Asianet Suvarna News Asianet Suvarna News

ಬೆಂಗ್ಳೂರಿನ ರಿಸರ್ವ್‌ ಬ್ಯಾಂಕ್‌ ಕಚೇರಿಗೆ ಬಾಂಬ್‌ ಕರೆ: ಯುವಕ ಸೆರೆ

ಖಾಸಗಿ ಕಾಲೇಜಿನ ಬಿಕಾಂ ಓದುತ್ತಿರುವ ವೈಭವ್‌, ತನ್ನ ಪೋಷಕರ ಜತೆ ನೆಲೆಸಿದ್ದಾನೆ. ಐದು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಆತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸ್‌ ನಿಯಂತ್ರಣ ಕೊಠಡಿಗೆ ಗುರುವಾರ ನಸುಕಿನ 2.40ಕ್ಕೆ ಕರೆ ಮಾಡಿದ ಆರೋಪಿ

Young Man Arrested For Bomb call to Reserve Bank office in Bengaluru grg
Author
First Published Jun 3, 2023, 1:55 PM IST

ಬೆಂಗಳೂರು(ಜೂ.03):  ನಗರದ ಭಾರತೀಯ ರಿಸರ್ವ್‌ ಬ್ಯಾಂಕ್‌ ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ ಎಂದು ಪೊಲೀಸ್‌ ನಿಯಂತ್ರಣ ಕೊಠಡಿ (112)ಗೆ ಹುಸಿ ಕರೆ ಮಾಡಿ ಕುಚೋದ್ಯತನ ತೋರಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿ ನಗರದ ನಿವಾಸಿ ವೈಭವ್‌ ಭಗವಾನ್‌ ಬಂಧಿತನಾಗಿದ್ದು, ಪೊಲೀಸ್‌ ನಿಯಂತ್ರಣ ಕೊಠಡಿಗೆ ತನ್ನ ಮೊಬೈಲ್‌ನಿಂದ ಗುರುವಾರ ನಸುಕಿನಲ್ಲಿ ಆತ ಕರೆ ಮಾಡಿದ್ದ. ಈ ಬಗ್ಗೆ ನಿಯಂತ್ರಣ ಕೊಠಡಿ ಪಿಎಸ್‌ಐ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ ವಿಧಾನಸೌಧ ಪೊಲೀಸರು, ಕರೆ ಬಂದಿದ್ದ ಮೊಬೈಲ್‌ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಡ್ರಗ್ಸ್‌ ಮಾರಾಟ..!

ಖಾಸಗಿ ಕಾಲೇಜಿನ ಬಿಕಾಂ ಓದುತ್ತಿರುವ ವೈಭವ್‌, ತನ್ನ ಪೋಷಕರ ಜತೆ ನೆಲೆಸಿದ್ದಾನೆ. ಐದು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಆತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸ್‌ ನಿಯಂತ್ರಣ ಕೊಠಡಿಗೆ ಗುರುವಾರ ನಸುಕಿನ 2.40ಕ್ಕೆ ಕರೆ ಮಾಡಿದ ಆರೋಪಿ, ಬೆಂಗಳೂರಿನ ರಿಸರ್ವ್‌ ಬ್ಯಾಂಕ್‌ ಇಂಡಿಯಾದಲ್ಲಿ ಬಾಂಬ್‌ ಬ್ಲಾಸ್ಟ್‌ ಆಗುತ್ತದೆ. ತಕ್ಷಣವೇ ಪರಿಶೀಲಿಸಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಕೂಡಲೇ ಈ ಬಗ್ಗೆ ಕೇಂದ್ರ ವಿಭಾಗದ ಪೊಲೀಸರಿಗೆ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.

ಈ ಮಾಹಿತಿ ಮೇರೆಗೆ ನಗರದ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಕಚೇರಿಗೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ. ಬಳಿಕ ನಿಯಂತ್ರಣ ಕೊಠಡಿಯ ಪಿಎಸ್‌ಐ ದೂರು ಆಧರಿಸಿ ತನಿಖೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios