ಕೇರಳದಲ್ಲಿ ಭೀಕರ ಘಟನೆ, ವಿದ್ಯಾರ್ಥಿನಿಯನ್ನು ಗುಂಡಿಟ್ಟು ಕೊಂದ ಗೆಳೆಯ 24ರ ದಂತ ವಿದ್ಯಾರ್ಥಿನಿಗೆ ಗುಂಡೇಟು, ಬಳಿಕ ತಾನು ಆತ್ಮಹತ್ಯೆ ಕೇರಳದಲ್ಲಿ ಮಹಿಳೆ ಮೇಲೆ ಪ್ರಕರಣ ಗಣನೀಯ ಏರಿಕೆ  

ಕೊಚ್ಚಿ(ಜು.30): ಕೇರಳದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ವರದಕ್ಷಿಣ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಕರಣ ದೇಶದಲ್ಲಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ದಂತ ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿದ ಗೆಳೆಯ ಬಳಿಕ ತಾನು ಆತ್ಮಹತ್ಯೆಗೈದ ಘಟನೆ ಕೊಚ್ಚಿ ಸಮೀಪದ ಕೊತಮಂಗಲದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

6 ವರ್ಷದ ಬಾಲಕಿಯ 3 ವರ್ಷ ರೇಪ್ ಮಾಡಿ ಕೊಂದ CPI(M) ಕಾರ್ಯಕರ್ತ

24 ವರ್ಷ ದಂತ ವಿದ್ಯಾರ್ಥಿನಿ ಮಾನಸ ಮನೆಯಲ್ಲೇ ಈ ಘಟನೆ ನಡೆದಿದೆ. ಗೆಳೆಯ ರಾಖಿಲ್ ಗುಂಡೇಟಿಗೆ ಮಾನಸ ಸಾವನ್ನಪ್ಪಿದ್ದಾಳೆ. ಮಾನಸ ಮನೆಯಲ್ಲಿ ತನ್ನ ಗೆಳೆತಿಯರೊಂದಿಗೆ ಮಧ್ಯಾಹ್ನ ಊಟ ಮಾಡುತ್ತಿರುವ ವೇಳೆ ಗೆಳೆಯ ರಾಖಿಲ್ ಆಗಮಿಸಿದ್ದಾನೆ. ತಕ್ಷಣವೇ ಮನೆಯಿಂದ ಹೊರಹೋಗುವಂತೆ ಮಾನಸ ಹೇಳಿದ್ದಾರೆ. ಆದರೆ ರಾಖಿಲ್ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

40ರ ಪತ್ನಿಯ 45ರ ಬಾಯ್ ಫ್ರೆಂಡ್ ಮರ್ಮಾಂಗಕ್ಕೆ ಶೂಟ್ ಮಾಡಿದ 46ರ ಪತಿರಾಯ!

ಈ ವೇಳೆ ಮಾನಸ ಗೆಳತಿಯರು ಕೂಗಿದ್ದಾರೆ. ಅಷ್ಟರಲ್ಲೇ ರಿವಾಲ್ವರ್ ತೆಗೆದು ಮಾನಸಗೆ ಗುಂಡಿಕ್ಕಿದ ರಾಖಿಲ್, ಬಳಿಕ ತಾನು ಸ್ವಯಂ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ಹೇಳುತ್ತಿದೆ.

ಮಾನಸ ಹಾಗೂ ರಾಖಿಲ್ ಕಾಲೇಜಿನಲ್ಲಿ ಪರಿಚಿತರಾಗಿದ್ದಾರೆ. ಇತ್ತೀಚೆಗೆ ರಾಖಿಲ್ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ರಾಖಿಲ್ ಮನವಿಯನ್ನು ತಿರಸ್ಕರಿಸಿದ್ದ ಮಾನಸ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ ಎಂದು ಮಾನಸ ಗೆಳೆತಿಯರು ಹೇಳಿದ್ದಾರೆ.