Chamarajanagar: ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ ಕೈ ಕೊಟ್ಟ ಯುವಕ
ಮೇಲ್ವರ್ಗದ ಯುವಕನೊಬ್ಬ ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ ಕೈ ಕೊಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಕೋಣನಕೆರೆಯಲ್ಲಿ ನಡೆದಿದೆ.
ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮೇ.05): ಮೇಲ್ವರ್ಗದ ಯುವಕನೊಬ್ಬ ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ (Love) ಕೈ ಕೊಟ್ಟಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕು ಕೋಣನಕೆರೆಯಲ್ಲಿ ನಡೆದಿದೆ. ಅದು ಎರಡು ವರ್ಷಗಳ ಹಿಂದೆ ಗ್ರಾಮದ ಜಾತ್ರೆಯಲ್ಲಿ ಆಗಿದ್ದ ಭೇಟಿ. ಆ ಒಂದು ಭೇಟಿಯೇ ಪ್ರೀತಿ ಮೊಳಕೆಯೊಡಲು ಕಾರಣವಾಯ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದ ಆ ಪ್ರೇಮಿಗಳು ಸ್ವರ್ಗಕ್ಕೆ ಹತ್ತಿರ ಎಂಬಂತೆ ಓಡಾಡಿದರು. ಆದರೆ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದೆ ತಡ ಹುಡುಗ ಎಸ್ಕೇಪ್ (Escape) ಆಗಿದ್ದಾನೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಕೋಣನಕೆರೆ ಗ್ರಾಮದ ಈಕೆ ವಸಂತಾ. ಬುಡಕಟ್ಟು ಸೋಲಿಗ ಸಮುದಾಯಕ್ಕೆ ಸೇರಿದ ಈ ಯುವತಿ ಎರಡು ವರ್ಷಗಳ ಹಿಂದೆ ಪಕ್ಕದ ಊರು ಪೊನ್ನಾಚಿಯ ಪರಂ ಜ್ಯೋತಿ (25) ಎಂಬಾತನ ಪ್ರೇಮಪಾಶಕ್ಕೆ ಬಿದ್ದು ಪ್ರೇಮಲೋಕದಲ್ಲಿ ತೆಲಾಡಿದ ಜೋಡಿಗಳು. ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತೆ ಪ್ರೀತಿಸಿದವರು. ಪ್ರೀತಿ ಕುರುಡು, ಪ್ರೀತಿಗೆ ಯಾವುದೆ ಜಾತಿ ಧರ್ಮವಿಲ್ಲ ಎಂಬಂತೆ ಪ್ರೀತಿಸಿ ಸುತ್ತಾಡಿದವರು. ಮದುವೆ ವಿಚಾರ ಬಂದಾಗ ಇದ್ದಕ್ಕಿದ್ದ ಹಾಗೆ ಎಸ್ಕೇಪ್ ಆದ ಪ್ರೇಮಿ ಈಗ ನ್ಯಾಯಕ್ಕಾಗಿ ಪ್ರೇಯಸಿ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾಳೆ.
Mangaluru ವಿದ್ಯಾರ್ಥಿನಿ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ: ವಿಎಚ್ ಪಿ ಆರೋಪ
ನಿನ್ನನ್ನೆ ಮದ್ವೆ ಆಗ್ತಿನಿ, ನನ್ನದು ಪವಿತ್ರ ಪ್ರೇಮ ಎಂದೆಲ್ಲ ರೀಲು ಬಿಟ್ಟಿದ್ದ ಪರಂ ಜ್ಯೋತಿಯ ಮಾತಿಗೆ ಮರುಳಾಗಿದ್ದ ವಸಂತಾ ಮಾನಸಿಕವಾಗಿ ಹಾಗು ದೈಹಿಕವಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ. ಹೇಗಿದ್ದರೂ ಮದ್ವೆ ಆಗೋ ಹುಡುಗ ಅಂತ ಆತನೊಂದಿಗೆ ಎಲ್ಲಾ ಕಡೆ ಸುತ್ತಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಆದರೆ ಈಗ ಪ್ರಿಯಕರ ಪರಂ ಜ್ಯೋತಿ ಮದುವೆಗೆ ನಿರಾಕರಿಸಿದ್ದು ವಸಂತಾ ಬಾಳಲ್ಲಿ ಕತ್ತಲು ಆವರಿಸಿದೆ. ಬೆಂಗಳೂರಿನಲ್ಲಿ ಕಾರು ಡ್ರೈವರ್ ಆಗಿರುವ ಪೊನ್ನಾಚಿ ಗ್ರಾಮದ ಯುವಕ ಪರಂ ಜ್ಯೋತಿ ಮೇಲ್ವರ್ಗಕ್ಕೆ ಸೇರಿದ್ದು ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೀತಿಸಿರುವ ವಿಷಯ ತಿಳಿದ ಆತನ ಮನೆಯವರು ಬೇರೆ ಹುಡುಗಿ ನೋಡಿದ್ದು, ನಿಶ್ಚಿತಾರ್ಥ ಸಹ ಆಗಿದೆ ಎನ್ನಲಾಗಿದೆ.
ವಿಚಾರ ತಿಳಿದ ಯುವತಿ ಮನೆಯವರು ಯುವಕನ ಮನೆಗೆ ತೆರಳಿ ಮನವೊಲಿಸಲು ಪ್ರಯತ್ನಿಸಿ ನಂತರ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಎರಡು ಗ್ರಾಮದ ಗ್ರಾಮಸ್ಥರು ನ್ಯಾಯ ಪಂಚಾಯಿತಿ ನಡೆಸಿದ್ದರು. ಈ ವೇಳೆ ಪರಂಜ್ಯೋತಿ ತನ್ನ ಪ್ರೇಯಸಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ ಹಿನ್ನಲೆ ವಿವಾಹ ನೋಂದಣಿ ಕಚೇರಿ ರಾಮಾಪುರಕ್ಕೆ ತೆರಳುತ್ತಿದ್ದಾಗ ಪರಂಜ್ಯೋತಿ ದಾರಿ ಮಧ್ಯೆ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಇದೀಗ ತನಗೆ ನ್ಯಾಯ ಕೊಡಿಸುವಂತೆ ಯುವತಿ ರಾಮಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪೊಲೀಸರ ಮುಂದೆ ವಸಂತಾ ಅಳಲು ತೋಡಿಕೊಂಡಿದ್ದಾಳೆ.
Acid Attack Case:ಆರೋಪಿ ಪತ್ತೆಗೆ ಪೊಲೀಸರಿಂದ ಹಳೆ ಸ್ಟೈಲ್ನಲ್ಲಿ ಹೊಸ ಪ್ಲಾನ್!
ಪ್ರೀತಿ ಕುರುಡು ಅಂತಾರಲ್ಲ ಹಾಗೆಯೇ ಆಗಿದೆ ಚಾಮರಾಜನಗರ ಜಿಲ್ಲೆಯಲ್ಲಿ. ಮದುವೆಯಾಗುತ್ತೇನೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿನಿ ಎಂದವನ ಮಾತಿಗೆ ಮರುಳಾದ ವಸಂತಾ ಬಾಳು ಈಗ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರೀತಿ, ಪ್ರೇಮದ ಅಮಲಿನಲ್ಲಿ ಬೀಳುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ.