ಅಮ್ಮನ ಅನೈತಿಕ ಸಂಬಂಧವನ್ನೇ ತನ್ನ ಬಂಡವಾಳ ಮಾಡಿಕೊಂಡ ಕಿಲಾಡಿ ಪುತ್ರಿ!
* ಅಮ್ಮನಿಗೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ
* ಅಮ್ಮನ ಪ್ರಿಯಕರನಿಗೆ ತನ್ನ ಪ್ರಿಯಕರನ ಮೂಲಕ ಬ್ಲಾಕ್ ಮೇಲ್
* ಭರ್ಜರಿ ಮೊತ್ತಕ್ಕೆ ಬೇಡಿಕೆ ಇಟ್ಟ ಜೋಡಿ
* ವಿಡಿಯೋ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡುತ್ತೇವೆ
ಪುಣೆ (ಸೆ. 10) ಇದೊಂದು ವಿಚಿತ್ರದಲ್ಲಿ ವಿಚಿತ್ರ ಪ್ರಕರಣ. 21 ವರ್ಷದ ಮಗಳಿಗೆ ಅಮ್ಮನ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿದೆ. ಆದರೆ ಮಗಳು ಇದನ್ನು ದೊಡ್ಡದು ಮಾಡಲು ಹೋಗಿಲ್ಲ. ಬದಲಾಗಿ ಅಮ್ಮನ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿಕೊಂಡಿದ್ದಾಳೆ.
ತಾಯಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ತಾಯಿಗೆ ಅನುಮಾನ ಬಂದಿದೆ. ತಾಯಿಯ ವಾಟ್ಸಪ್ ಹ್ಯಾಕ್ ಮಾಡಿಕೊಂಡಿದ್ದಾಳೆ. ಅಲ್ಲಿ ರವಾನೆಯಾಗುತ್ತಿದ್ದ ಸಂದೇಶಗಳು ಅನುಮಾನವನ್ನು ಗಟ್ಟಿ ಮಾಡಿದೆ.
ತಾಯಿಯ ವಾಟ್ಸಪ್ ಚಾಟ್ ನಲ್ಲಿ ನಗ್ನ ವಿಡಿಯೋ ಮತ್ತು ಅಶ್ಲೀಲ್ ಚಾಟ್ ಸಿಕ್ಕಿದೆ. ಇದನ್ನೇ ಬಳಸಿಕೊಂಡು ತನ್ನ ಪ್ರಿಯಕರನ ಜತೆಗೂಡಿ ಅಮ್ಮನ ಪ್ರಿಯಕರಿನಗೆ ಬ್ಲಾಕ್ ಮೇಲ್ ಮಾಡಿದ್ದು 15 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾಳೆ.
ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಕ್ಕಳನ್ನೇ ಕೊಂದಳು
ತನ್ನ ಪ್ರಿಯಕರನ ಮೂಲಕ ಯುವತಿ ಕಾರ್ಯಾಚರಣೆ ನಡೆಸಿದ್ದಾಳೆ. ಈಗ ಹದಿನೈದು ಲಕ್ಷ ನಂತರ ತಿಂಗಳಿಗೆ ಒಂದು ಲಕ್ಷ ರೂ. ನೀಡಬೇಕು ಎಂದು ಮಾತುಕತೆಯನ್ನು ಮಾಡಿಸಿದ್ದಾಳೆ. ಇಲ್ಲವಾದರೆ ವಿಡಿಯೋ ಮತ್ತು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಭಯ ಹುಟ್ಟಿಸಲು ಹೇಳಿದ್ದಾಳೆ.
ಮೊದಲಿಗೆ ಹೆದರಿದ ವ್ಯಕ್ತಿ ತನ್ನ ಕಾರು ಬೈಕ್ ಅಡ ಇಟ್ಟು ಹಣ ತಂದುಕೊಟ್ಟಿದ್ದ. ಇವರ ಬೇಡಿಕೆ ಮುಗಿಯುವ ತರಹ ಕಾಣಲಿಲ್ಲ. ನಂತರ ಆತ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದಾನೆ.
ಹಣ ಪಡೆಯಲು ಬಂದ ಮಿಥುನ್ ಗಾಯಕ್ವಾಡ್ ಪೊಲೀಸರ ಬೆಲೆಗೆ ಬಿದ್ದಿದ್ದಾನೆ. ನಂತರ ವಿಚಾರಣೆ ನಡೆಸಿದಾಗ ಮಗಳೇ ಖಳನಾಯಕಿ ಎಂಬ ವಿಚಾರ ಬಹಿರಂಗವಾಗಿದೆ. ಯುವತಿ ಹಾಗೂ ಪ್ರಿಯಕರ ಇದೀಗ ಬಂಧನಕ್ಕೆ ಒಳಗಾಗಿದ್ದಾರೆ. (ಸಾಂದರ್ಭಿಕ ಚಿತ್ರ)