Asianet Suvarna News Asianet Suvarna News

ಉಡುಪಿ ಬೆಚ್ಚಿಬೀಳಿಸಿದ ಯುವ ಉದ್ಯಮಿ ಅಜೇಂದ್ರ ಶೆಟ್ಟಿ ಹತ್ಯೆ, ಹಿಂದೆ ಯಾರಿದ್ದಾರೆ?

* ತಡರಾತ್ರಿ ಡ್ರೀಮ್ ಫೈನಾನ್ಸ್ ನ ಫೈನಾನ್ಶಿಯರ್ ಕೊಲೆ 
* ಕುಂದಾಪುರ ತಾಲೂಕು ವ್ಯಾಪ್ತಿಯ ಸಳ್ವಾಡಿಯಲ್ಲಿ ನಡೆದ ಘಟನೆ
* ಅಜೇಂದ್ರ ಶೆಟ್ಟಿ (33) ಕೊಲೆಯಾದ ಫೈನಾನ್ಶಿಯರ್ 
* ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿದ್ದ ಅಜೇಂದ್ರ ಶೆಟ್ಟಿ

Young financier hacked to death in Udupi partner prime suspect mah
Author
Bengaluru, First Published Jul 31, 2021, 7:59 PM IST
  • Facebook
  • Twitter
  • Whatsapp

ಉಡುಪಿ(ಜು. 31)  ಭೀಕರ ಕೊಲೆ ಉಡುಪಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.  ತಡರಾತ್ರಿ ಡ್ರೀಮ್ ಫೈನಾನ್ಸ್ ನ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ (33) ಎಂಬುವರ ಹತ್ಯೆಯಾಗಿದೆ. 

ಕುಂದಾಪುರ ತಾಲೂಕು ವ್ಯಾಪ್ತಿಯ ಸಳ್ವಾಡಿಯಲ್ಲಿ ನಡೆದ ಘಟನೆ ನಡೆದಿದೆ. ಅಜೇಂದ್ರ ಶೆಟ್ಟಿ (33) ಕೊಲೆಯಾಗಿದ್ದಾರೆ. ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿದ್ದ ಅಜೇಂದ್ರ ಶೆಟ್ಟಿ ಹತ್ಯೆಯಾಗಿದೆ.

ಡೆಂಟಲ್ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಗೆಳೆಯ

ತಡರಾತ್ರಿಯವರೆಗೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಹುಡಾಕಾಟ ನಡೆಸುತ್ತಿದ್ದ ಸ್ನೇಹಿತರಿಗೆ ಫೈನಾನ್ಸ್ ಒಳಗೆ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಶವ ಪತ್ತೆಯಾಗಿದೆ ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಹತ್ಯೆ ಇಡೀ ಜಿಲ್ಲೆಗೆ ಭೀತಿ ಆವರಿಸುವಂತೆ ಮಾಡಿದೆ. ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಾಸಿನ ವಿಚಾರದಲ್ಲಿಯೇ ಹತ್ಯೆಯಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು ಪೊಲೀಸರು ಆರಂಭಿಕ ಮಾಹಿತಿ ಕಲೆ ಹಾಕಿದ್ದಾರೆ. 

Follow Us:
Download App:
  • android
  • ios