Asianet Suvarna News Asianet Suvarna News

ಉತ್ತರ ಕನ್ನಡ; ತಂಗಿ ಪೋನ್ ನಂಬರ್ ಕೊಡದಿದ್ದಕ್ಕೆ ಗೆಳೆಯನಿಗೆ ಇರಿದು ತಲೆ ಬೋಳಿಸಿಕೊಂಡಿದ್ದ

* 24 ಗಂಟೆಯೊಳಗೆ ಚೂರಿ ಇರಿದ ಆರೋಪಿ ಬಂಧನ

* ತಲೆ ಬೋಳಿಸಿಕೊಂಡು ತಲೆ ಮರೆಸಿಕೊಳ್ಳಲು ಯತ್ನಿಸಿದ್ದ ಆರೋಪಿ ಸುಮನ್ ಗೌಡ

* ಕೊನೆಗೂ ಅನವಟ್ಟಿಯ ಬೆನ್ನೂರಿನಲ್ಲಿ ಪೊಲೀಸರ ಬಲೆಯಲ್ಲಿ ಸಿಲುಕಿಕೊಂಡ ಆರೋಪಿ

* ಸ್ನೇಹಿತನಿಗೆ ಆತನ ತಂಗಿಯ ಪೋನ್ ನಂಬರ್ ಕೊಡು ಎಂದು ಪೀಡಿಸುತ್ತಿದ್ದ

Youth arrested for stabbing friend Siddapur Uttara Kannada mah
Author
Bengaluru, First Published Sep 14, 2021, 6:59 PM IST
  • Facebook
  • Twitter
  • Whatsapp

ಕಾರವಾರ(ಸೆ. 14)  ಚೂರಿ ಇರಿದು ನಾಪತ್ತೆಯಾಗಿದ್ದ ಆರೋಪಿಯನ್ನು  ಸಿದ್ದಾಪುರ ಪೋಲೀಸರು  24 ಗಂಟೆಯೊಳಗೆ ಬಂಧಿಸಿದ್ದಾರೆ.

ಗುರುತು ಸಿಗಬಾರದು ಎಂದು  ತಲೆ ಬೋಳಿಸಿಕೊಂಡು  ಅಡಗಿದ್ದ ಸುಮನ್ ಗೌಡ ಸೆರೆ ಸಿಕ್ಕಿದ್ದಾನೆ. ಕೊನೆಗೂ ಅನವಟ್ಟಿಯ ಬೆನ್ನೂರಿನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.  ಆರೋಪಿಗೆ ಸಹಾಯ ಮಾಡಿದ್ದ ಆತನ‌ ಗೆಳೆಯರಾದ ಅರುಣ್ ಕುಮಾರ್ ಅವರಗುಪ್ಪ, ರಾಮ್ ಕುಮಾರ್ ಕಾನಗೋಡ್, ಮಲ್ಲಿಕಾರ್ಜುನ್ ಪಾಟೀಲ್ ಬೆನ್ನೂರು ಎಂಬುವರನ್ನು ಬಂಧಿಸಲಾಗಿದೆ.

ಸಂಬಂಧಿ ಮೇಲೆ ಹಲ್ಲೆ ಮಾಡಿದ್ರಾ ರಾಜು  ತಾಳಿಕೋಟೆ? ಏನಿದು ಪ್ರಕರಣ

ಸ್ನೇಹಿತನ ತಂಗಿಯ ಫೋನ್ ನಂಬರ್ ಪಡೆಯಲು ಪೀಡಿಸುತ್ತಿದ್ದ  ಆರೋಪಿ ಪೀಡಿಸುತ್ತಿದ್ದ ಎನ್ನಲಾಗಿದೆ. ಸ್ನೇಹಿತನು ಫೋನ್ ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದಿದ್ದ. ಸಿದ್ದಾಪುರ ತಾಲೂಕಿನ ಅವರಗುಪ್ಪ  ಐಟಿಐ ಕಾಲೇಜ್ ಬಳಿ ನಿನ್ನೆ ಘಟನೆ ನಡೆದಿತ್ತು.

ಪವನ್ ರಾಜು  ನಾಯ್ಕ್ ಬಳ್ಳಟ್ಟೆ ಎಂಬಾತನಿಗೆ ಚಾಕು ಇರಿದಿದ್ದ ಆರೋಪಿ ನಾಪತ್ತೆಯಾಗಿದ್ದ. ಪವನ್‌ಗೆ ಅವಾಚ್ಯ ಶಬ್ದದಿಂದ ಬೈದು ಕುತ್ತಿಗೆಯನ್ನು ಬಗ್ಗಿಸಿ ಚಾಕುವಿನಿಂದ ಹೊಟ್ಟೆಯ ಬಲಭಾಗಕ್ಕೆ ಎರಡು ಬಾರಿ ಇರಿದಿದ್ದ ಈ ಘಟನೆ  ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಯಳು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Follow Us:
Download App:
  • android
  • ios