* ಹತ್ತನೇ ತರಗತಿ ವಿದ್ಯಾರ್ಥಿಯ ಮದುವೆಯಾದ ಶಿಕ್ಷಕಿ* ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು* ಓಡಿಹೋಗಿ ಮದುವೆಯಾಗಿದ್ದರು* ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ
ಚೆನ್ನೈ (ಡಿ. 30) ಪ್ರೀತಿಗೆ ವಯಸ್ಸಿನ ಅಂತರ ಇಲ್ಲ.. ಪ್ರೀತಿ ಕುರುಡು ಎಲ್ಲವೂ ದೊಡ್ಡ ದೊಡ್ಡ ಮಾತು. ..! ಕೆಲವೇ ದಿನಗಳ ಹಿಂದೆ ಮೈಸೂರಿನಿಂದ ಈ ಬಗೆಯ ಒಂದು ಪ್ರಕರಣ ವರದಿಯಾಗಿತ್ತು. ಈಗ ಚೆನ್ನೈ ಸರದಿ.
ಪಾಠ ಮಾಡಬೇಕಿದ್ದ ಶಿಕ್ಷಕಿ (Teacher)ತನ್ನದೇ ಶಾಲೆಯ ಹುಡುಗನ ಮೋಡಿ ಮಾಡಿದ್ದಾಳೆ. 17 ವರ್ಷದ ಬಾಲಕನನ್ನೇ (Minor Boy) ಮದುವೆಯಾಗಿದ್ದು (Marriage) ಈಗ ಪೊಲೀಸರ ವಶಕ್ಕೆ ಒಳಗಾಗಬೇಕಾಗಿದೆ. ಶಿಕ್ಷಕಿ ವಿರುದ್ಧ ಪೊಲೀಸರು ಇದೀಗೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ಕೂಡ ದಾಖಲಿಸಿದ್ದಾರೆ.
ತಮಿಳುನಾಡಿನ ನಲ್ಲೂರು ಬಳಿಕ ಅರಿಯಲೂರಿನಲ್ಲಿ ಟ್ರೈನಿ ಶಿಕ್ಷಕಿಯೊಬ್ಬರು 10ನೇ ತರಗತಿ ವಿದ್ಯಾರ್ಥಿಯನ್ನು ವಿವಾಹವಾಗಿದ್ದಾರೆ. ತಾವು ಪಾಠ ಹೇಳಿಕೊಡುತ್ತಿದ್ದ ವಿದ್ಯಾರ್ಥಿ ಶಿಕ್ಷಕಿಯ ಪ್ರೀತಿ--ಮೋಹದ ಬಲೆಗೆ ಬಿದ್ದಿದ್ದಾನೆ.
ವಿದ್ಯಾರ್ಥಿ ತನ್ನ ಮನೆಗೆ ಹೋಗಿ ಶಿಕ್ಷಕಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಇಬ್ಬರು ಜತೆಯಾಗಿ ಓಡಿಹೋಗಿ ಮದುವೆಯಾಗಿದ್ದಾರೆ. ಕಳೆದ ಅಕ್ಟೊಬರ್ ನಲ್ಲಿಯೇ ಆದ ಪ್ರಕರಣ ಈಗ ಸದ್ದು ಮಾಡುತ್ತಿದೆ.
ಎರಡೂ ಮನೆ ಕಡೆಯಿಂದ ವ್ಯಾಪಕ ವಿರೋಧ ಎದುರಾದ ಕಾರಣ ಜೋಡಿ ಆತ್ಮಹತ್ಯೆಗೂ ಯತ್ನ ನಡೆಸಿತ್ತು. ಅಕ್ಕಪಕ್ಕದಲ್ಲಿ ಇದ್ದವರು ಜೀವ ಕಾಪಾಡಿದ್ದರು. ಇದೀಗ ಪ್ರಕರಣ ಪೊಲೀಸರ ವ್ಯಾಪ್ತಿಗೆ ಸಿಕ್ಕಿದ್ದು ಶಿಕ್ಷಕಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
17ರ ಬಾಲಕನ ಹಿಂದೆ ಬಿದ್ದಿದ್ದು 35ರ ಆಂಟಿ : 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ (Minor Boy) ದೈಹಿಕ ಸಂಪರ್ಕ ಹೊಂದಿ ವಿವಾಹವಾಗಬೇಕೆಂದು (Marriage) ಪೀಡಿಸುತ್ತಿದ್ದ ಕೇರಳದ (Kerala) 35 ವರ್ಷದ ಮಹಿಳೆ ವಿರುದ್ಧ ನಂಜನಗೂಡು (Nanjanagudu) ಪಟ್ಟಣ ಪೊಲೀಸ್ (Police) ಠಾಣೆಯಲ್ಲಿ ಫೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ : ಮೈಸೂರು ರೇಪ್ ಕೇಸ್ ಆರೋಪಿ ಅರೆಸ್ಟ್
ಮೂಲತಃ ಕೇರಳದ ವೈನಾಡು ಜಿಲ್ಲೆಯ ಆ ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಪತಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದು, ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದಾರೆ. ಆರು ತಿಂಗಳ ಹಿಂದೆ ಫೇಸ್‌ಬುಕ್ (Facebook) ಮೂಲಕ ಈ ಅಪ್ರಾಪ್ತ ಬಾಲಕ ಪರಿಚಿತನಾದ. ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಸಲುಗೆ ಹೆಚ್ಚಾಯಿತು. ತಿಂಗಳ ಹಿಂದೆ ಆ ಬಾಲಕ ಊರಿನಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆತ 10 ದಿನಗಳ ಕಾಲ ಆಕೆಯೊಂದಿಗೆ ಕೇರಳ (Kerala), ಆಂಧ್ರಪ್ರದೇಶ (Andhra Pradesh) ಹಾಗೂ ಬೆಂಗಳೂರು ಕಡೆ ಪ್ರವಾಸ ಮಾಡಿರುವುದು ಗೊತ್ತಾಗಿದೆ. ಆ ಸಂದರ್ಭದಲ್ಲಿ ದೈಹಿಕ ಸಂಪರ್ಕ ಬೆಳೆದಿದೆ. ಮದುವೆಯಾಗುವಂತೆ (Marriage) ದುಂಬಾಲು ಬಿದ್ದಾಗ ತಪ್ಪಿಸಿಕೊಂಡು ಆತ ಊರಿಗೆ ಮರಳಿದ್ದ. ಆತನನ್ನು ಹುಡುಕಿಕೊಂಡ ಬಂದ ಆ ಮಹಿಳೆ ಮದುವೆ ಮಾಡಿಕೊಡುವಂತೆ ಕುಟುಂಬದವರನ್ನು ಒತ್ತಾಯಿಸಿದರು. ಇದರಿಂದ ಕುಟುಂಬದವರು ರಕ್ಷಣೆ ಕೋರಿ ಶಿಶು ಅಭಿವೃದ್ಧಿ ಇಲಾಖೆಯ ಮೊರೆ ಹೋಗಿದ್ದಾರೆ. ಶಿಶು ಅಭಿವೃದ್ಧಿ ಇಲಾಖೆಯು ಅಪ್ರಾಪ್ತನನ್ನು ಮೈಸೂರಿನ (Mysuru) ಬಾಲಕರ ಬಾಲ ಮಂದಿರದಲ್ಲಿ ಹಾಗೂ ಆ ಮಹಿಳೆಯನ್ನು ರಾಜ್ಯ ಮಹಿಳಾ ನಿಲಯದಲ್ಲಿ ಇರಿಸಿದ್ದಾರೆ.
ಬಾಲಮಂದಿರದಲ್ಲಿ ಅಪ್ರಾಪ್ತನನ್ನು ವಿಚಾರಣೆಗೆ ನಡೆಸಿದಾಗ ಆಕೆ ಮದುವೆಯಾಗಲು ದುಂಬಾಲು ಬಿದ್ದಿರುವುದು ಹಾಗೂ ಪ್ರವಾಸಕ್ಕೆ (Tour) ತೆರಳಿದ್ದ ಸಂದರ್ಭದಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ ಬಗ್ಗೆ ಬಾಲಕ ವಿವರಿಸಿದ್ದಾನೆ. ಅಪ್ರಾಪ್ತನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಡಿ ಮಹಿಳೆಯ ವಿರುದ್ಧ ಫೋಕ್ಸೋ ಕಾಯಿದೆಯಡಿ ಮೈಸೂರಿನ ಬಾಲಮಂದಿರದವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
