*   ಬೆಳಗಾವಿ ತಾಲೂಕಿನ ಮುತಗಾ ಬಳಿ ನಡೆದ ಘಟನೆ *  ಹೊಲದಲ್ಲಿರುವ ಬಾವಿಯಲ್ಲಿ ರುಂಡ ಇಲ್ಲದ ಯುವಕನ ಮೃತದೇಹ ಪತ್ತೆ•  ರುಂಡಕ್ಕಾಗಿ ಪೊಲೀಸರ ಶೋಧ ಕಾರ್ಯ 

ಬೆಳಗಾವಿ(ಜು.05): ಜಮೀನಿನ ಬಾವಿಯೊಂದರಲ್ಲಿ ರುಂಡವಿಲ್ಲದ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಬಳಿ ಇಂದು(ಮಂಗಳವಾರ) ನಡೆದಿದೆ. ಸುಮಾರು 30 ವರ್ಷದ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುತಗಾ-ಮುಚ್ಚಂಡಿ ಗ್ರಾಮದ ಮಾರ್ಗ ಮಧ್ಯೆ ಇರುವ ರೈತ ಸುನೀಲ್ ಅಷ್ಟಗೇಕರ್ಎಂಬುವರಿಗೆ ಸೇರಿದ ಜಮೀನಿನಲ್ಲಿ ಇರುವ ಬಾವಿಯಲ್ಲಿ ರುಂಡ ಇಲ್ಲದ ದೇಹ ತೇಲುತ್ತಿರುವುದನ್ನು ಕಂಡು ಮಾರಿಹಾಳ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ

ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಬಾವಿಯ ಸುತ್ತಮುತ್ತ ಯುವಕನ ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಯುವಕನ ಕೊಲೆ ಮಾಡಿ ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಯುವಕನ ರುಂಡ ಕತ್ತರಿಸಿ ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಮೃತದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಮುಂದುವರಿದಿದೆ.