ಸಾಮಾನ್ಯವಾಗಿ ಕಳ್ಳತನದಲ್ಲಿ ಪುರುಷರೇ ಹೆಚ್ಚಾಗಿ ಕಾಣಿಸಿಕೊಂಡರೂ, ಮಹಿಳೆಯರು ಒಂದು ಹೆಜ್ಜೆ ಮುಂದಿದ್ದಾರೆ. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಅಂಗಡಿಯಿಂದ ಕದ್ದ ವಸ್ತುಗಳನ್ನು ತನ್ನ ಬುರ್ಖಾದಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ. ಪೊಲೀಸರು ತಪಾಸಣೆ ನಡೆಸಿದಾಗ, ಆಕೆಯ ಬುರ್ಖಾದಿಂದ ಬೆಲೆಬಾಳುವ ವಸ್ತುಗಳು ಒಂದೊಂದಾಗಿ ಹೊರಬಂದಿವೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಸೃಷ್ಟಿಸಿದೆ.

ಕಳ್ಳರು ಎಂದರೆ ಸಾಮಾನ್ಯವಾಗಿ ಪುರುಷರೇ ಕಣ್ಣೆದುರಿಗೆ ಬರುತ್ತಾರೆ. ಆದರೆ ಕಳ್ಳಿಯರು ಮಾತ್ರ ಪುರುಷರಿಗಿಂತಲೂ ಒಂದು ಹೆಜ್ಜೆ ಮುಂದಕ್ಕೇ ಇರುತ್ತಾರೆ ಎನ್ನುವುದು ಸುಳ್ಳಲ್ಲ. ಸಾಮಾನ್ಯವಾಗಿ ಮಹಿಳೆಯರ ಮೇಲೆ ಯಾರೂ ಡೌಟ್​ ಪಡುವುದಿಲ್ಲ ಎನ್ನುವ ಕಾರಣಕ್ಕೆ ಕಳ್ಳಿಯರ ಕಿತಾಪತಿ ಬೇರೆಯದ್ದೇ ರೀತಿಯಲ್ಲಿ ಇರುತ್ತದೆ. ಇವರ ಕರಾಮತ್ತು ಬಸ್​ಗಳಲ್ಲಿ, ರೈಲ್ವೆ ಒಳಗೆ, ರಶ್​ ಇರುವಲ್ಲಿ, ದೇವಸ್ಥಾನಗಳಲ್ಲಿ ಕಾಣಬಹುದಾಗಿದೆ. ಅದರಲ್ಲಿಯೂ ಸೀರೆಯ ಒಳಗೆ, ರವಿಕೆಯ ಕೆಳಗೆ ಪುಸಕ್ಕನೆ ಕದ್ದ ಮಾಲುಗಳನ್ನು ಸೇರಿಸಿಕೊಳ್ಳುವಲ್ಲಿ ಕಳ್ಳಿಯರು ನಿಸ್ಸೀಮರು. ಸೀರೆ ಅಂಗಡಿಗಳಿಗೆ ನುಗ್ಗಿಯೋ, ಚಿನ್ನದ ಅಂಗಡಿಗೆ ಹೋಗಿಯೋ ಅರೆ ಕ್ಷಣದಲ್ಲಿ ಅಲ್ಲಿರುವ ವಸ್ತುಗಳನ್ನು ಮಂಗಮಾಯ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿರುವುದನ್ನು ಎಲ್ಲರೂ ನೋಡಿಯೇ ಇರುತ್ತೀರಿ.

ಇದೀಗ ಅಂಥದ್ದೇ ಒಬ್ಬ ಕಳ್ಳಿಯ ಕರಾಮತ್ತು ವೈರಲ್​ ಆಗಿದೆ. ಈಕೆ ಪಾಕಿಸ್ತಾನದ ಮಹಿಳೆ ಎನ್ನಲಾಗಿದೆ. ಬುರ್ಖಾ ಧರಿಸಿ ಬಂದಿರುವ ಮಹಿಳೆಯರನ್ನು ಪೊಲೀಸರು ತಪಾಸಣೆ ಮಾಡಿದಾಗ, ಅಬ್ಬಬ್ಬಬ್ಬಾ ಎನ್ನುವ ರೀತಿಯಲ್ಲಿ ಒಂದೊಂದೇ ವಸ್ತುಗಳು ಬುರ್ಖಾದ ಒಳಗಿನಿಂದ ಟಪಟಪ ಎಂದು ಬೀಳತೊಡಗಿವೆ. ಇಷ್ಟು ಚಿಕ್ಕ ಬುರ್ಖಾದಲ್ಲಿ ಎಲ್ಲೆಲ್ಲಿ ಈ ವಸ್ತುಗಳನ್ನು ಅಡಗಿಸಿಕೊಂಡಿದ್ದಳೋ ಆ ದೇವರೇ ಬಲ್ಲ. ಬುರ್ಖಾ ಒಳಗೆ ಕೈಹಾಕಿದಷ್ಟೂ ಅಮೂಲ್ಯ ವಸ್ತುಗಳು ಒಂದೊಂದಾಗಿ ಬರುತ್ತಲೇ ಇವೆ. ಕೊನೆಗೆ ಲೇಡಿ ಪೊಲೀಸ್​ ಬೆದರಿಸಿದಾಗ ಮತ್ತೆ ಒಳಗೆ ಕೈಹಾಕಿ ಬ್ಯಾಗ್​ನಿಂದ ಮತ್ತಷ್ಟು ಸಾಮಗ್ರಿಗಳನ್ನು ತೆಗೆದಿದ್ದಾಳೆ ಈ ಚಾಲಾಕಿ.

