ಅರಣ್ಯಪ್ರದೇಶಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು ಮೂರು ಸಾವಿರಕ್ಕೂ ಅಧಿಕ ಮರಗಳು ಸುಟ್ಟು ಭಸ್ಮ!
ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾದ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಾಳೆಬೆಳಗುಂದಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಯಾದಗಿರಿ (ಮೇ.9): ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾದ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಾಳೆಬೆಳಗುಂದಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಕಾಳೆಬೆಳಗುಂದಿ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಸುಮಾರು ಒಂದು ಗಂಟೆ ಕಾಲ ಹೊತ್ತಿ ಉರಿದ ಅರಣ್ಯ ಪ್ರದೇಶ. ಬೆಂಕಿಯ ಕೆನ್ನಾಲಗೆಗೆ ಅರಣ್ಯಪ್ರದೇಶದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಗಿಡಮರಗಳು, ಅಸಂಖ್ಯ ಜೀವರಾಶಿಗಳು ಸುಟ್ಟು ಭಸ್ಮವಾಗಿವೆ. ಹೊತ್ತಿ ಉರಿಯುತ್ತಿರುವ ಬೆಂಕಿ ಆರಿಸಲು ನೀಲಗಿರಿ ತಪ್ಪಲಿನಿಂದ ನಂದಿಸಲು ವನ ಪಾಲಕ ಹರಸಾಹಸಪಟ್ಟರು. ಕೊನೆಗೂ ನೀಲಗಿರಿ ತಪ್ಪಲಿನಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ವನಪಾಲಕ ಭೀರಪ್ಪ ಪೂಜಾರಿ ಯಶಸ್ವಿಯಾದರು.
ದತ್ತಪೀಠ ಪರಿಸರದಲ್ಲಿ ಭಾರೀ ಬೆಂಕಿ; ಕುರುಚಲು , ಹಲ್ಲುಗಾವಲು ಸುಟ್ಟು ಕರಕಲು!