ನವದೆಹಲಿ(ಡಿ. 12)  ಪಬ್ ಜಿ ಆಡುತ್ತಿದ್ದ ಮಹಾನುಭಾವ ನೀರು ಎಂದು ಭಾವಿಸಿ ರಾಸಾಯನಿಕ ಕುಡಿದು ಸಾವನ್ನಪ್ಪಿದ್ದಾನೆ.

ರೈಲಿನಲ್ಲಿ ಪ್ರಯಾಣಿಸುತ್ತ ಪಬ್ ಜಿ ಆಡುತ್ತಿದ್ದ. 20 ವರ್ಷದ ಸೌರಭ್ ತನ್ನ ಸ್ನೇಹಿತನೊಂದಿಗೆ ಪಬ್ ಜಿ ಆಡಿತ್ತಿದ್ದ. ಈ ವೇಳೆ  ತಮ್ಮ ಬ್ಯಾಗ್ ನಲ್ಲಿ ಇರಿಸಿಕೊಂಡಿದ್ದ ರಾಸಾಯನಿಕವನ್ನು ನೀರೆಂದು ಭಾವಿಸಿ ಕುಡಿದಿದ್ದಾನೆ.

ಸ್ವರ್ಣ ಜಯಂತಿ ರೈಲಿನಲ್ಲಿ ದುರ್ಘಟನೆ ನಡೆದು ಹೋಗಿದೆ. ಗ್ವಾಲಿಯರ್ ನ ಚಂದ್ರಬಾಲಿ ನಾಕಾದ ಝಾನ್ಸಿ ರಸ್ತೆಯ ನಿವಾಸಿ ಸೌರಬ್ ಪಬ್ ಜಿ ಆಡುವುದರಲ್ಲಿ ತಲ್ಲೀನನಾಗಿದ್ದ. ಅಸ್ವಸ್ಥಗೊಂಡವನಿಗೆ ರೈಲಿನಲ್ಲಿ ಯಾವುದೆ ವೈದ್ಯಕೀಯ ಸಹಾಯ ಸಿಕ್ಕಿಲ್ಲ. ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಆತನ ಶವವನ್ನು ಬೆಳಗ್ಗೆ ಆರು ಗಂಟೆಗೆ ತರಲಾಯಿತು.

ಬೆಳಗಾವಿ: ಪಬ್ ಜಿ ಗೆ ಹಣ ಕೊಡದ್ದಕ್ಕೆ ತಂದೆಯನ್ನೇ ಕೊಚ್ಚಿದ ಹುಚ್ಚು ಮಗ

ದೆಹಲಿಗೆ ಪ್ರಯಾಣ ಮಾಡುತ್ತಿದ್ದ ಸೌರಬ್ ಮತ್ತು ಆತನ ಸ್ನೇಹಿತ ಸಂತೋಷ್ ಶರ್ಮಾ ಪಬ್ ಜಿ ಆಡಲು ಆರಂಭಿಸಿದ್ದಾರೆ. ಪಬ್ ಜಿ ಆಡುವುದರಲ್ಲಿ ಬ್ಯುಸಿಯಾಗಿದ್ದ ಸೌರಬ್ ತನ್ನ ಬ್ಯಾಗ್ ನಿಂದ ಬಾಟಲ್ ತೆಗೆದು ಅದರಲ್ಲಿ ಇರುವುದನ್ನು ಕುಡಿದಿದ್ದಾನೆ. ಅದು ನೀರೋ ಅಥವಾ ರಾಸಾಯನಿಕವೋ ಎನ್ನುವ ವಿಚಾರ ಆ ಕ್ಷಣಕ್ಕೆ ಅವನಿಗೆ ಗೊತ್ತಾಗಿಲ್ಲ.

ಇದಾದ ಮೇಲೆ ಅಸ್ವಸ್ಥಗೊಂಡ ಸೌರಬ್ ಚೈನ್ ಎಳೆದು ರೈಲು ನಿಲ್ಲಿಸಿದ್ದಾನೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ವಿಚಾರ ಗೊತ್ತಾಗಿದೆ. ಆದರೆ ಯಾವುದೇ ವೈದ್ಯಕೀಯ ಉಪಚಾರ ರೈಲಿನಲ್ಲಿ ಸಾಧ್ಯವಾಗಿಲ್ಲ.

ಅನೇಕ ಆತ್ಮಹತ್ಯೆಗಳಿಗೂ ಕಾರಣವಾಗಿರುವ ಪಬ್ ಜಿ ಬ್ಯಾನ್ ಮಾಡಬೇಕು ಎಂಬ ಚರ್ಚೆಯೂ ಒಂದು ಕಡೆ ಇದೆ. ರೈಲಿನಲ್ಲಿ ಯಾವ ಕಾರಣಕ್ಕೆ ವೈದ್ಯಕೀಯ ಸೇವೆ ಸಿಕ್ಕಿಲ್ಲ ಎಂಬುದನ್ನು ಕೇಂದ್ರ ರೈಲ್ವೆ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಸಾಮಾಜಿಕ ಹೋರಾಟಗಾರರಿಂದ ಕೇಳಿ ಬಂದಿದೆ.