ಸಾಕ್ಷ್ಯ ಹೇಳಲು ಕೋರ್ಟ್‌ಗೆ ಬಂದ ಮಹಿಳೆ ಮೇಲೆ ಕೋರ್ಟ್ ಆವರಣದಲ್ಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ನಡೆದಿದೆ.
ದೆಹಲಿ: ಸಾಕ್ಷ್ಯ ಹೇಳಲು ಕೋರ್ಟ್‌ಗೆ ಬಂದ ಮಹಿಳೆ ಮೇಲೆ ಕೋರ್ಟ್ ಆವರಣದಲ್ಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ನಡೆದಿದೆ. ಮಹಿಳೆಯ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದ್ದು, ಮಹಿಳೆ ನೋವಿನಿಂದ ಚೀರಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಕೂಡಲೇ ಪೊಲೀಸರು ಮಹಿಳೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಮೇಲೆ ದುಷ್ಕರ್ಮಿಗಳು ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ವಕೀಲನ ವೇಷದಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿ ನಡೆಸಿದಾತ ಮಹಿಳೆಯ ಪತಿಯೇ ಎಂದು ಪೊಲೀಸ್ ಮೂಲಗಳು ಹೇಳಿವೆ.
ಯುಪಿಯಲ್ಲಿ ಗುಂಡಿನ ದಾಳಿಗೆ ಯುವತಿ ಬಲಿ: ಅತೀಕ್ ಹತ್ಯೆಯಂತೆ ಈ ಸಾವನ್ನೂ ಸಂಭ್ರಮಿಸುತ್ತೀರಾ ಎಂದು ಟೀಕೆ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಇದೇ ರೀತಿ ಗುಂಡಿನ ದಾಳಿ ನಡೆದಿತ್ತು. ಆ ಪ್ರಕರಣದಲ್ಲೂ ವಕೀಲನ ವೇಷದಲ್ಲಿದ್ದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಕೂಡಲೇ ಪ್ರತಿದಾಳಿ ನಡೆಸಿದ ಪೊಲೀಸರು ಆತನ ಹತ್ಯೆ ಮಾಡಿದ್ದರು. ರಾಹುಲ್ ತ್ಯಾಗಿ (Rahul Tyagi) ಹಾಗೂ ಜಗದೀಪ್ ಜಗ್ಗ (Jagdeep Jagga) ಎಂಬ ಇಬ್ಬರು ದಾಳಿಕೋರರು ವಕೀಲರಂತೆ ವೇಷ ಧರಿಸಿ ಕೋರ್ಟ್ ರೂಮ್ ಪ್ರವೇಶಿಸಿದ್ದರು, ನಂತರ ಗ್ಯಾಂಗ್‌ಸ್ಟಾರ್ ಜಿತೇಂದರ್ ಮಾನ್ ಅಲಿಯಾಸ್ ಗೋಗಿ (Jitender Maan alias Gogi) ಮೇಲೆ ಹಲವು ಸುತ್ತುಗಳ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು ಈ ಇಬ್ಬರನ್ನು ಹತ್ಯೆ ಮಾಡಿದ್ದರು. ಇದಕ್ಕೂ ಮೊದಲು ಕಳೆದ ವರ್ಷ ಏಪ್ರಿಲ್‌ನಲ್ಲಿ ವಕೀಲರೊಳಗಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ರೋಹಿಣಿ ಆವರಣದಲ್ಲಿ ಗುಂಡಿನ ದಾಳಿ ನಡೆದಿತ್ತು.