ಬಾಗಲಕೋಟೆ ಹೋಳಿ ಬಣ್ಣದಾಟದಲ್ಲಿ ಜಗಳ..ಮೂವರಿಗೆ ಚಾಕು ಇರಿತ
* ಬಾಗಲಕೋಟೆ ಹೊಳಿ ಬಣ್ಣದಾಟದ ವೇಳೆ ಯುವಕರ ಮಧ್ಯೆ ವಾಗ್ವಾದ, ಗಲಾಟೆ
* ಮೂವರಿಗೆ ಚೂರಿ ಇರಿತ...ಆಸ್ಪತ್ರೆಗೆ ದಾಖಲು...
* ನಗರದ ಕುಂಬಾರ ಮಡುವಿನಲ್ಲಿ ನಡೆದ ಘಟನೆ
* ಅವಿನಾಶ, ಬಸವರಾಜ್ ಮತ್ತು ದುಗ೯ಪ್ಪ ಗಾಯಗೊಂಡವರು.
ಬಾಗಲಕೋಟೆ(ಮಾ. 21) ಹೋಳಿ (Holi) ಬಣ್ಣದಾಟದ ಕೊನೆಯ ದಿನ ಬಣ್ಣದ ಮೆರವಣಿಗೆ ವೇಳೆ ಯುವಕರ ಮಧ್ಯೆ ವಾಗ್ವಾದ ನಡೆದು ಗಲಾಟೆಯಾಗಿ ಮೂವರು ಯುವಕರ ಮೇಲೆ ಚಾಕುವಿನಿಂದ (Attack) ಹಲ್ಲೆ ನಡೆದಿರೋ ಘಟನೆ ಬಾಗಲಕೋಟೆ (Bagalakote) ನಗರದಲ್ಲಿ ನಡೆದಿದೆ.
ನಗರದ ಕುಂಬಾರ ಮಡುವಿನಲ್ಲಿ ಬಣ್ಣದ ಬಂಡಿಗಳ ಮೆರವಣಿಗೆ ನಡೆಯುತ್ತಿದ್ದ ವೇಳೆ ಬೇರೆ ಬೇರೆ ಕಾಲೋನಿಯ ಯುವಕರು ಸಹ ಬಣ್ಣದಾಟಕ್ಕೆಂದು ಆಗಮಿಸಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಯುವಕರ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಈ ಮಧ್ಯೆ ಅಲ್ಲಿದ್ದ ಯುವಕರೆಲ್ಲಾ ಸೇರುತ್ತಿದ್ದಂತೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಕೆಲವು ಯುವಕರು ಸ್ಥಳದಲ್ಲಿದ್ದ ಅವಿನಾಶ್, ಬಸವರಾಜ್ , ದುರ್ಗಪ್ಪ ಎಂಬುವವರ ಮೇಲೆ ಚೂರಿ ಇರಿತ ನಡೆಸಿದ್ದಾರೆ. ಘಟನೆ ವೇಳೆ ಮೂವರು ಯುವಕರ ಮುಖ, ಕೈ ಹಾಗೂ ಹೊಟ್ಟೆಗೆ ಗಾಯಗಳಾಗಿವೆ. ತಕ್ಷಣ ಗಾಯಗೊಂಡ ಯುವಕರ ಪೈಕಿ ಅವಿನಾಶ್, ಬಸವರಾಜ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಗಪ್ಪ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಏಕಾಏಕಿ ಮೂವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದವರು ತಕ್ಷಣ ಪರಾರಿಯಾಗಿದ್ದಾರೆನ್ನಲಾಗಿದೆ. ಇತ್ತ ಘಟನೆ ನಡೆದ ಬೆನ್ನಲ್ಲೆ ಘಟನಾ ಸ್ಥಳಕ್ಕೆ ನಗರ ಠಾಣೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದರು. ಇನ್ನು ಘಟನೆ ಬಗ್ಗೆ ಪೊಲೀಸರು ಗಾಯಾಳುಗಳಿಂದ ಮಾಹಿತಿ ಪಡೆಯುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ಮಧ್ಯೆ ನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Honey Trapping: ನಿತ್ರಾಣ ಶಿರಸ್ತೇದಾರ್ ವಿಡಿಯೋ ಮಾಡಿ ಬೇಡಿಕೆ ಇಟ್ಟ ನಿಖಿತಾ!
