ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ
* ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ
* ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ ರಾಜಾ ಕುಮಾರ್ ನಾಯಕ
* ತಲ್ವಾರ್ ಪ್ರದರ್ಶನ ವಿಡಿಯೋ ವೈರಲ್
ಯಾದಗಿರಿ, (ಮೇ.31): ರಾಜ್ಯ ರಾಜಕಾರಣದಲ್ಲಿ ಸಖತ್ ಸೌಂಡ್ ಮಾಡುವ ಕ್ಷೇತ್ರ ಅಂದ್ರೆ ಅದು ಸುರಪುರ ವಿಧಾನಸಭಾ ಕ್ಷೇತ್ರ, ಆದ್ರೆ ಕೆಲವು ದಿನಗಳ ಹಿಂದೆ ಹೊಡೆಯಿರಿ ಇಲ್ಲ, ಹೊಡಿಸಿಕೊಳ್ಳಿ, ಕಡೀರಿ ಇಲ್ಲ ಕಡಿಸಿಕೊಳ್ಳಿ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ ನೀಡುವ ಮೂಲಕ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು, ಆ ಸುದ್ದಿ ಆರುವ ಮುನ್ನವೇ ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಹೊಸ ವಿವಾದವೊಂದನ್ನು ಸೃಷ್ಟಿ ಹಾಕಿದ್ದಾರೆ. ಯಾದಗಿರಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ್ ನಾಯಕ ತಲ್ವಾರ್ ನಿಂದ ಕೇಕ್ ಕತ್ತರಿಸುವ ಮೂಲಕ ಬರ್ತ್ ಡೇ ಆಚರಿಸಿಕೊಂಡಿರುವುದು ಸಂಚಲನ ಮೂಡಿಸಿದೆ.
ಮಾಜಿ ಶಾಸಕ ಸಮ್ಮುಖದಲ್ಲೇ ತಲ್ವಾರ್ ಪ್ರದರ್ಶಿಸಿ ಕೇಕ್ ಕಟ್
ಸುರಪುರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಹ ಯೂತ್ ಕಾಂಗ್ರೆಸ್ಜಿಲ್ಲಾಧ್ಯಕ್ಷ ರಾಜಾ ಕುಮಾರ್ ನಾಯಕ ರ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಭಾಗವಹಿಸಿದ್ದರು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಸಮ್ಮುಖದಲ್ಲೇ ಈ ತರ ತಲ್ವಾರ್ ಪ್ರದರ್ಶಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇಬ್ಬರು ಹೆಂಡ್ತಿಯರು ಮನೆಯಲ್ಲಿದ್ರೂ ಮೂರನೆಯವಳಿಗೆ ಆಸೆ ಪಟ್ಟ, ಯುವ ಕೈ ನಾಯಕನ ಕಥೆ
ಅಭಿಮಾನಿಗಳ ಮುಂದೆ ತಲ್ವಾರ್ ಪ್ರದರ್ಶನ
ರಾಜಾ ಕುಮಾರ್ ನಾಯಕ ರ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಕಾಂಗ್ರೇಸ್ ಹಾಗೂ ಅವರ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಸಾವಿರಾರು ಅಭಿಮಾನಿಗಳ ಮುಂದೆಯೇ ಈ ರೀತಿ ತಲ್ವಾರ್ ಪ್ರದರ್ಶಿಸುವುದು ಎಷ್ಟು ಸರಿ..? ಸುರಪುರದಲ್ಲಿ ಅಭಿಮಾನಿ ಬಳಗ ಜೊತೆ ಅದ್ದೂರಿಯಾಗಿ ಆಚರಿಸಿಕೊಂಡಿರುವುದಲ್ಲದೇ ತಲ್ವಾರ್ ಪ್ರದರ್ಶಿಸುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ತಲ್ವಾರ್ ಪ್ರದರ್ಶನ ವಿಡಿಯೋ ವೈರಲ್
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅವರ ಬರ್ತ್ ಡೇ ಮೇ 24 ರಂದು ಆಚರಿಸಿಲಾಗಿತ್ತು, ಸುರಪುರ ನಗರದಲ್ಲಿ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ನಡೆದಿತ್ತು. ಆದ್ರೆ ಸದ್ಯ ತಲ್ವಾರ್ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ವಿಡಿಯೋಗೆ ಸಾಂಗ್ ಸಟ್ ಮಾಡುವುದರ ಮೂಲಕ ಅವರ ಅಭಿಮಾನಿಗಳು ಮತ್ತು ಕಾಂಗ್ರೇಸ್ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ.
ತಲ್ವಾರ್ ಪ್ರದರ್ಶನ ಬಗ್ಗೆ ಪರ ವಿರೋಧ ಚರ್ಚೆ
ರಾಜ್ಯ ರಾಜಕಾರಣದಲ್ಲಿ ಸುರಪುರ ಕ್ಷೇತ್ರ ಒಂದು ರೀತಿಯಲ್ಲಿ ವಿಭಿನ್ನವಾದದ್ದು. ಹೊಡಿ-ಬಡಿ ರಾಜಕೀಯಕ್ಕೆ ಹೆಸರಾದದ್ದು. ಜೊತೆಗೆ ಎರಡು ತಿಂಗಳ ಹಿಂದೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಹೊಡಿರಿ, ಕಡೀರಿ ಎಂಬ ಹೇಳಿಕೆ ಬೆನ್ನೆಲ್ಲೇ ಈ ರೀತಿ ತಲ್ವಾರ್ ಪ್ರದರ್ಶಸಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕಾಂಗ್ರೇಸ್ ಕಾರ್ಯಕರ್ತರು ಇದನ್ನು ವೈರಲ್ ಮಾಡಿದ್ರೆ, ಬಿಜೆಪಿಗರು ಇದನ್ನು ಸಾಮಾಜಿಕಾ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಲ್ವಾರ್ ನಿಂದ ಕೇಕ್ ಕತ್ತರಿಸುವುದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.