ಸೊಟ್ಟ ಮೂಗು ನೆಟ್ಟಗಾಗ್ತಿದ್ದಂಗೆ, ಡಿವೋರ್ಸ್​ ಕೊಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋ ಪಾಠ ಮಾಡ್ತಿದ್ದಾಳೆ ಈ ಮಹಿಳೆ!

ಕೊನೆಗೆ ಇಷ್ಟೇ ಇರುವುದು, ನನ್ನನ್ನುಬಿಟ್ಟುಬಿಡಿ ಎಂದು ಅಂಗಲಾಚುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಪೊಲೀಸರು ಅಂದ್ರೆ ಸುಮ್ಮನೇನಾ? ಮತ್ತೆ ಲೇಡಿ ಪೊಲೀಸ್ ಗದರಿದಾಗ ಮತ್ತೊಮ್ಮೆ ಬುರ್ಖಾದಲ್ಲಿ ಕೈಹಾಕಿದರೆ, ಮತ್ತಷ್ಟು ಸಾಮಗ್ರಿಗಳು ಬುರ್ಖಾ ಒಳಗೆ ಇದೆ. ಈಕೆ ಅಸಮಾನ್ಯರಲ್ಲಿ ಅಸಮಾನ್ಯ ಕಳ್ಳಿ ಎನ್ನುವುದು ಸಾಬೀತಾಗಿದೆ. ಪಾಕಿಸ್ತಾನದಲ್ಲಿ ಮಹಿಳೆಯರು ಕೂಡ ಇಷ್ಟೆಲ್ಲಾ ಮುಂದುವರೆದಿದ್ದಾರೆ ಎನ್ನುವುದು ತಿಳಿದೇ ಇರಲಿಲ್ಲ ಎಂದು ಈ ವಿಡಿಯೋ ನೋಡಿ ನೆಟ್ಟಿಗರು ಕಮೆಂಟ್​ ಹಾಕುತ್ತಿದ್ದಾರೆ. ಇಲ್ಲಿರುವ ಶೀರ್ಷಿಕೆ ಪ್ರಕಾರ ಈಕೆ ಇಂಗ್ಲೆಂಡ್​ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಒಟ್ಟಿನಲ್ಲಿ ಈ ವಿಡಿಯೊ ಹಲ್​ಚಲ್​ ಸೃಷ್ಟಿಸುತ್ತಿದೆ. ಇಲ್ಲಿರುವ ಸಾಮಗ್ರಿಗಳು ಲಕ್ಷಾಂತರ ಮೌಲ್ಯ ಬೆಲೆ ಬಾಳುವಂಥದ್ದು ಎನ್ನಲಾಗಿದೆ. ಆದರೆ ಅದರಲ್ಲಿ ಏನೇನಿವೆ ಎನ್ನುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಕೆಲವೊಂದನ್ನು ನೇರವಾಗಿ ಬುರ್ಖಾದ ಒಳಗಿನಿಂದ ತೆಗೆದಿದ್ದರೆ, ಮತ್ತಷ್ಟು ಬುರ್ಖಾದ ಒಳಗೆ ಇಟ್ಟುಕೊಂಡಿರುವ ವಿವಿಧ ಬ್ಯಾಗ್​ನಿಂದ ತೆಗೆದು ತೆಗೆದು ತೋರಿಸಿದ್ದಾಳೆ ಈ ಮಹಿಳೆ. ಅದರಲ್ಲಿ ಹೆಚ್ಚಿನವು ಬಟ್ಟೆಗಳೇ ಆಗಿವೆ. ಬಟ್ಟೆ ಹೊರತುಪಡಿಸಿ ವಿವಿಧ ಸಾಮಗ್ರಿಗಳೂ ಇದರಲ್ಲಿ ಇರುವುದನ್ನು ನೋಡಬಹುದು. 

ಅಮೆಜಾನ್​ನಿಂದ ಏನೇನೋ ಆರ್ಡರ್​ ಮಾಡಿದ ಕಿತಾಪತಿ ಆಫ್ರಿಕನ್​ ಗಿಳಿ! ಮಹಿಳೆ ಸುಸ್ತೋ ಸುಸ್ತು- ಏನಾಯ್ತು ನೋಡಿ

ಮಹಿಳೆಯ ಕರಾಮತ್ತಿನ ವಿಡಿಯೋ ನೋಡಲು ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್​ ಮಾಡಿ

www.facebook.com/watch/?v=955474083081785