* ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯ ಪತ್ನಿ, ಮತ್ತಿತರರಿಂದ ಕೃತ್ಯ* ಅಪಹರಣಕ್ಕೆ ಒಳಗಾಗಿರುವ ಕಮಲಮ್ಮ* ಮಹಿಳೆಯನ್ನು ಅಪಹಿಸಿದ ಆರೋಪಿಗಳಾದ ಮೀನಾ, ಪ್ರೇಮಾ, ಶ್ರೀಕಾಂತ್‌ ಮತ್ತಿತರರು 

ಕೋಲಾರ(ಅ.07): ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ(Illicit Relationship) ಹೊಂದಿದ್ದಾಳೆಂದು ಆರೋಪಿಸಿ, ಪತ್ನಿ ಹಾಗೂ ಮಕ್ಕಳು, ಸಂಬಂಧಿಕರ ಸಮೇತ, ಮಹಿಳೆಗೆ ಹಿಗ್ಗಾ ಮುಗ್ಗಾ ಥಳಿಸಿ, ಆಕೆಯನ್ನು ಕಿಡ್ನಾಪ್‌ ಮಾಡಿರುವ ಘಟನೆ ಕೋಲಾರ ತಾಲೂಕು ಸೋಮಸಂದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತಾಲೂಕಿನ ಸೊಮಸಂದ್ರ ಗ್ರಾಮದ 33 ವರ್ಷದ ಕಮಲಮ್ಮ ಗಂಡನನ್ನ ಕಳೆದುಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾಳೆ. ಈಕೆಯ ಪತಿ ವಿಜಯಕುಮಾರ್‌ ಮೃತಪಟ್ಟು ಹಲವು ವರ್ಷಗಳು ಆಗಿವೆ. ಆದರೆ ಈ ಕಮಲಮ್ಮ ತನ್ನ ಗಂಡನ ಸಹೋದರ ರಮೇಶ್‌ನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂಬುದು ರಮೇಶ್‌ ಪತ್ನಿ ಮೀನಾಳ ಆರೋಪ.

ಹಲ್ಲೆ ನಡೆಸಿ ಅಪರಹಣ:

ತನ್ನ ಗಂಡ ತನ್ನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆಂದು ರಮೇಶ್‌ ಪತ್ನಿ ಮೀನಾ ಆರೋಪವಾಗಿದ್ದು ಕಳೆದ ಮೂರು ವರ್ಷದಿಂದ ತನ್ನ ಗಂಡ ನಮ್ಮಿಂದ ದೂರವಿದ್ದಾನೆ. ಇದಕ್ಕೆ ಕಮಲಮ್ಮನೇ ಕಾರಣ ಎಂದು ಕೆರಳಿದ ಮೀನಾ ತನ್ನಿಬ್ಬರು ಮಕ್ಕಳು, ತಾಯಿ ರಾಮಕ್ಕ, ಜೊತೆಗೆ ಇನ್ನಿಬ್ಬರು ಅಪರಿಚಿತ ಮಹಿಳೆಯರು ಸೇರಿಕೊಂಡು ಕಮಲಮ್ಮನ ಮೇಲೆ ಮಂಗಳವಾರ ರಾತ್ರಿ ಹಲ್ಲೆ ನಡೆಸಿ ಆಕೆಯನ್ನು ಅಪಹರಣ(Kidnap) ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಬೆಂಗಳೂರಿನಿಂದ(Bengaluru) ಮಾರುತಿ ಸ್ವಿಫ್ಟ್‌ ಕಾರಲ್ಲಿ ಆಗಮಿಸಿ ಏಕಾಏಕಿ ಕಮಲಮ್ಮ ಮೇಲೆ ಹಲ್ಲೆ ಮಾಡಿ ಕಾರಲ್ಲಿ ಕಿಡ್ನಾಪ್‌ ಮಾಡಿಕೊಂಡು ಹೋಗಿದ್ದಾರೆ. ಮಹಿಳೆಯರು ಕಮಲಮ್ಮ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿವ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಮದುವೆಯಾಗಿದ್ದರೂ ಇನ್ನೊಂದು ಸಂಬಂಧ, ಆಕೆಯ ಶಾಪಿಂಗ್ ಬೇಡಿಕೆಗೆ ಬೇಸತ್ತು ಹತ್ಯೆ!

ಈ ಸಂಬಂಧ ಮೀನಾ ಹಾಗು ಮಕ್ಕಳು ಹಾಗು ಮೀನಾ ತಾಯಿಯ ವಿರುದ್ಧ, ಮೀನಾ ಗಂಡ ರಮೇಶ್‌ ಕೋಲಾರ ಗ್ರಾಮಾಂತರ ಪೊಲೀಸ್‌(Police) ಠಾಣೆಯಲ್ಲಿ ದೂರು ನೀಡಿದ್ದು ನಾನು ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿಲ್ಲದಿದ್ದರೂ, ವಿನಾಕಾರಣವಾಗಿ ಪತ್ನಿ ಮೀನಾ ಆರೋಪ ಮಾಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಬೆಂಗಳೂರಿನ ಕಾಡುಗೋಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಕಮಲಮ್ಮನನ್ನು ರಕ್ಷಿಸಿದ್ದಾರೆಂದು ಹೇಳಲಾಗುತ್ತಿದ್ದು ಕೋಲಾರ ಗ್ರಾಮಾಂತರ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.

ಪ್ರಕರಣದಲ್ಲಿ ಮೀನಾ, ಪ್ರೇಮ್‌, ಶ್ರೀಕಾಂತ್‌ ಭಾಗಿಯಾಗಿದ್ದು ಅವರ ಸುಳಿವು ಸಿಕ್ಕಿದ್ದು ಇವರುಗಳನ್ನು ಬಂಧಿಸಲಾಗುವುದು ಎಂದು ಕೋಲಾರ ಗ್ರಾಮಾಂತರ ಪೋಲಿಸ್‌ ಠಾಣೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಂಜಿನಪ್ಪ ತಿಳಿಸಿದರು.