*   ಎರಡು ಗುಂಪುಗಳ ನಡುವೆ ಜಗಳಕ್ಕೆ ಓರ್ವ ಬಲಿ*  ಸಹೋದರರ ಬಂಧನ*  ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಜಾಲ ಬೀಸಿದ ಪೊಲೀಸರು 

ಬೆಂಗಳೂರು(ಮಾ.13):  ಯುವತಿಯನ್ನು ಚುಡಾಯಿಸಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಪಿ.ಅಗ್ರಹಾರ ನಿವಾಸಿ ಥಾಮಸ್‌ (19) ಕೊಲೆಯಾದ ಯುವಕ. ಶುಕ್ರವಾರ ರಾತ್ರಿ ವಿಜಯನಗರ ಪೈಪ್‌ಲೈನ್‌ ರಸ್ತೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಕೊಲೆ ಸಂಬಂಧ ಸೂರ್ಯ ಮತ್ತು ಆತನ ಸಹೋದರ ಚಂದನ್‌ನನ್ನು ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ. ಇನ್ನೂ ಮೂರು ಮಂದಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ(Arrest) ಬಲೆ ಬೀಸಲಾಗಿದೆ.

ಆರೋಪಿಗಳು(Accused) ಹಲವು ದಿನಗಳಿಂದ ಥಾಮಸ್‌ ಮನೆ ಸಮೀಪದ ಯುವತಿಯೊಬ್ಬಳನ್ನು(Girl) ಚುಡಾಯಿಸುತ್ತಿದ್ದರು. ಪ್ರತಿ ನಿತ್ಯ ಮನೆ ಬಳಿ ಸಿಗರೆಟ್‌ ಸೇದಿಕೊಂಡು ಯುವತಿಯನ್ನು ರೇಗಿಸುತ್ತಿದ್ದರು. ಇದನ್ನು ಗಮನಿಸಿದ್ದ ಥಾಮಸ್‌ ಆರೋಪಿಗಳ ಪೋಷಕರಿಗೆ ಈ ವಿಚಾರ ತಿಳಿಸಲು ಶುಕ್ರವಾರ ಸಂಜೆ ತನ್ನ ಕೆಲ ಸ್ನೇಹಿತರೊಂದಿಗೆ ವಿಜಯನಗರ ಪೈಪ್‌ಲೈನ್‌ ರಸ್ತೆಯಲ್ಲಿರುವ ಆರೋಪಿಗಳ ಮನೆಗೆ ತೆರಳಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಮದುವೆ ಬಳಿಕವೂ ಮುಂದುವರೆದ ಅಕ್ರಮ ಸಂಬಂಧ, ಮನೆಯವರೊಂದಿಗೆ ಸೇರಿ ಪ್ರೇಮಿಯ ಹತ್ಯೆ!

ಈ ಸಮಯದಲ್ಲಿ ಆರೋಪಿಗಳು ಚಾಕುವಿನಿಂದ ಥಾಮಸ್‌ನ ಎದೆ ಹಾಗೂ ಪಕ್ಕೆಲುಬಿಗೆ ಹಲವು ಬಾರಿ ಇರಿದು ಪರಾರಿಯಾಗಿದ್ದಾರೆ. ಇದರಿಂದ ಕುಸಿದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಥಾಮಸ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರೀತಿಸಿ ಮದ್ವೆಯಾದ ಹೆಂಡ್ತಿ ಮೇಲೆ ಅನುಮಾನ, ಅದೇ ಅನುಮಾನದಿಂದಲೇ ಪತಿ ಅಂದರ್

ಹಾಸನ: ಪ್ರೀತಿಸಿ ಮದುವೆಯಾದವಳಿಗೆ(Love Marriage) ಪತಿಯೇ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ಮಾ.08 ರಂದು ನಡೆದಿತ್ತು.

ಮರಡಿಕೆರಿ ಗ್ರಾಮದ ಸತೀಶ್ ಎಂಬಾತ ಪತ್ನಿ ಭವ್ಯ(22) ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಲಿನ ಅನುಮಾನದಿಂದ ಆಕೆ ಮಲಗಿದ್ದ ವೇಳೆ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಮಹಿಳೆ ದೇಹ ಶೇಕಡಾ 70 ರಷ್ಟು ಸುಟ್ಟು ಹೋಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಳು.

Illicit Relationship ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ

ತನಿಖೆ ವೇಳೆ ಬಯಲಾಯ್ತು ಪತಿ ನೀಚ ಕೃತ

ಹೌದು...ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿಕೆ ಕೊಡಿಸಿದ್ದ. ಇದರಿಂದ ಪೊಲೀಸರು ಅನುಮಾನ ಬಂದಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆಗ ಮಹಿಳೆಗೆ ಬೆಂಕಿ ಹಚ್ಚಿವುದಕ್ಕೆ ಕಾರಣ ಬಟಾಬಯಲಾಗಿತ್ತು.
ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಸತೀಶ್ ಮತ್ತು ಭವ್ಯ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷದಲ್ಲಿ ಪತ್ನಿ ಮೇಲೆ ಪತಿಗೆ ಅನುಮಾನ ಹುಟ್ಟುಕೊಂಡಿದೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಮಾರ್ಚ್ 5 ರ ಶನಿವಾರ ಪತ್ನಿ ಹತ್ಯೆಗೆ ಸತೀಶ್ ಸಂಚು ರೂಪಿಸಿದ್ದಾನೆ. ಪತ್ನಿ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಅದೃಷ್ಟವಶಾತ್ ಆಕೆ ಉಸಿರಾಡುತ್ತಿದ್ದು ಆಕೆ ಬದುಕುಳಿದಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಬಿದ್ದಿದ್ದಾಗಿ ಹೇಳಿಕೆ ನೀಡುವಂತೆ ಪತ್ನಿಯನ್ನು ಬೆದರಿಸಿ ಹೇಳಿಕೆ ಕೊಡಿಸಿದ್ದಾನೆ.

ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಬಗ್ಗೆ ಭವ್ಯ ಹೇಳಿಕೆ ನೀಡಿದ್ದರು. ಆದ್ರೆ ಘಟನೆ ಬಗ್ಗೆ ಅನುಮಾನದಿಂದ ತನಿಖೆ ನಡೆಸಿದಾಗ ಪೊಲೀಸರಿಗೆ ಘಟನೆ ಹಿಂದಿನ ಮರ್ಮದ ಸತ್ಯ ತಿಳಿದಿದೆ. ಅನುಮಾನದ ಪತಿಯ ರಹಸ್ಯ ಬಯಲಾಗಿದೆ. ಸದ್ಯ ಆರೋಪಿ ಪತಿ ಸತೀಶ್ನನ್ನ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.