ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಿರುದ್ಯೋಗಿ ಯುವಕನೊಬ್ಬ ಉದ್ಯೋಗಕ್ಕಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವ ನೆಪದಲ್ಲಿ ವಾಟ್ಸಾಪ್‌ನಲ್ಲಿ ನಗ್ನ ವಿಡಿಯೋ ಕಳುಹಿಸಿ ಸಿಕ್ಕಿಬಿದ್ದಿದ್ದಾನೆ. 25,000 ನೀಡುವಂತೆ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ, ಇಲ್ಲದಿದ್ದರೆ ವಂಚಕ ತನ್ನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಾನೆ ಎಂದು ಬೆದರಿಸಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ.

ಉತ್ತರ ಪ್ರದೇಶ (ಜೂ. 13): ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಯುವಕನೊಬ್ಬ ವೈದಯಕೀಯ ತಪಾಸಣೆ ಹೆಸರಲ್ಲಿ ತನ್ನ ನಗ್ನ ವೀಡಿಯೋವನ್ನು (Nude Video) ವಾಟ್ಸಾಪ್‌ನಲ್ಲಿ ಪಡೆದ ಅಪರಿಚಿತ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ (Social Media) ವಿಡಿಯೋ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾನೆ. ಉದ್ಯೋಗಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸುವ ನೆಪದಲ್ಲಿ ಆರೋಪಿ ತನ್ನ ನಗ್ನ ವೀಡಿಯೋ ಕೇಳಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ. 

ವಂಚಕ 25,000 ರೂಪಾಯಿ ನೀಡುವಂತೆ ಬೆದರಿಕೆ ಹಾಕುತ್ತಿದ್ದು, ಇಲ್ಲದಿದ್ದರೆ ವೀಡಿಯೊವನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ. ರಾಂಪುರ ಖಾರ್ಖಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

ನಿರುದ್ಯೋಗಿಯಾಗಿರುವ ಯುವಕ, ಉದ್ಯೋಗ ಪಡೆಯಲು ಸಾಕಷ್ಟು ಓಡಾಡಿದ್ದು, ವಿದೇಶದಲ್ಲೂ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ಸಂಬಂಧ ವಿವಿಧ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವುದಾಗಿ ಯುವಕ ತಿಳಿಸಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಯುವಕನ ಬ್ಲ್ಯಾಕ್‌ಮೇಲ್: ಜೂನ್ 9 ರಂದು ತನಗೆ ಕರೆ ಬಂದಿದ್ದು, ಕರೆ ಮಾಡಿದವರು ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ವೈದ್ಯಕೀಯ ತಪಾಸಣೆಗಾಗಿ ತನ್ನ ನಗ್ನ ವೀಡಿಯೊವನ್ನು ಕಳುಹಿಸುವಂತೆ ಕೇಳಿಕೊಂಡಿದ್ದರು ಎಂದು ಯುವಕ ಹೇಳಿದ್ದಾನೆ. ಆರೋಪಿಯು ತನ್ನ ನಗ್ನ ವೀಡಿಯೋವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಕಳುಹಿಸಿದರೆ, ವೈದ್ಯಕೀಯ ತಪಾಸಣೆಗಾಗಿ ಮನೆಯಿಂದ ಹೊರಬರಬೇಕಾಗಿಲ್ಲ ಎಂದು ಹೇಳುವ ಮೂಲಕ ತನ್ನ ನಗ್ನ ವೀಡಿಯೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸುವಂತೆ ತಿಳಿಸಿದ್ದಾನೆ. 

ಒಂದು ದಿನದ ಬಳಿಕ ಯುವಕನಿಗೆ ಮತ್ತೊಂದು ಸಂಖ್ಯೆಯಿಂದ ಕರೆ ಬಂದಿದ್ದು, ಅಪರಿಚಿತ ವ್ಯಕ್ತಿ ತನ್ನ ವೀಡಿಯೊಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ 25,000 ರೂ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾನೆ. 

"ನಾನು ವೀಡಿಯೊವನ್ನು ಡಿಲೀಟ್‌ ಮಾಡುವಂತೆ ಕರೆ ಮಾಡಿದವರಿಗೆ ಹಲವಾರು ಬಾರಿ ಮನವಿ ಮಾಡಿದ್ದೇನೆ ಆದರೆ ಅವನು ನನಗೆ ಬೆದರಿಕೆ ಹಾಕಿದ್ದಾನೆ ಮತ್ತು 25,000 ರೂ ನೀಡುವಂತೆ ಕೇಳಿ ಕರೆಯನ್ನು ಕಟ್‌ ಮಾಡಿದ್ದಾನೆ" ಎಂದು ಯುವಕ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾನೆ. ಯುವಕ ತನ್ನ ಸ್ನೇಹಿತರಿಗೆ ತನಗಾದ ಸಂಕಷ್ಟವನ್ನು ವಿವರಿಸಿ ರಾಂಪುರ ಖಾರ್ಖಾನಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾನೆ. 

ಇದನ್ನೂ ಓದಿ:ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ:18 ವರ್ಷದ ಯುವತಿ ಮೇಲೆ ಅತ್ಯಾಚಾರ: ಸ್ನೇಹಿತನಿಗೆ ಕೃತ್ಯ ಲೈವ್‌ ಸ್ಟ್ರೀಮ್‌ ಮಾಡಿದ ದುರುಳ