Asianet Suvarna News Asianet Suvarna News

ಸಾಲಬಾಧೆ: ಬೀಗ ಹಾಕಿದ ಬೇರೆಯವರ ಮನೆ ಗ್ಯಾಲರಿಯಲ್ಲಿ ಮಹಿಳೆ ನೇಣಿಗೆ ಶರಣು

ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಕೌಟುಂಬಿಕ ಕಲಹ, ಬ್ಯಾಂಕ್ ಸಾಲ, ಲೈಂಗಿಕ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಾಲಿಗೆ ಮತ್ತೊಂದು ಆತ್ಮಹತ್ಯೆ ಪ್ರಕರಣ ಸೇರ್ಪಡೆಯಾಗಿದೆ.,ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ಕಿಲ್ಲಾ ಪ್ರದೇಶದಲ್ಲಿ ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ನಡೆದಿದೆ.

Woman hangs herself in locked gallery of house belgavi rav
Author
First Published Sep 29, 2022, 11:29 AM IST

ಬೆಳಗಾವಿ (ಸೆ.29) : ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಕೌಟುಂಬಿಕ ಕಲಹ, ಬ್ಯಾಂಕ್ ಸಾಲ, ಲೈಂಗಿಕ ಕಿರುಳಕ್ಕೆ ಬೇಸತ್ತು ನೇಣಿಗೆ ಶರಣಾಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಾಲಿಗೆ ಮತ್ತೊಂದು ಆತ್ಮಹತ್ಯೆ ಪ್ರಕರಣ ಸೇರ್ಪಡೆಯಾಗಿದೆ. ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಮೂವರು ಮಕ್ಕಳನ್ನು ನರ್ಮದಾಗೆ ಎಸೆದು ಪ್ರಿಯಕರನೊಂದಿಗೆ ಮಹಿಳೆ ಆತ್ಮಹತ್ಯೆ

ರೇಷ್ಮಾ ಮುಲ್ಲಾ(40) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಸಂಘವೊಂದರಲ್ಲಿ ಪಡೆದ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ. ಬೀಗ ಹಾಕಿ ಬೇರೆಡೆ ತೆರಳಿದ್ದ ಬೇರೆಯವರ ಮನೆಯ ಗ್ಯಾಲರಿಯಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ಕಿಲ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಬೀಗ ಹಾಕಿದ ಮನೆಯಲ್ಲಿ ನೇತಾಡುತ್ತಿದ್ದ ಮೃತದೇಹ ಕಂಡು ವಾಯುವಿಹಾರಿಗಳು ಬೆಚ್ಚಿಬಿದ್ದಿದ್ದಾರೆ.

ಮನೆಗೆ ಬೀಗ ಹಾಕಿ ಬೇರೆಡೆ ತೆರಳಿದ್ದ ಕುಟುಂಬ:

ಕೆಲವು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಕಿರಣ್ ದಿಕ್ಷೀತ್ ಕುಟುಂಬ ಬೇರೆಡೆ ತೆರಳಿತ್ತು. ಈ ವೇಳೆ ಆ ಮನೆಯಲ್ಲಿ ಯಾರೂ ಇಲ್ಲದಿರುವದನ್ನು ಗಮನಿಸಿದ್ದ ರೇಷ್ಮಾ ಆ ಮನೆಯ ಗ್ಯಾಲರಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮುಂಜಾನೆ ವಾಯುವಿಹಾರಕ್ಕೆ ಹೋಗಿದ್ದ ಜನರು ಗ್ಯಾಲರಿಯಲ್ಲಿ ಮೃತದೇಹ ನೇತಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಗೋಕಾಕ ಶಹರ ಠಾಣೆ ‌ಪೊಲೀಸರ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

7 ವರ್ಷದಲ್ಲಿ 14 ಬಾರಿ ಅಬಾರ್ಷನ್‌, ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Follow Us:
Download App:
  • android
  • ios