Asianet Suvarna News Asianet Suvarna News

ರಾಯಚೂರು: ಫೇಸ್‌ಬುಕ್‌ ಲೈವಲ್ಲಿ ಯುವಕ ಆತ್ಮಹತ್ಯೆ

*   ಪ್ರೀತಿಸಿ ಅನ್ಯಕೋವಿನ ಯುವತಿಯನ್ನು ಮದುವೆಯಾಗಿದ್ದ ಮೃತ ಯುವಕ
*   ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣು
*   ಈ ಸಂಬಂಧ ಇಡಪನೂರು ಠಾಣೆಯಲ್ಲಿ ಪ್ರಕರಣ ದಾಖಲು 
 

Youn Man Committed Suicide on Facebook Live in Raichur grg
Author
Bengaluru, First Published Sep 9, 2021, 7:39 AM IST
  • Facebook
  • Twitter
  • Whatsapp

ರಾಯಚೂರು(ಸೆ.09): ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವಕ ಪಿಎಸ್‌ಐ ಸೇರಿ ಆರು ಜನರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು, ಫೇಸ್‌ಬುಕ್‌ ಲೈವ್‌ನಲ್ಲಿ ತನ್ನ ನೋವನ್ನು ತೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ತಾಲೂಕಿನ ಗಾಣಧಾಣ ಗ್ರಾಮದ ನಿವಾಸಿ ಭೀಮೇಶ ನಾಯಕ ಆತ್ಮಹತ್ಯೆಗೆ ಶರಣಾದ ಯುವಕ. ಭೀಮೇಶ 2 ತಿಂಗಳ ಹಿಂದೆ ಓಡಿ ಹೋಗಿ 5 ವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ಅನ್ಯಕೋವಿನ ಯುವತಿಯನ್ನು ಮದುವೆ ಮಾಡಿಕೊಂಡಿದ್ದ. ಅಂತರ್ಜಾತಿಯ ಮದುವೆ ಹಿನ್ನೆಲೆಯಲ್ಲಿ ಪೋಷಕರು ವಿರೋಧಿಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಅನುಮಾನ ಹೊಕ್ಕರೆ ಅದು ಸಂಸಾರವಲ್ಲ..ನರಕ ವಿಜಯಪುರದ ಸೈಕೋ ಗಂಡ!

ವಿಚಾರಣೆ ಹೆಸರಿನಲ್ಲಿ ನವದಂಪತಿಯನ್ನು ಠಾಣೆಗೆ ಕರೆಸಿದ್ದ ಪೊಲೀಸರು ಇಬ್ಬರನ್ನು ಬೇರ್ಪಡಿಸಿ ಪೋಷಕರ ಜೊತೆಗೆ ಕಳುಹಿಸಿಕೊಟ್ಟಿದ್ದರು. ಇದರಿಂದ ಮನನೊಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್‌ನೋಟ್‌ ಬರೆದಿಟ್ಟು, ಫೇಸ್‌ಬುಕ್‌ ಲೈವ್‌ನಲ್ಲಿ ಆಗಿರುವ ಅನ್ಯಾಯವನ್ನು ಹಂಚಿಕೊಂಡು ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಇಡಪನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios