ಫ್ರಾನ್ಸ್ ದೇಶದ ಪ್ಯಾರೀಸ್ ನಗರದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಾರ್ಗ ಮಧ್ಯೆ ವಿಮಾನದ ದ್ವಾರ ತೆರೆಯಲು ಪ್ರಯತ್ನಿಸಿದ ಆರೋಪದಡಿ ಓರ್ವ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.22) : ಫ್ರಾನ್ಸ್ ದೇಶದ ಪ್ಯಾರೀಸ್ ನಗರದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಾರ್ಗ ಮಧ್ಯೆ ವಿಮಾನದ ದ್ವಾರ ತೆರೆಯಲು ಪ್ರಯತ್ನಿಸಿದ ಆರೋಪದಡಿ ಓರ್ವ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ರಾಜಮಂಡ್ರಿ ಮೂಲದ ವೆಂಕಟ್ ಮೋಹಿತ್(29) ಬಂಧಿತ. ಆರೋಪಿಯು ಜು.15ರಂದು ಪ್ಯಾರೀಸ್‌ನಿಂದ ಏರ್ ಫ್ರಾನ್ಸ್ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ. ವಿಮಾನ ಬೆಂಗಳೂರು ತಲುಪಲು ಇನ್ನು ನಾಲ್ಕು ತಾಸು ಇರುವಾಗ ಏಕಾಏಕಿ ವಿಮಾನದ ಹಿಂಬದಿಯ ಎಡಭಾಗದ ದ್ವಾರದ ತೆರೆಯಲು ಪ್ರಯತ್ನಿಸಿದ್ದಾನೆ.
ಈ ಸಂಬಂಧ ವಿಮಾನದ ಸಿಬ್ಭಂದಿ ನೀಡಿದ ವರದಿ ಮೇರೆಗೆ ಏರ್ ಫ್ರಾನ್ಸ್ ಇಂಡಿಯಾದ ಡ್ಯೂಟಿ ಮ್ಯಾನೇಜರ್ ಶೀಬಾ ಸ್ವಾಮೀನಾಥನ್ ಅವರು ವೆಂಕಟ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸಿಕ್ತು 4 ಕೋಟಿಯ ಚಿನ್ನದ ಬಿಸ್ಕತ್: ವ್ಯಕ್ತಿ ಸೆರೆ