ಬಾಗಲಕೋಟೆ ಐತಿಹಾಸಿಕ ಹೋಳಿಗೆ ಇಂದು ವಿದ್ಯುಕ್ತವಾಗಿ ತೆರೆ ಬಿದ್ದಿತು. ದೇಶದಲ್ಲಿ ಕಲ್ಕತ್ತಾ ಹೊರತುಪಡಿಸಿದರೆ ಅತಿ ಹೆಚ್ಚು ಹೋಳಿಯಾಡುವ ನಗರ ಬಾಗಲಕೋಟೆಯಲ್ಲಿ ಕೊನೆಯ ದಿನವಾದ ಇಂದು ಬಣ್ಣದ ಬಂಡಿಗಳ ಓಡಾಟ ಕಂಡು ಬಂತು. ನಗರದ ಬಸವೇಶ್ವರ ಕಾಲೇಜ್ ಕ್ಯಾಂಪಸ್ ಬಳಿ ಸೇರಿ ಎರಡು ಭಾಗದಿಂದ ಎದುರು ಬದುರಾಗಿ ಬಣ್ಣದ ಬಂಡಿಗಳು ಬರುತ್ತಲೇ ನೆರೆದವರ ಕೇಕೆ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನು ಎದುರಾದ ಬಣ್ಣದ ಬಂಡಿಗಳಲ್ಲಿ ಪರಸ್ಪರ ಬಣ್ಣದ ಎರಚಾಟ ಕಂಡಾಗ ಬಣ್ಣದ ಬಂಡಿಗಳ ಯುದ್ದದ ನೋಟ ನೆರೆದವರ ಸಂಭ್ರಮಕ್ಕೆ ಸಾಕ್ಷಿಯಾಯಿತು. ನಿರಂತರ 3 ದಿನಗಳ ಕಾಲ ಕಿಲ್ಲಾ, ಜೈನಪೇಟ, ವೆಂಕಟಪೇಟ ಸೇರಿದಂತೆ ವಿವಿಧ ಕಾಲೋನಿಯ ಜನರೆಲ್ಲಾ ಸೇರಿ ಭಜ೯ರಿಯಾಗಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಕಳೆದ ಎರಡು ವಷ೯ದಿಂದ ಕೊರೋನಾ ಹಿನ್ನೆಲೆಯಲ್ಲಿ ಕೊಂಚ ಮಂಕಾಗಿದ್ದ ಬಾಗಲಕೋಟೆ ಹೋಳಿ ಹಬ್ಬದ ಬಣ್ಣದಾಟ ಈ ಬಾರಿ ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರದಲ್ಲಿ ವಿಶೇಷವಾಗಿ ಆಚರಣೆಯಾಗುವ ಮೂಲಕ ವಿದ್ಯುಕ್ತವಾಗಿ ತೆರೆ ಕಂಡಿತು.
ಕುಲ್ಲಕ ಕಾರಣಕ್ಕೆ ಅಟ್ಯಾಕ್: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆಯಾಗಿದ್ದು ಜಗಳ ಕೊಲೆಯಲ್ಲಿ(Murder) ಅಂತ್ಯವಾಗಿದೆ. ಕುಶಾಲನಗರ (Kushalnagar) ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಖುರೇಷಿ ಮತ್ತು ಸಹೋದರರ ಮೇಲೆ ಕೊಲೆ ಆರೋಪ ಕೇಳಿ ಬಂದಿತ್ತು.
ಎಲ್ಲರೂ ನೋಡ ನೋಡುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾರೆ. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ (CCTV)ಸೆರೆಯಾಗಿದೆ. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಆತಂಕ ಹೆಚ್ಚಿಸಿದ್ದು ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ಚಪಾತಿ ಬೆಂದಿಲ್ಲ ಎಂದು ಅಡುಗೆಯವನ ಮೇಲೆ ಏಕಾಏಕಿ ದಾಳಿ ಮಾಡಿ ಹತ್ಯೆ ಮಾಡಿದ್ದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಘಿತ್ತು. ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡುವವರೆಗೆ ಪ್ರಕರಣಗಳು ಹೋಗುತ್ತಿರುವುದು ನಿಜವಾಗಿಯೂ ಆತಂಕಕಾರಿ. ಉತ್ತರ ಭಾರತದಲ್ಲಿನ ವಾತಾಔರಣ ಇದೀಗ ದಕ್ಷಿಣದಲ್ಲಿಯೂ ನಿರ್ಮಾಣವಾಗುತ್ತಿದೆ.