* ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ* ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ ಪರಿಣಾಮ ಸುರಿದ ರಕ್ತ* ಅಶ್ಲೀಲ ಕಮೆಂಟ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ* ಆರೋಪಿಯ ವಿರುದ್ಧ ಪ್ರಕರಣ ದಾಖಲು

ಲಕ್ನೋ(ಆ. 30) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದುಷ್ಕರ್ಮಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಲಕ್ನೋದ ಅಲಿಗಂಜ್ ಏರಿಯಾದಲ್ಲಿ ಪ್ರಕರಣ ನಡೆದಿದೆ. ಆರೋಪಿಯನ್ನು ಪ್ರಭಾತ್ ಕುಮಾರ್ ಎಂದು ಗುರುತಿಸಲಾಗಿದೆ.

Add Asianetnews Kannada as a Preferred SourcegooglePreferred

ಸಾರ್ವಜನಿಕ ಶಾಂತಿ ಕದಡಿದ್ದು. ಇವ್ ಟೀಸಿಂಗ್ ಮತ್ತು ಕೊಲೆಗೆ ಯತ್ನ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಹೆಂಡತಿ ಭಾಷಣ ಕೇಳಲಾರದೆ ಪೊಲೀಸ್ ಚೌಕಿಗೆ ಬೆಂಕಿ ಇಟ್ಟು ಬೇಕಂತಲೇ ಅರೆಸ್ಟ್ ಆದ!

ಭಾನುವಾರ ಸಂಜೆ ವೇಳೆ ಪೊಲೀಸ್ ಅಧಿಕಾರಿ ರೌಂಡ್ಸ್ ನಲ್ಲಿದ್ದರು. ಈ ವೇಳೆ ಹತ್ತಿರದಿಂದ ಹಾದು ಹೋದ ಪ್ರಭಾತ್ ಕುಮಾರ್ ಅಶ್ಲೀಲ ಕಮೆಂಟ್ ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಮಹಿಳಾ ಪೊಳೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿರುವ ಮಹಿಳಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Scroll to load tweet…