8 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್, ರಕ್ಷಣೆಗೆ ಬಂದ ತಾಯಿಯನ್ನು ವಿವಸ್ತ್ರಗೊಳಿಸಿದ ಕಾಮುಕರು!
8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ರಕ್ಷಣೆಗೆ ಬಂದ ತಾಯಿಯನ್ನು ವಿವಸ್ತ್ರಗೊಳಿಸಿದ ಭೀಕರ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಘಟನೆ ನಡೆದಿದೆ. ಆದರ ಕೋರ್ಟ್ ಮಧ್ಯಪ್ರವೇಶಿಸಿದ ಕಾರಣ ಘಟನೆ ಬೆಳಕಿಗೆ ಬಂದಿದೆ.
ಲಖನೌ(ಏ.08): ಭಾರತದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪೊಲೀಸ್, ಕಾನೂನುಗಳಿದ್ದರೂ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಇದೀಗ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯಲ್ಲಿ ಅತ್ಯಂತ ಕ್ರೂರ ಘಟನೆ ನಡೆದೆ. ಕುಟುಂಬಕ್ಕೆ ಪರಿಚಯವಿದ್ದ 35 ವರ್ಷದ ವ್ಯಕ್ತಿ ಹಾಗೂ ಆತನ ಸಹಚರರು 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇತ್ತ ನೆರವಿಗೆ ಬಂದ ಬಾಲಕಿ ತಾಯಿಯನ್ನು ವಿವಸ್ತ್ರಗೊಳಿಸಿದ್ದಾರೆ. ಘಟನೆ ಬಾಯಿಬಿಟ್ಟರೆ ಹತ್ಯೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಘಟನೆ ಬಳಿಕ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಕೋರ್ಟ್ ಮೊರೆ ಹೋದ ತಾಯಿಗೆ ನ್ಯಾಯಕೊಡಿಸಲು ಇದೀಗ ಕೋರ್ಟ್ ಖಡಕ್ ಸೂಚನೆ ನೀಡಿದೆ.
35 ವರ್ಷದ ಆರೋಪಿ ಬಾಲಕಿ ಪೋಷಕರಿಗೆ ಪರಿಚಯಸ್ಥನಾಗಿದ್ದ. ಮನೆಯಲ್ಲಿ ಪೋಷಕರು ಇಲ್ಲದಿರುವುದನ್ನು ಗಮನಿಸಿ ತನ್ನ ಸಹಚರರೊಂದಿಗೆ ಬಾಲಕಿ ಮನೆಗೆ ಆಗಮಿಸಿದ್ದಾರೆ. ಬಾಲಕಿಗೆ ಮತ್ತು ಬರವು ಔಷಧಿ ಬೆರೆಸಿ ಜ್ಯೂಸ್ ನೀಡಿದ್ದಾರೆ. ಬಳಿಕ ಪರಿಚಯಸ್ಥ ಹಾಗೂ ಆತನ ಸಹಚರರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೆಲಸದ ನಿಮಿತ್ತ ಹೊರಹೋಗಿದ್ದ ತಾಯಿ ಹಾಗೂ ಅತ್ತೆ ಮನೆಗೆ ಹಿಂತಿರುಗುವಾಗ ಮಗಳು ಪ್ರಜ್ಞಾಹೀನಾಗಳಾಗಿ ಬಿದ್ದಿರುವುದು ಗಮನಿಸಿ ಗಾಬರಿಗೊಂಡಿದ್ದಾರೆ. ತಾಯಿ ಹಾಗೂ ಅತ್ತೆ ಕಿರುಚಾಡಿದ್ದಾರೆ. ನೆರವಿಗೆ ಕೂಗಿದ್ದಾರೆ. ಆದರೆ ಅಕ್ಕ ಪಕ್ಕದಲ್ಲಿ ಮನೆ ಇಲ್ಲದ ಕಾರಣ, ಜೊತೆಗೆ ದಾರಿಯಲ್ಲೂ ಯಾರೂ ಇಲ್ಲದ ಕಾರಣ ಯಾರಿಂದಲೂ ನೆರವು ಸಿಗಲಿಲ್ಲ.
Delhi horror 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಸಿಬ್ಬಂದಿ ಸೇರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ!
ಬಾಲಕಿ ತಾಯಿಯ ಕಿರುಚಾಟ ಜೋರಾಗುತ್ತಿದ್ದಂತೆ ಕಾಮುಕರು ತಾಯಿಯನ್ನು ಹಿಡಿದು ವಿವಸ್ತ್ರಗೊಳಿಸಿದ್ದಾರೆ. ತಾಯಿಗೂ ಕಿರುಕುಳ ನೀಡಿದ್ದಾರೆ. ಇತ್ತ ಅತ್ತೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಚಾರ ಬಾಯ್ಬಿಟ್ಟರೆ ಹತ್ಯೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಇತ್ತ ಬಾಲಕಿಯನ್ನು ಹತ್ತಿರದ ಕ್ಲೀನಿಕ್ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ತಾಯಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಆದರೆ ಪೊಲೀಸುರ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಘಟನೆ ನಡೆದಿದೆ. ಫೆಬ್ರವರಿ 8 ರಂದು ಈ ಘಟನೆ ನಡದಿದೆ. ಆದರೆ ಇದುವರೆಗೆ ಪೊಲೀಸರು ಪೋಷಕರ ನೆರವಿಗೆ ಬಂದಿಲ್ಲ. ದೂರು ದಾಖಲಾಗಿಲ್ಲ.
ವಿಶೇಷ ಚೇತನ ಮಹಿಳೆ ಮೇಲೆ NGO ಸದಸ್ಯರಿಂದ ಅತ್ಯಾಚಾರ, ಒಂದು ವರ್ಷದ ಬಳಿಕ ಪ್ರಕರಣ ಬೆಳಕಿಗೆ!
ಇತ್ತ ಎಲ್ಲಾ ಪ್ರಯತ್ನಗಳ ಬಳಿಕ ಬಾಲಕಿ ಪೋಷಕರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದೆ. ಇಷ್ಟೇ ಅಲ್ಲ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಪೊಲೀಸರು 376ಡಿ, 452, 506, 328 ಹಾಗೂ 354ರ ಅಡಿಯಲ್ಲಿ ಪ್ರಕರಣ ದಾಖಳಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಇತ್ತ ಆರೋಪಿಗಳ ಸುಳಿವು ಪತ್ತೆ ಇಲ್ಲ.