Illicit Relationship ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ

* ಯುವಕನ ಮಿಸ್ಸಿಂಗ್ ಕೇಸ್​ಗೆ ತಿರುವು
* ತನ್ನ ಕಾಮದಾಟ ಬಯಲಾಗಬಾರದೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ
* ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ಈ ಘಟನೆ 

a mother who murdered her son for questioning illicit relationship at Koppal rbj

ಕೊಪ್ಪಳ, (ಮಾ.05): ಕೊಪ್ಪಳ ಜಿಲ್ಲೆಯ (Koppal District) ಯುವಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿರುವು ಸಿಕ್ಕಿದ್ದು, ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ತಾಯಿ ಕೊಲೆ(Murder)  ಮಾಡಿರುವುದು ಬೆಳಕಿಗೆ ಬಂದಿದೆ.

ಹೌದು..  ಗ್ರಾಪಂ ಸದಸ್ಯ, ಮಗನೊಂದಿಗೆ ಸೇರಿ ತನ್ನ ಸಣ್ಣ ಮಗನನ್ನೆ ಕೊಲೆ ಮಾಡಿ ತಾಯಿ ಹೂತು ಹಾಕಿದ್ದಾಳೆ. ಅನೈತಿಕ ಸಂಭಂದಕ್ಕೆ ಅಡ್ಡಿಯಾಗುತ್ತಾನೆಂದು‌ ತಾಯಿಯೇ ಮಗನನ್ನು ಕೊಲೆ ಮಾಡಿದ್ದಾಳೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

Murder In Belagavi ಇಬ್ಬರನ್ನು ಬಿಟ್ಟು ಮೂರನೇ ಮದ್ವೆಯಾದ, ಆಕೆಯಿಂದಲೇ ಜೀವ ತೆತ್ತ

ಮ್ಯಾದರಡೊಕ್ಕಿ ಗ್ರಾಮದ ಯುವಕ ಬಸವರಾಜ್ ದೋಟಿಹಾಳ ಜನವರಿ 16 ರಂದು ಕಾಣೆಯಾಗಿದ್ದ. ಬಗ್ಗೆ ತಾವರಗೇರಾ ಠಾಣೆಯಲ್ಲಿ ಬಸವರಾಜ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಸದ್ಯ ಶಾಕ್ ಆಗಿದ್ದು, ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿ ಹೂತು‌ ಹಾಕಿರುವುದು ಬೆಳಕಿಗೆ ಬಂದಿದೆ.

ಅಮರಮ್ಮ ಹಾಗೂ ಗ್ರಾಪಂ ಸದಸ್ಯ ಅಮರೇಶ್ ಕಂದಗಲ್ ನಡುವೆ ಅನೈತಿಕ ಸಂಭಂದ (illicit relationship) ಇತ್ತು. ಇದಕ್ಕೆ ಅಮರಮ್ಮ ಮಗ ಬಸವರಾಜ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸದ್ಯ, ಅಮರಮ್ಮ,ಅಮರೇಶ್ ಕಂದಗಲ್ ಹಾಗೂ ಅಮರೇಶ್ ದೋಟಿಹಾಳನನ್ನ  ಪೊಲೀಸರು ಬಂಧಿಸಿದ್ದಾರೆ. 

ಕೊಲೆ ಆರೋಪಿ ಗ್ರಾಪಂ ಸದಸ್ಯನ ಸಮ್ಮುಖದಲ್ಲಿ ಶವ ಹೊರತಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಂತಹ ನೀಚ ತಾಯಿಯು ಇರುತ್ತಾಳೆ ಎಂಬುವುದು ಅಸಾಧ್ಯವಾದರು. ನಂಬಲೇಕಾದ ಘಟನೆ ನಡೆದಿದೆ.

ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ತಾತ
ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ.... ತೀಟೆ ತೀರದ ತಾತನ ಕಥೆ ಕೇಳಿ  ಪೊಲೀಸರೇ (Benghaluru Police) ಥಂಡಾ ಹೊಡೆದಿದ್ದಾರೆ.  ಹೆಣ್ಣು ಮಕ್ಕಳ ಚಟಕ್ಕೆ (Prostitution) ಬಿದ್ದು ಕಳ್ಳತನಕ್ಕೆ ಇಳಿದಿದ್ದ ವೃದ್ಧ ಸೆರೆ ಸಿಕ್ಕಿದ್ದಾನೆ.

ರಮೇಶ್ (70) ಬಂಧಿತ ವೃದ್ಧ,  ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆ ವೇಳೆ  ಈತನ ಅಸಲಿತನ ಬಟಾಬಯಲಾಗಿದೆ. ಸಿಸಿಟಿವಿ (CCTV) ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು.  ಬಳಿಕ ವಿಚಾರಣೆ ವೇಳೆ ಆರೋಪಿಯ ಹೆಣ್ಣು ಮಕ್ಕಳ ಚಟ ಬಯಲಿದೆ ಬಂದಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆ ಕಡಿಮೆ ಆಗಿರಲಿಲ್ಲ!

ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಕಳ್ಳತನಕ್ಕೆ ತಾತ ಇಳಿದಿದ್ದ. ಮೂಲತಃ ಚಿಕ್ಕಮಗಳೂರಿನ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದ. ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೋ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದ್ದ.

ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಶುರು ಹಚ್ಚಿಕೊಂಡಿದ್ದ. ಸುದ್ದುಗುಂಟೆ ಪಾಳ್ಯ ಹಾಗೂ ಮೈಕೊಲೇಔಟ್ ಠಾಣೆಗಳಲ್ಲಿ ಪ್ರತ್ಯೇಕ  ಕಳ್ಳತನ ಮಾಡಿದ್ದ. ಸಿಸಿಟಿವಿ ಆಧರಿಸಿ ಆರೋಪಿ ಬಂಧಿಸಿರುವ ಸುದ್ದುಗುಂಟೆ ಪೊಲೀಸರು ತಾತನಿಂದ  170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಮಸಾಜ್ ಮಾಡಿಸಿಕೊಳ್ಳಲು ದರೋಡೆ ಮಾಡ್ತಿದ್ರು:   ಮಸಾಜ್ ಪಾರ್ಲರ್ ಗೆ (Massage parlor) ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ.  ಮಾಡ್ತಾ ಇದ್ದಿದ್ದು(Robbery) ಕಳ್ಳತನ..ಆದ್ರೆ ಮಾಡ್ತಿದ್ದ ಜೀವನ ಮಾತ್ರ ರಾಯಲ್ ಆಗಿತ್ತು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದವರು ಸೆರೆ ಸಿಕ್ಕಿದ್ದರು.

Latest Videos
Follow Us:
Download App:
  • android
  • ios