Asianet Suvarna News Asianet Suvarna News

ಮದುವೆಯಾಗಿದ್ದರೂ ಇನ್ನೊಂದು ಸಂಬಂಧ, ಆಕೆಯ ಶಾಪಿಂಗ್ ಬೇಡಿಕೆಗೆ ಬೇಸತ್ತು ಹತ್ಯೆ!

*  ಗೆಳತಿಯ ಶಾಪಿಂಗ್ ಬೇಡಿಕೆಗೆ ಬೇಸತ್ತ ಲವರ್
* ಮದುವೆಯಾದವನಿಗೆ ಮತ್ತೊಂದು ಸಂಬಂಧ
* ಶಾಪಿಂಗ್ ಬೇಡಿಕೆ ಪೂರೈಸಲಾಗದೆ ಹತ್ಯೆ ಮಾಡಿದ
* ರೇಜರ್ ಬಳಸಿ ಕುತ್ತಿಗೆ ಕತ್ತರಿಸಿದ

Woman hacked to death by married lover over never ending shopping demands Gujarat mah
Author
Bengaluru, First Published Oct 4, 2021, 10:54 PM IST
  • Facebook
  • Twitter
  • Whatsapp

ವಡೋದರಾ(ಅ. 04)  ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ರೇಜರ್ ನಿಂದ ಕೊಲೆ (Murder) ಮಾಡಿದ್ದಾನೆ. ಗುಜರಾತ್ ನ ಛೋಟಾ ಉದೆಪುರದಲ್ಲಿ ಘಟನೆ  ನಡೆದಿದೆ. ಸಿಸಿಟಿವಿ ಫೂಟೇಜ್ ಮತ್ತು ಸಂತ್ರಸ್ತೆಯ ಕರೆ ವಿವರಗಳ ಆಧಾರದ ಮೇಲೆ, ಛೋಟಾ ಉದೇಪುರ್ ಪೊಲೀಸ್ ಅಪರಾಧ ವಿಭಾಗವು ರಮೇಶ್ ಪಾಂಚಾಲ್ ಎಂಬ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ.

ಜಂಬುಘೋಡ ನಿವಾಸಿ ಪಾಂಚಾಲ ಮೃತ ಸಂಖೇಡಾದ ಲೀಲಾ ಬರಿಯಾ ಎಂಬ ಮಹಿಳೆಯೊಂದಿಗೆ ವಿವಾಹೇತರ(Illicit relationship) ಸಂಬಂಧ ಹೊಂದಿದ್ದ.  ಕೊಲೆಗಾರ ಪೊಲೀಸರ ವಿಚಾರಣೆ ವೇಳೆ ಅನೇಕ ವಿಚಾರಗಳನ್ನು ತಿಳಿಸಿದ್ದು ಪೊಲೀಸರೆ ಆಘಾತಕ್ಕೆ ಒಳಗಾಗಿದ್ದಾರೆ.

ಮಹಿಳೆಯ ಶಾಪಿಂಗ್ (Shooping) ಬೇಡಿಕೆಗಳು ನನ್ನ ತಲೆ ಕೆಡಿಸಿದ್ದವು. ಆಸೆಗೆ ಮಿತಿಯೇ ಇರಲಿಲ್ಲ. ಅಂತಿಮವಾಗಿ ಬಿಡುಗಡೆ ಹೊಂದಬೇಕು ಎಂದು ಹತ್ಯೆ ಮಾಡಿದೆ ಎಂದಿದ್ದಾನೆ.  ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ದಿನಕ್ಕೆ 350 ರೂ. ಸಂಪಾದನೆ ಮಾಡುತ್ತಿದ್ದ. ಬರಿಯಾಳ ಬೇಡಿಕೆಗಳನ್ನು ಈಡೇರಿಸುವುದು ಮತ್ತು ಅವರ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದು ಕಷ್ಟವಾಗುತ್ತ ಬಂದಿತ್ತು.  ತನ್ನ ಬೇಡಿಕೆಗಳನ್ನು ಪೂರೈಸದೆ ಇದ್ದರೆ ಅಕ್ರಮ ಸಂಬಂಧ ಇರುವ ವಿಚಾರವನ್ನು ನಿನ್ನ ಮನೆಗೂ ತಿಳಿಸುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಾಳೆ. ಬೇರೆ ದಾರಿ ಕಾಣದೆ ಹತ್ಯೆ ಮಾಡಿದೆ ಎಂದಿದ್ದಾನೆ.

ಪರ ಪುರುಷರ ಸಂಬಂದಕ್ಕೆ ಅಡ್ಡಿಯಾದ ಗಂಡನನ್ನೇ ಹತ್ಯೆ ಮಾಡಿದಳು

ಸೆಪ್ಟೆಂಬರ್ 8, ಪಾಂಚಲ್ ಅವಳನ್ನು ಕೊಲ್ಲುವ ಉದ್ದೇಶದಿಂದ ಬರಿಯಾಳನ್ನು ಪಾವಗಡಕ್ಕೆ ಕರೆದುಕೊಂಡು ಹೋಗಿದ್ದಾನೆ.  ಆದರೆ ಅಲ್ಲಿ ಜನಸಂದಣಿ ಇದ್ದ ಕಾರಣ ಹತ್ಯೆ ಮಾಡಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್ 28 ರಂದು ಇಬ್ಬರು  ಸಂಖೇಡಾ-ಹಂದೋಡ್ ರಸ್ತೆಯಲ್ಲಿ ಭೇಟಿಯಾಗಿದ್ದಾರೆ.  ಸೂಕ್ತ ಸಮಯವನ್ನು ಕಂಡುಕೊಂಡ  ಆರೋಪಿ ಕ್ಷೌರಿಕನ ರೇಜರ್ ಬಳಸಿ ಮಹಿಳೆಯ ಕುತ್ತಿಗೆ ಕತ್ತರಿಸಿದ್ದಾನೆ. ಆಕೆ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. 

ಸೀದ ಚಪಾತಿ ನೀಡಿದ ಎಂಬ ಗಲಾಟೆ ದೊಡ್ಡದಾಗಿತ್ತು. ಅಡುಗೆಯವನ ಮೇಲೆ ಜಗಳ  ಕಾದಿದ್ದ ವ್ಯಕ್ತಿಯನ್ನು ಆತನ ಮನೆಗೆ ಹೋಗಿ ಕೊಲೆ ಮಾಡಿದ್ದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿತ್ತು. 

Follow Us:
Download App:
  • android
  • ios