ಮಾಜಿ ಬಾಯ್‌ಫ್ರೆಂಡ್ ಮದುವೆಯಾಬೇಕಿದ್ದವಳ ನಗ್ನ ಪೋಟೋ ಶೇರ್ ಮಾಡಿದಳು!
* ಮಾಜಿ ಬಾಯ್ ಫ್ರೆಂಡ್ ಮೇಲಿನ ದ್ವೇಷ
* ಆತ ಮದುವೆಯಾಗಬೇಕಿದ್ದ ಹುಡುಗಿಯ ನಗ್ನ ಚಿತ್ರ ಶೇರ್ ಮಾಡಿದಳು
* ಮಹಿಳೆಯನ್ನು ಬಂಧಿಸಿರುವ ಪೊಲೀಸರು
ಅಹಮದಾಬಾದ್ (ಜೂ. 27) ಸಾಮಾಜಿಕ ಜಾಲತಾಣಕ್ಕೆ ತನ್ನ ಮಾಜಿ ಬಾಯ್ ಫ್ರೆಂಡ್ ಭಾವಿ ಪತ್ನಿಯ ನಗ್ನ ಪೋಟೋಗಳನ್ನು ಅಪ್ ಲೋಡ್ ಮಾಡಿದ ಆರೋಪದ ಮೇಲೆ 22 ವರ್ಷದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾಥೆ ಸೃಷ್ಟಿ ಮಾಡಿಕೊಂಡು ನನ್ನ ಖಾಸಗಿ ಪೋಟೋಗಳನ್ನು ಅಪ್ ಲೋಡ್ ಮಾಡಲಾಗಿದೆ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೈಬರ್ ವಿಭಾಗಗಕ್ಕೆ ಯುವತಿಯೊಬ್ಬರು ದೂರು ನೀಡಿದ್ದರು. ಇದೇ ಖಾತೆಯಿಂದ ನನ್ನ ಮದುವೆಯಾಗಬೇಕಿದ್ದ ದವರನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು ಎಂದು ಹೇಳಿದ್ದಳು .
ಮುಂಬೈ ಅಪಾರ್ಟ್ ಮೆಂಟ್‌ಗಳಲ್ಲಿ ಯುವತಿಯರ ಬೆತ್ತಲೆ ಶೂಟ್
ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಂತ್ರಜ್ಞಾನ ಆಧರಿಸಿ ತನಿಖೆ ಮಾಡಿದಾಗ ಯುವತಿ ಸಿಕ್ಕಿಬಿದ್ದಳು.
ನರೋಡಾ ನಿವಾಸಿಯಾದ ಆರೋಪಿ ತನ್ನ ಮಾಜಿ ಬಾಯ್ ಫ್ರೆಂಡ್ ಮೇಲೆ ಹಗೆ ಸಾಧಿಸಲು ಆತನಿಗೆ ನಿಶ್ಚಿತವಾದ ವಧುವಿನ ಪೋಟೋಗಳನ್ನು ಶೇರ್ ಮಾಡಿದ್ದಾಳೆ.
ಪೋಟೋ ಸಿಕ್ಕಿದ್ದು ಹೇಗೆ?
ಮಾಜಿ ಬಾಯ್ ಫ್ರೆಂಡ್ ಜತೆ ಸಂಬಂಧದಲ್ಲಿ ಇದ್ದಾಗ ಆತನ ಸೋಶಿಯಲ್ ಮೀಡಿಯಾದ ಐಡಿ ಮತ್ತು ಪಾಸ್ ವರ್ಡ್ ಆರೋಇಗೆ ಗೊತ್ತಿತ್ತು. ಅನ್ನು ಬಳಸಿಕೊಂಡು ಲಾಗ್ ಇನ್ನ ಆಗಿದ್ದು ಚಾಟ್ ನಲ್ಲಿ ಮದುವೆ ನಿಶ್ಚಯವಾಗಿದ್ದವರ ಮಾತುಕತೆ ಸಿಕ್ಕಿದೆ. ಅಲ್ಲಿ ನಗ್ನ ಪೋಟೋಗಳು ಸಿಕ್ಕಿದ್ದು ಅದನ್ನು ತೆಗೆದುಕೊಂಡಿದ್ದಾಳೆ.
ಯುವತಿ ಮೇಲೆ ದೂರು ದಾಖಲಾಗಿದ್ದು ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಮೊಬೈಲ್ ಮತ್ತು ನಗ್ನ ಪೋಟೋಗಳನ್ನು ವಶಕ್ಕೆ ಪಡೆದುಕೊಲಾಗಿದೆ.