Asianet Suvarna News Asianet Suvarna News

ಪ್ರಿಯತಮೆಗೆ ಬೇರೊಬ್ಬನ ಜೊತೆ ಮದುವೆ ನಿಗದಿ: ಪ್ರಿಯಕರನ ಬಾಡಿಗೆ ಮನೆ ಧ್ವಂಸ ಮಾಡಿದ ಸಂಬಂಧಿಕರು

ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಗೆ ಮತ್ತೊಬ್ಬನನ್ನು ಜೊತೆಗೆ ಮದುವೆ ನಿಗಿದಿಯಾಗಿದ್ದು, ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

young boy rented house destroyed because inter religion love  in shivamogga gow
Author
First Published Sep 1, 2022, 10:17 AM IST

ಶಿವಮೊಗ್ಗ (ಸೆ.1) : ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಗೆ ಮತ್ತೊಬ್ಬನನ್ನು ಜೊತೆಗೆ ಮದುವೆ ನಿಗಿದಿಯಾಗಿದ್ದು, ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಿಯಕರನ ಬಾಡಿಗೆ ಮನೆಯನ್ನು ಯುವತಿಯ ಸಂಬಂಧಿಕರು  ಧ್ವಂಸ ಮಾಡಿದ್ದು. ಕುಪಿತಗೊಂಡ ಕುಪಿತಗೊಂಡ ಪ್ರೇಮಿಯಿಂದ ಆಕೆಗೆ ಕಪಾಳಮೋಕ್ಷ ಮಾಡಿದ ಘಟನೆ ನಗರದ ದೊಡ್ಡ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೇರಿಗೆ ಸವಾಸೇರು ಎನ್ನುವಂತೆ, ಅವರ ಮೇಲೆ ಇವರು, ಇವರ ಮೇಲೆ ಅವರು ಹರಿ ಹಾಯ್ದಿದ್ದು, ಶಿವಮೊಗ್ಗ ಮಾರ್ನಮಿಬೈಲ್‌‌ನಲ್ಲಿರುವ ಬಾಡಿಗೆ ಮನೆ ಧ್ವಂಸಗೊಂಡಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡಸಲಾಗುತ್ತಿದೆ. ಶಿವಮೊಗ್ಗದ ದೊಡ್ಡ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

ಘಟನೆ ಹಿನ್ನೆಲೆ: ಮಾರ್ನಮಿಬೈಲ್‌ನ ಯುವಕ ಭದ್ರಾವತಿಯ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ಹಲವು ವರ್ಷ ಇಬ್ಬರ ನಡುವೆ ಪರಸ್ಪರ ಪ್ರೀತಿ ಇತ್ತು. ಆದರೆ ಇತ್ತೀಚೆಗೆ ಯುವತಿ ಮನೆಯವರು ಆಕೆಗೆ ತಮ್ಮದೇ ಧರ್ಮದ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕ ಆಕೆ ಮೇಲೆ ಹಲ್ಲೆ ಮಾಡಿದ್ದ. ಈ ಬಗ್ಗೆ ಭದ್ರಾವತಿ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  FIR ದಾಖಲಾದ ಬಳಿಕ ಯುವತಿ ಮನೆಯವರು  ಮಾರ್ನಮಿಬೈಲ್‌ ನ ಯುವಕನಿದ್ದ ಬಾಡಿಗೆ ಮನೆಯಲ್ಲಿದ್ದ ವಸ್ತುಗಳನ್ನು ಪುಡಿಗಟ್ಟಿದ್ದಾರೆ .

Follow Us:
Download App:
  • android
  • ios