್ಯೆಯಿಂದ ಹೊರಬರುವಿರಿ.

ಕಟಕ: ಮನೆಯಲ್ಲಿ ಹಬ್ಬದ ವಾತಾವರಣ. ಹೊಸ ಜವಾಬ್ದಾರಿಗಳು ಹೆಚ್ಚಾಗಲಿವೆ. ಸರಿಯಾಗಿ ಪರಿಶೀಲನೆ ಮಾಡದೇ ಏನನ್ನೂ ಒಪ್ಪದಿರಿ

ಸಿಂಹ: ಬೇಸರವಾದಾಗ ಯಾರೊಂದಿಗೂ ಮಾತನಾಡುವುದು ಬೇಡ. ಒಬ್ಬರೇ ಕುಳಿತು ಏಕಾಂತದಲ್ಲಿ ಸಂಗೀತ ಕೇಳಿ. ಚಿತ್ತ ಶುದ್ಧಿ

ವಾರ ಭವಿಷ್ಯ: ಈ ಒಂದು ರಾಶಿಯವರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ

ಕನ್ಯಾ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ತುಲಾ: ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ. ಹೊರಗಡೆ ಊಟ ಕಡಿಮೆ ಮಾಡುವಿರಿ. ಎಲ್ಲವೂ ನಿಮ್ಮಂತೆಯೇ ಆಗಬೇಕೆನ್ನುವ ಹಠ ಬೇಡ

ವೃಶ್ಚಿಕ: ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ವ್ಯವಹಾರಗಳು ಹೆಚ್ಚಲಿವೆ. ಹಣಕಾಸಿನ ವಿಚಾರದಲ್ಲಿ ಜಾಗೃತೆಯಿಂದ ನಡೆದುಕೊಳ್ಳಿ

ಧನಸ್ಸು: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಕರ: ದೇವಾಲಯಗಳ ಯಾತ್ರೆ ಹೆಚ್ಚಾಗಲಿದೆ. ಅಂದುಕೊಂಡ ಕೆಲಸಗಳು ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿವೆ

ಕುಂಭ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ಮೀನ: ವೃತ್ತಿಯಲ್ಲಿ ಆಮೆಗತಿಯ ವೇಗ ಬೇಡ. ಗುರಿ ನಿಗದಿ ಮಾಡಿಕೊಂಡು ಮುಂದೆ ಸಾಗಿ. ಪ್ರವಾಸಿ ಸ್ಥಳಗಳಿಗೆ ಸಂಸಾರ ಸಮೇತ ಭೇಟಿ.