ಕಾಲೇಜಿಗೆ ರಜೆ ಹಾಕಿ ಸ್ನೇಹಿತನ ಬರ್ತ್‌ಡೇ ಆಚರಣೆಗೆ ಹೋಗಿದ್ದವ ಹೆಣವಾಗಿದ್ದಾನೆ. ಇದರೊಂದಿಗೆ ಬರ್ತಡೇ ಸಂಭ್ರಮ ಸಾವಿನಲ್ಲಿ ಅಂತ್ಯವಾಗಿದೆ.

ಆನೇಕಲ್, (ಸೆಪ್ಟೆಂಬರ್.21): ಸ್ನೇಹಿತನ ಬರ್ತ್‌ಡೇ ಆಚರಿಸಲು ಹೋದವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಸಮೀಪದ ಟಿಕೆ ಪಾಲ್ಸ್‌ನಲ್ಲಿ ನಡೆದಿದೆ.

ಬೆಂಗಳೂರಿನ ಬಿಟಿಎಮ್ ಲೇಔಟ್ ನ ದೀಪಕ್ ಕುಮಾರ್(17) ಮೃತ ದುರ್ದೈವಿ. ದೀಪಕ್ ಜಯನಗರದ ಖಾಸಗಿ ಕಾಲೇಜಿನ ಪ್ರಥಮ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಟಿಕೆ ಪಾಲ್ಸ್ ಗೆ ಸ್ನೇಹಿತರ ಜೊತೆ ಹೋಗಿದ್ದಾಗ ಅವಘಡ ಸಂಭವಿಸಿದೆ. 

ಬರ್ತ್‌ಡೇ ದಿನ ಕೇಕ್ ಕತ್ತರಿಸಿದ ತರುಣನಿಗೆ ಬಂತು ಪೊಲೀಸ್ ನೊಟೀಸ್

ಕಾಲೇಜಿಗೆ ರಜೆ ಹಾಕಿ ಸ್ನೇಹಿತನ ಬರ್ತಡೇ ಆಚರಿಸಲು ಬನ್ನೇರುಘಟ್ಟ ಸಮೀಪದ ಟಿಕೆ ಪಾಲ್ಸ್‌ಗೆ ಹೋಗಿದ್ದಾರೆ. ಸ್ನೇಹಿತನ ಬರ್ತ್‌ಡೇ ಆಚರಿಸಿದ ಬಳಿಕ ಟಿಕೆ ಪಾಲ್ಸ್ ನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ನೀರಿನಲ್ಲಿ ಮುಳುಗಿದ ಬಳಿಕ ಜೊತೆಯಲ್ಲಿದ್ದ ಇತರ ಸ್ನೇಹಿತರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪೊಲೀಸರು ಕುಡಲೇ ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಮುಳುಗಿದ್ದ ವಿಧ್ಯಾರ್ಥಿಯ ಮೃತ ದೇಹ ಹೊರತೆಗೆದಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಿನಲ್ಲಿ ಬರ್ತ್‌ಡೇ ಮೋಜು-ಮಸ್ತಿಗೆ ಹೋಗಿ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿರುವುದು ದುರಂತವೇ ಸರಿ.