Bengaluru Crime: ಲವರ್‌ಗೆ ಬೆಂಕಿ ಇಟ್ಟ ಪ್ರಿಯಕರ: ಸುಟ್ಟು ಕರಕಲಾದ ಯುವತಿ

*  ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕೊಲೆ ಮಾಡಲು ಯತ್ನ
* ಚಿಕಿತ್ಸೆ ಫಲಕಾರಿಯಾಗದ ಯುವತಿ ಆಸ್ಪತ್ರೆಯಲ್ಲಿ ಸಾವು
*  ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
*  ಆರೋಪಿ ವಿರುದ್ಧ IPC 302 ಮತ್ತು SC -ST ಆಕ್ಟ್ ಅಡಿ ಪ್ರಕರಣ ದಾಖಲು
 

Young Man Attempt to Murder Girl Friend in Bengaluru grg

ಬೆಂಗಳೂರು​(ಮಾ.18):  ಮದುವೆಯಾಗುವಂತೆ (Marriage) ಕೇಳಿದ ಯುವತಿಗೆ ಯುವಕನೊಬ್ಬ ಪೆಟ್ರೋಲ್ (Petrol) ಸುರಿದು ಬೆಂಕಿ ಇಟ್ಟ ಕೊಲೆ(Murder) ಮಾಡಲು ಯತ್ನಿಸಿ ಘಟನೆ ನಗರದಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ದಾಖಾಲಗಿದ್ದ ಯುವತಿ ಕೊನೆಯುಸಿರೆಳೆದಿದ್ದಾಳೆ. ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾನೇಶ್ವರಿ ಎಂಬಾಕೆಯ ಮೇಲೆ ಶಿವಕುಮಾರ್ ಎಂಬ ಯುವಕ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 

ಬಾಗಲಕೋಟೆ ಮೂಲದ ಶಿವಕುಮಾರ ದಾನೇಶ್ವರಿಯನ್ನು ಕಳೆದ 5-6 ವರ್ಷಗಳಿಂದ‌ ಪ್ರೀತಿಸ್ತಾ ಇದ್ದ. ವಿಜಯಪುರ (Vijayapura)ದ ಪಿಎಲ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗಲೇ ಪ್ರಣಯದ ಹಕ್ಕಿಗಳಾಗಿದ್ದ ದಾನೇಶ್ವರಿ ಹಾಗೂ ಶಿವಕುಮಾರ್ ಬೆಂಗಳೂರಿಗೆ ಬಂದ ನಂತರವೂ ರಿಲೇಷನ್‌ಶಿಪ್‌ನಲ್ಲಿ ಇದ್ರು. ಇತ್ತೀಚಿನ ಮಗಳ ಮದುವೆಗೆ ಮುಂದಾಗಿದ್ರು ದಾನೇಶ್ವರಿ ತಂದೆ ಅಶೋಕ್ ಶರ್ಮಾ. ಬೆಂಗಳೂರಿನಲ್ಲಿ ಇಬ್ಬರೂ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇದ್ರು. ಈ ವೇಳೆ ಮಗಳ ಪ್ರೀತಿಯನ್ನು ಒಪ್ಪಿದ್ದ ಅಶೋಕ್ ಶರ್ಮಾ ಮದುವೆ ಮಾಡಿಸಲೂ ಒಪ್ಪಿದ್ರು. ಆದ್ರೆ ದಾನೇಶ್ವರಿ ಕೆಳ ಜಾತಿಯವರು ಎಂಬ ಕಾರಣಕ್ಕೆ ಮದುವೆ ನಿರಾಕರಿಸಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

Bengaluru Crime: ಆಟೋದಲ್ಲಿ ಕುಳಿತ್ತಿದ್ದಕ್ಕೆ ಜಗಳ: ಇಟ್ಟಿಗೆಯಿಂದ ಹೊಡೆದು ಹತ್ಯೆ

ಗಾಯಾಳು ಯುವತಿಯನ್ನ ನಗರದ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದಾನೇಶ್ವರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು(Death). ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಿವಕುಮಾರ್‌ ವಿರುದ್ಧ IPC 302 ಮತ್ತು SC -ST ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

ಮಾ.15 ರಂದು ಶಿವಕುಮಾರ್ ದಾನೇಶ್ವರಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಿಂಬದಿಯಿಂದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು (Electronic City Police) ಆರೋಪಿಯ ಹುಡುಕಾಟ ನಡೆಸಿದ್ದಾರೆ.

