ಹೊನ್ನಾವರ(ಜು.20): ಕಾಸರಕೋಡ ಟೀಚರ್‌ ಕಾಲೋನಿಯ 32 ವರ್ಷದ ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿಯೇ ಫ್ಯಾನ್‌ಗೆ ವೇಲ್‌ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ದೀಪಾ ಪ್ರವೀಣ ನಾಯ್ಕ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಮೃತ ಮಹಿಳೆಯ ತಾಯಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು ಆತ್ಮಹತ್ಯೆಗೆ ದೀಪಾಳ ಮಾವ ಹರಿಯಪ್ಪ ನಾಯ್ಕ ಹಾಗೂ ಆಕೆಯ ಪತಿ ಪ್ರವೀಣ ಹರಿಯಪ್ಪ ನಾಯ್ಕ ಎಂಬವರೇ ಕಾರಣ ಎಂದು ಆರೋಪಿಸಿದ್ದಾರೆ.

ಪಿಯುಸಿಯಲ್ಲಿ ಫೇಲ್: ಮನನೊಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ

ಕಳೆದೊಂದು ವರ್ಷದಿಂದಲೂ ದೀಪಾಳಿಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎನ್ನುವ ಅಂಶವನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ಪಷ್ಟಪಡಿಸಿರುವ ಮೃತಳ ಸಹೋದರ ಮಾರುತಿ ನಾಯ್ಕ ಈ ಹಿಂದೆಯೇ ಕುಟುಂಬದ ಹಿರಿಯರು ದೀಪಾಳ ಗಂಡನ ಮನೆಗೆ ಹೋಗಿ ಮಾತುಕತೆ ಮಾಡಿದಾಗಲೂ ಆಕೆಯ ಮಾವ ಮತ್ತು ಗಂಡ ನೀನು ನಮಗೆ ಬೇಡ ಎಲ್ಲಾದರೂ ಹೋಗಿ ಸಾಯಿ, ನೀನೊಂದು ದೊಡ್ಡ ಪೀಡೆ ಎಂದೆಲ್ಲಾ ಬೈದಿದ್ದರು. ಇದೇ ರೀತಿಯ ಕಿರುಕುಳ ಮುಂದುವರೆದ ಕಾರಣ ಮನನೊಂದು ಆಕೆ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.