Asianet Suvarna News Asianet Suvarna News

ಯುಪಿಯಲ್ಲಿ ಗುಂಡಿನ ದಾಳಿಗೆ ಯುವತಿ ಬಲಿ: ಅತೀಕ್‌ ಹತ್ಯೆಯಂತೆ ಈ ಸಾವನ್ನೂ ಸಂಭ್ರಮಿಸುತ್ತೀರಾ ಎಂದು ಟೀಕೆ

ಗ್ಯಾಂಗ್‌ಸ್ಟರ್‌ - ರಾಜಕಾರಣಿ ಅತೀಕ್ ಅಹ್ಮದ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿ ಟಿವಿ ಕ್ಯಾಮೆರಾಗಳ ಮುಂದೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಯುವತಿಯ ಬಲಿಯಾಗಿದ್ದು, ಇದು ಪೊಲೀಸರನ್ನು ನಾಚಿಕೆಪಡಿಸುವಂತೆ ಮಾಡಿದೆ. ಈ ಘಟನೆ ರಾಜಕೀಯ ಕೋನವನ್ನೂ ತೆಗೆದುಕೊಂಡಿದೆ.

will they celebrate this too daylight murder of up woman sparks outrage after atique ahmed ashraf murder ash
Author
First Published Apr 18, 2023, 11:44 AM IST

ಕಾನ್ಪುರ (ಏಪ್ರಿಲ್ 18, 2023): ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಸೋದರ ಅಶ್ರಫ್‌ ಅವರನ್ನು ಜನಸಂದಣಿಯ ನಡುವೆಯೇ ಹತ್ಯೆ ಮಾಡಲಾಗಿತ್ತು. ಈ ಸಾವನ್ನು ಅನೇಕರು ಸಂಭ್ರಮಿಸಿದ್ದಾರೆ. ಇನ್ನು, ಅನೇಕರು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕೆಯೂ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಡಾನ್‌ ಅತೀಕ್‌ ಹಾಗೂ ಸೋದರ ಅಶ್ರಫ್‌ ಹತ್ಯೆ ಬೆನ್ನಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಹತ್ಯೆ ನಡೆದಿದೆ. 

ಡಾನ್‌ ಅತೀಕ್‌ ಹಾಗೂ ಸೋದರ ಅಶ್ರಫ್‌ ಹತ್ಯೆ ಬೆನ್ನಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಕಾಲೇಜು ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಜನನಿಬಿಡ ರಸ್ತೆಯನ್ನು ದಾಟಿದ ದುಷ್ಕರ್ಮಿಗಳು ಗನ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಇದನ್ನು ಓದಿ: ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

ರೋಶನಿ ಅಹಿರ್ವಾರ್‌ ಎಂಬ 21 ವರ್ಷದ ಬಿಎ ವಿದ್ಯಾರ್ಥಿನಿಯನ್ನು ರಾಜ್‌ ಅಹಿಲ್ವಾರ್‌ ಎಂಬಾತ ಹಾಡ ಹಗಲಲ್ಲೇ ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಪರೀಕ್ಷೆ ಮುಗಿಸಿ ರಾಮ್ ಲಖನ್ ಪಟೇಲ್ ಮಹಾವಿದ್ಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ನಾಡ ಬಂದೂಕಿನೊಂದಿಗೆ ಆಕೆಯ ಬಳಿ ಹೋಗಿ ಅವರಲ್ಲಿ ಒಬ್ಬರು ಯುವತಿಯ ತಲೆಗೆ ಗುಂಡು ಹಾರಿಸಿದ್ದು, ರೋಶನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಘಟನೆ ಕಣ್ಣಾರೆ ಕಂಡ ಸ್ಥಳೀಯರೊಬ್ಬರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದರೂ, ಅವರು  ಆಯುಧವನ್ನು ಎಸೆದು ಓಡಿಹೋಗಿದ್ದಾರೆ. ಮಹಿಳೆಯ ಪೋಷಕರು ರಾಜ್ ಅಹಿರ್ವಾರ್ ವಿರುದ್ಧ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಮತ್ತು ಪೊಲೀಸರು ನೋಡುತ್ತಿದ್ದಂತೆ ಮಹಿಳೆ ರಕ್ತದ ಮಡುವಿನಲ್ಲಿ ನೆಲದ ಮೇಲೆ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಮಹಿಳೆ ಕಾಲೇಜು ಸಮವಸ್ತ್ರದಲ್ಲಿದ್ದು, ಆಕೆಯ ಪಕ್ಕದಲ್ಲಿ ಪಿಸ್ತೂಲ್ ಕಾಣಿಸುತ್ತಿದೆ. ಈ ಹಿನ್ನೆಲೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅತೀಕ್ ಅಹ್ಮದ್ ಹತ್ಯೆ ಕೇಸ್‌: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಗ್ಯಾಂಗ್‌ಸ್ಟರ್‌ - ರಾಜಕಾರಣಿ ಅತೀಕ್ ಅಹ್ಮದ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿ ಟಿವಿ ಕ್ಯಾಮೆರಾಗಳ ಮುಂದೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಇದು ಪೊಲೀಸರನ್ನು ನಾಚಿಕೆಪಡಿಸುವಂತೆ ಮಾಡಿದೆ. ಈ ಘಟನೆ ರಾಜಕೀಯ ಕೋನವನ್ನೂ ತೆಗೆದುಕೊಂಡಿದ್ದು, ಆಡಳಿತಾರೂಢ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ವಿಪಕ್ಷಗಳು ಕೆರಳಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದ್ದು, ತಕ್ಷಣವೇ ಸಿಎಂ ಯೋಗಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸರ್ಕಾರದ ವಿರುದ್ಧ ತರಾಟೆಗೆ ತೆಗೆದುಕೊಂಡಿವೆ. ಅಲ್ಲದೆ, ಡಾನ್‌ ಸಾವನ್ನು ಸಂಭ್ರಮಿಸಿದಂತೆ ಯುವತಿಯ ಸಾವನ್ನೂ ಸಂಭ್ರಮಿಸುತ್ತೀರಾ ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ: ಕಸದ ವಿಚಾರಕ್ಕೆ ಜಗಳ: ಪಿಸ್ತೂಲು ಹಿಡಿದು ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ!

Follow Us:
Download App:
  • android
  • ios