ಮಗಳ ಮೇಲೆ ವಿಪರೀತ ಪ್ರೀತಿ ಇಟ್ಟುಕೊಂಡಿದ್ದರು ತಂದೆ
ವಿಜಯಪುರ: ಆನೇಕಲ್ ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಯಾದ ದಾನೇಶ್ವರಿ ವಿಜಯಪುರ ಮೂಲದವರು. ವಿಜಯಪುರ ಜಿ. ತಾಳಿಕೋಟೆಯ ಉಪ ತಹಶೀಲ್ದಾರ್ ಮಗಳು. ಅಶೋಕ ನಿಂಗಪ್ಪ ಶರ್ಮಾ ತಾಳಿಕೋಟೆ ಉಪ ತಹಶೀಲ್ದಾರ್. ಮೂಲತಃ ಸಿಂದಗಿ (Sindagi) ತಾಲೂಕಿನ ಗೋಲಗೇರಿ ಗ್ರಾಮದ ನಿವಾಸಿಗಳು. ಸಧ್ಯ ವಿಜಯಪುರ ನಗರದ ಕಾಮತ್ ಹೊಟೇಲ್ ಹಿಂಭಾಗದ ಸ್ವಂತ ಮನೆಯಲ್ಲಿ ವಾಸವಿದ್ದಾರೆ. ದಾನೇಶ್ವರಿ ತಾಯಿ ಈಗಾಗಲೇ ನಿಧನರಾಗಿದ್ದು, ಮಗಳು ತಂದೆ ಅಶೋಕ ಶರ್ಮಾ ಜೊತೆಗಿದ್ದಳು.  ಮಗಳ ಮೇಲೆ ವಿಪರೀತ ಪ್ರೀತಿ ಇಟ್ಟುಕೊಂಡಿದ್ದರು. ಮಗಳನ್ನ ಇಂಜಿನಿಯರ್ ಮಾಡಬೇಕು ಎಂದು ಕನಸು ಕಂಡು ಪಿಎಲ್ಡಿಇ ಇಂಜಿನಿಯರಿಂಗ್ ಕಾಲೇಜಿನಲ್ಲಿ (PLDE Engineering Collge) ವಿದ್ಯಾಭ್ಯಾಸ ಮಾಡಿಸಿದ್ದರು. 

ಕೆಲಸ ಮಾಡಲು ಬೆಂಗಳೂರಿಗೆ ಹೋಗಿದ್ದ ದಾನೇಶ್ವರಿ, ಬದಾಮಿ ಮೂಲದ ಶಿವಕುಮಾರ್ ಹಿರಿಯಾಳನ್ನ ಪ್ರೀತಿಸಿದ್ದಳು. ಅಂತರ್ ಜಾತಿ (intercaste) ಅನ್ನೋ ಕಾರಣಕ್ಕೆ ಶಿವಕುಮಾರ್ ಕುಟುಂಬದಲ್ಲಿ ಮದುವೆಗೆ ವಿರೋಧವಿತ್ತು. ಬೆಂಗಳೂರಲ್ಲಿ ವಾಸವಾಗಿದ್ದ ಶಿವಕುಮಾರ್ ಹಾಗೂ ದಾನೇಶ್ವರಿ ಲಿವಿಂಗ್‌ ಟು ಗೆದರ್ (Live in Relationship) ಸಂಬಂಧದಲ್ಲಿದ್ದರು.

ಮದುವೆಯಾದ ದಿನವೇ ಪರಪ್ಪನ ಅಗ್ರಹಾರ ಸೇರಿದ ರೌಡಿ ಶೀಟರ್

ವಿದ್ಯಾವಂತೆಯಾಗಿ, ಮಗಳು ಒಳ್ಳೆಯ ಕೆಲಸದಲ್ಲಿದ್ದಾಳೆಂದು ಭಾವಿಸಿದ್ದ ತಂದೆಗೆ, ಮಗಳು ಇಂಥ ಸ್ಥಿತಿಯಲ್ಲಿ ಕೊನೆಯುಸಿರೆಳೆದಿರುವುದು ಸಹಜವಾಗಿಯೇ ದುಃಖ ತಂದಿದೆ. 

Latest Videos
Follow Us:
Download App:
  • android
  • ios