ಮುಂಬೈ (ಡಿ,. 17)  ಕೆಲಸಕ್ಕೆ ಹೋಗುವಾಗ ಕಿಕ್ಕಿರಿದು ತುಂಬಿದ್ದ ಜನರಿದ್ದ ರೈಲಿನಿಂದ ಬಿದ್ದು ಯುವತಿ ದಾರುಣ ಸಾವಿಗೀಡಾಗಿದ್ದಾರೆ.

ಚಾರ್ಮಿ ಪ್ರಸಾದ್ (22)  ಮುಂಬೈನಲ್ಲಿ ಮೃತಪಟ್ಟ ಯುವತಿ. ಚಾರ್ಮಿ ಕಲ್ಯಾಣನಿಂದ ಛತ್ರಪತಿ ಶಿವಾಜಿ ಟರ್ಮಿನಲ್‍ಗೆ ಹೋಗಲು  ರೈಲು ಹತ್ತಿದ್ದರು. ಈ ವೇಳೆ ರೈಲಿನಲ್ಲಿ ಹೆಚ್ಚು ಜನವಿದ್ದರು. ಅಲ್ಲದೆ ಚಾರ್ಮಿಗೆ ಬೋಗಿಯೊಳಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆ ಗೇಟ್ ಬಳಿ ನಿಂತು ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಏಕಾಏಕಿ ಆಕೆ ರೈಲಿನಿಂದ ಕೆಳಗೆ ಬಿದ್ದ ಚಾರ್ಮಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

 ಘಾಟ್ಕೋಪರ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಚಾರ್ಮಿ ಮೊದಲು ಮಧ್ಯಾಹ್ನದ ಶಿಫ್ಟ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಸೋಮವಾರದಿಂದ ಅವರ ಕೆಲಸದ ಅವಧಿ ಬದಲಾಗಿತ್ತು. 

ರೈಲಿನಲ್ಲಿ ಪಬ್ ಜಿ ಆಡುತ್ತ ಕೆಮಿಕಲ್ ಕುಡಿದು ಪ್ರಾಣ ಕಳ್ಕೊಂಡ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿ ಸತೀಶ್ ಪವಾರ್ ಪ್ರತಿಕ್ರಿಯಿಸಿ, ಈ ಘಟನೆ ಸೋಮವಾರ ಬೆಳಗ್ಗೆ ಕೇಂದ್ರ ರೈಲ್ವೆ ಉಪನಗರ ಮಾರ್ಗದಲ್ಲಿ ನಡೆದಿದೆ. ರೈಲಿನಿಂದ ಕೆಳಗ್ಗೆ ಬಿದ್ದ ಪರಿಣಾಮ ಯುವತಿಯ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಯಿತು ಎಂದಿದ್ದಾರೆ.

ಈ ಮಾರ್ಗದಲ್ಲಿ ರೈಲುಗಳ ಸಂಖ್ಯೆ ತುಂಬಾ ಕಡಿಮೆ ಇದ್ದು ಸಂಖ್ಯೆ ಹೆಚ್ಚಳ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.