ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಮಹಿಳೆ ಅತ್ಯಾಚಾರ ಯತ್ನಿಸಿದ ಯುವಕರಿಗೆ ಥಳಿತ: ವಿಡಿಯೋ ವೈರಲ್!

ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಮಹಿಳೆಯ ಸರಕಳವಿಗೆ ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ದೋಲ್ಪಾಡಿಯಲ್ಲಿ ನಡೆದಿದೆ.

youths  beaten by villagers in   kadaba taluk Video goes viral gow

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು (ಅ.21): ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಮಹಿಳೆಯ ಸರಕಳವಿಗೆ ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ದೋಲ್ಪಾಡಿಯಲ್ಲಿ ನಡೆದಿದೆ. ಪೊಳಲಿ ನಿವಾಸಿಗಳಾದ ರಮೀಶುದ್ಧೀನ್ (25) ಹಾಗೂ ರಫೀಕ್ (30) ಅತ್ಯಾಚಾರಕ್ಕೆ ‌ಯತ್ನಿಸಿದವರು. ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದಿದ್ದ ಆರೋಪಿಗಳು, ಮನೆಯಲ್ಲಿ ಮಹಿಳೆ ಒಬ್ಬರೇ ಇದ್ದುದನ್ನ ಗಮನಿಸಿ ಮನೆಗೆ ಹೋಗಿದ್ದಾರೆ. ಈ ವೇಳೆ ಬೆಡ್ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಚಿನ್ನದ ಸರ ಎಗರಿಸಲು ಯತ್ನಿಸಿದ್ದಾರೆ‌. ಅಲ್ಲದೇ ‌ಮಹಿಳೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾಗಿ ಮಹಿಳೆ ದೂರಿದ್ದಾರೆ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದಾಗ ಕಾರಿನಲ್ಲಿ ಪರಾರಿಯಾದ ಆರೋಪಿಗಳು, ವೇಗವಾಗಿ ಪರಾರಿಯಾಗುವ ವೇಳೆ ಕಾರು ಪಲ್ಟಿಯಾಗಿ ಅಪಘಾತ ನಡೆದಿದೆ. ಆರೋಪಿಗಳನ್ನ ಹಿಂಬಾಲಿಸುತ್ತಿದ್ದ ಸ್ಥಳೀಯರು ಪಲ್ಟಿಯಾದ ಕಾರಿನಿಂದ ಹೊರಗೆಳೆದು ಆರೋಪಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ  ಥಳಿತದ ವಿಡಿಯೋ ವೈರಲ್ ಆಗಿದೆ‌. ಮಹಿಳೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಅತ್ಯಾಚಾರ ಯತ್ನ ಕೇಸ್ ದಾಖಲಾಗಿದೆ.‌

ಕಾರು ಪಲ್ಟಿಯಾಗಿ ತಗಲಾಕಿಗೊಂಡರು!
ಮಹಿಳೆ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಆಗಮಿಸಿದಾಗ ಕಳ್ಳರು ಕಾರು ಏರಿ ಕಾಲ್ಕಿತ್ತಿದ್ದಾರೆ. ಇತ್ತ ದೋಳ್ಪಾಡಿಯಿಂದ ಪುಣ್ಚತ್ತಾರು ಕಡೆ ಸಾಗುವಾದ ಸಾರ್ವಜನಿಕರು ಅಡ್ಡಗಟ್ಟಿದ್ದಾರೆ. ಹೀಗಾಗಿ ಇಲ್ಲಿಂದ ಯೂಟರ್ನ್ ಹೊಡೆದ ಕಳ್ಳರು ನೇರವಾಗಿ ಕಾಣಿಯೂರು ಕೂಡು ರಸ್ತೆಯ ದಾರಿಯಲ್ಲಿ ಸಾಗಿದ್ದಾರೆ. ಅಲ್ಲಿ ಕೂಡ ಸಾರ್ವಜನಿಕರು ಸೇರಿದ್ದನ್ನು ಗಮನಿಸಿ  ಯರ‍್ರಾಬಿರ‍್ರಿ ಕಾರು ಚಲಾಸಿಕೊಂಡು ಹೋಗಿ ಸಾರ್ವಜನಿಕರು ಬೆನ್ನಟ್ಟುತ್ತಿದ್ದಂತೆ ಕೂಡು ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಳ್ಳರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

TEACHER RECRUITMENT SCAM: ಬಂಧಿತ 38 ಶಿಕ್ಷಕರಿಗೆ ಪೊಲೀಸ್‌ ಕಸ್ಟಡಿ

ಆದರೆ ಆಕ್ರೋಶಿತ ಸ್ಥಳೀಯರು ಇಬ್ಬರಿಗೂ ಚೆನ್ನಾಗಿ ಥಳಿಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದಾಗಿ ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ.

Ghaziabad Gang Rape: ಜಮೀನು ವಿವಾದ ಪರಿಹರಿಸಲು ಅತ್ಯಾಚಾರದ ಕಥೆ ಕಟ್ಟಿದ್ದ ಮಹಿಳೆ

ವಾರದ ಹಿಂದೆ ಕೂಡ ಒಂದು ಟೀಮ್ ಕಂಬಳಿ ಮಾರುವ ನೆಪದಲ್ಲಿ ದೋಳ್ಪಾಡಿಗೆ ಬಂದಿದ್ದರು. ಅವರು ಕೂಡ ಸಂಶಯಾಸ್ಪದವಾಗಿ ಕಾಣುತ್ತಿದ್ದರು. ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು. ಯಾರೇ ಹೊರಗಿನವರು ಅಪರಿಚಿತರು ಊರಲ್ಲಿ ವ್ಯಾಪಾರ ಮಾಡಬೇಕಾದರೆ ಪಂಚಾಯಿತಿಯ ಅನುಮತಿ ಪಡೆದೇ ಕಾಲಿಡಬೇಕು, ಅನುಮತಿ ಇಲ್ಲದವರು ವ್ಯಾಪಾರಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios