Asianet Suvarna News Asianet Suvarna News

ಕಲಬುರಗಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ

ತಾನೂ ಮದುವೆಯಾಗಲು ಒಪ್ಪದೆ, ಬೇರೊಬ್ಬ ಯುವಕನ ಜೊತೆಗೂ ಮದುವೆಯಾಗಲು ಬಿಡದೆ ರಾಘವೇಂದ್ರ ತನ್ನ ಬಾಳನ್ನೇ ಹಾಳು ಮಾಡುತ್ತಿರುವುದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಿದ ನೊಂದ ಯುವತಿ 

Young Man Cheated to Woman in Kalaburagi grg
Author
First Published Sep 10, 2023, 11:00 PM IST

ಕಲಬುರಗಿ(ಸೆ.10):  ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಯುವತಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿರುವ ಯುವತಿಗೆ ಚಿತ್ತಾಪುರ ತಾಲ್ಲೂಕಿನ ರಾಮತೀರ್ಥದ ರಾಘವೇಂದ್ರ ಜಗನ್ನಾಥ ರೆಡ್ಡಿ ಎಂಬಾತನೆ ಮೋಸ ಮಾಡಿದ್ದು, ಈ ಸಂಬಂಧ ಯುವತಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. 

ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ಸಹ ಜೀವನ ಕಳೆದು ನಂತರ ಮದುವೆ ಮುಂದೂಡೂತ್ತ ಹೋದುದ್ದರಿಂದ ಯುವತಿ ವಿಜಯಪುರದ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಈ ವಿಷಯ ರಾಘವೇಂದ್ರನಿಗೆ ಗೊತ್ತಾಗಿ ಆತ ಯುವತಿ ಜೊತೆಗೆ ಇದ್ದಾಗ ತೆಗೆದ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಕಳುಹಿಸಿ ಸಂಬಂಧ ಮುರಿದಿದ್ದಾನೆ.

ಕಲಬುರಗಿ: ಕಡಿಮೆ ಬೆಲೆಗೆ ಬಂಗಾರ ಮಾರುವುದಾಗಿ ನಂಬಿಸಿ ನಿವೃತ್ತ ಶಿಕ್ಷಕನಿಗೆ ಲಕ್ಷಾಂತರ ರೂ. ವಂಚನೆ

ತಾನೂ ಮದುವೆಯಾಗಲು ಒಪ್ಪದೆ, ಬೇರೊಬ್ಬ ಯುವಕನ ಜೊತೆಗೂ ಮದುವೆಯಾಗಲು ಬಿಡದೆ ರಾಘವೇಂದ್ರ ತನ್ನ ಬಾಳನ್ನೇ ಹಾಳು ಮಾಡುತ್ತಿರುವುದರಿಂದ ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಿದ್ದಾಳೆ. 

ಈ ದೂರಿನ ಅನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದಾದ ನಂತರ ಆತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರಿಂದ ಯುವತಿ ತಕರಾರು ಅರ್ಜಿ ಸಲ್ಲಸಿ ಜಾಮೀನು ಸಿಗದಂತೆ ಮಾಡಿದ್ದಾಳೆ. ಆಗ ಯುವಕ ಮತ್ತು ಆತನ ಕುಟುಂಬದವರು ಮದುವೆ ಮಾಡುವುದಾಗಿ ನಂಬಿಸಿ ಜಾಮೀನು ಪಡೆದು ಮತ್ತೊಂದು ಯುವತಿಯ ಜೊತೆಗೆ ಆತನ ಮದುವೆ ಮಾಡುವುದರ ಮೂಲಕ ಮೋಸ ಮಾಡಿದ್ದಾರೆ. ಈ ಸಂಬಂಧ ಯುವತಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ಮತ್ತು ಆತನ ಕುಟುಂಬದವರ ವಿರುದ್ಧ ದೂರು ಸಲ್ಲಿಸಿದ್ದಾರೆ.

Follow Us:
Download App:
  • android
  • ios