ಕೆಂಗೇರಿಯಲ್ಲಿ‌ ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿರುವ ಆರೋಪಿ ಸುಹಾಸ್. ಅಸಲಿಗೆ ಈತನಿಂದಲೇ ಎಕ್ಸ್'ಟೆಸಿ ಪಿಲ್ಸ್ ಮಾರಾಟ. 

ಬೆಂಗಳೂರು(ಜೂ.03): ಹೆಸರಿಗೆ ಮದ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರ, ಆದರೆ ಅದನ್ನ ನಡೆಸುವ ಮುಖ್ಯಸ್ಥ ಅಸಲಿಗೆ ಮಾದಕವಸ್ತು ಮಾರಾಟದಲ್ಲಿ ಭಾಗಿಯಾದ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ. ಸುಹಾಸ್ ಎಂಬಾತನೇ ಮಾದಕವಸ್ತು ಮಾರಾಟದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ಸುಹಾಸ್ ಕೆಂಗೇರಿಯಲ್ಲಿ‌ ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದಾನೆ. ಆದರೆ ಅಸಲಿಗೆ ಈತನೇ ಎಕ್ಸ್'ಟೆಸಿ ಪಿಲ್ಸ್ ಮಾರಾಟ ಮಾಡುತ್ತಿದ್ದನಂತೆ. 

ಹೆರಾಯಿನ್‌ ಕೇಸ್‌ನಲ್ಲಿ 20 ವರ್ಷ ಜೈಲಿನಲ್ಲಿದ್ದ ವ್ಯಕ್ತಿ, ತನಿಖೆಯಾದ ನಂತ್ರ ಗೊತ್ತಾಯ್ತು ಅದು ಡ್ರಗ್ಸ್‌ ಅಲ್ಲ ಪೌಡರ್‌!

ವ್ಯಸನವನ್ನ ಬಿಡಲೆಂದು ಬಂದವರಿಗೆ ವ್ಯಸನ ಇರೋದನ್ನೇ ಆರೋಪಿ ಸುಹಾಸ್ ಬಂಡವಾಳ ಮಾಡಿಕೊಂಡಿದ್ದನು. ಆರೋಪಿ ಸುಹಾಸ್‌ನನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯಲ್ಲಿ ರಿಹ್ಯಾಬಿಟೇಷನ್ ಸೆಂಟರ್ ನಡೆಸ್ತಿದ್ದ ಸುಹಾಸ್, ಹೊಸಕೆರೆಹಳ್ಳಿ ಬಳಿ ಎಕ್ಸ್'ಟೆಸಿ ಪಿಲ್ಸ್ ಮಾರಾಟ ಮಾಡಲು ಯತ್ನಿಸೋ ವೇಳೆ ಖಾಕಿ ಬಲೆಗೆ ಬಿದ್ದಿದ್ದಾನೆ.