ಮುಂಬೈ(ಫೆ. 02)  ಈತ ಅಂತಿಥ ಖತರ್ ನಾಕ್ ಲವರ್ ಅಲ್ಲ. ಪ್ರೀತಿ ಮಾಡುತ್ತಿದ್ದಾನೆ ಎಂದು ನಂಚಿಕೊಂಡ ಹುಡುಗಿ 13 ಲಕ್ಷ ರೂ. ಕಳೆದುಕೊಂಡಿದ್ದಾಳೆ. 

ಗೆಳೆಯನ ನಂಬಿ ಮನೆಯ ಡುಪ್ಲಿಕೇಟ್ ಕೀ ಗಳನ್ನು ಮಾಡಿ ಕೊಟ್ಟಿದ್ದಳು. ಅವಕಾಶ ಬಳಸಿ ಮನೆಗೆ ನುಗ್ಗಿದ ಲವರ್ ಕಳ್ಳ ಎಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ನಟಿಯ ಬಾತ್ ರೂಂಗೆ ನುಗ್ಗಿ ಹಸ್ತಮೈಥುನ ಮಾಡಿಕೊಂಡ!

ಗೆಳತಿ ಮತ್ತು ಆಕೆಯ ಕುಟುಂಬದವರು ಔಟಿಂಗ್ ಹೋದಾಗ ಈ ಕೆಲಸ ಮಾಡಿದ್ದಾನೆ. ಗೆಳತಿ ಟ್ರಿಪ್ ಕ್ಯಾನ್ಸಲ್ ಮಾಡಿ ಗೆಳೆಯನೊಂದಿಗೆ ಸಮಯ ಕಳೆಯುವ ಇರಾದೆ ಹೊಂದಿದ್ದಳು. ಆದರೆ ಅನಿವಾರ್ಯವಾಗಿ ಟ್ರಿಪ್ ಗೆ ಹೋಗಿದ್ದಳು.

ಹುಡುಗಿಯ ತಂದೆ ಅವಳೊಬ್ಬಳನ್ನೇ ಬಿಟ್ಟು ಹೋಗಲು ಒಪ್ಪಲಿಲ್ಲ.   ಟ್ರಿಪ್ ಮುಗಿಸಿ ವಾಪಸ್ ಬಂದಾಗ ಮನೆ ದೋಚಿರುವುದು ಗೊತ್ತಾಗಿದೆ. ಮನೆಯವರು ಪೊಲೀಸರ ಬಳಿ ದೂರು ಕೊಟ್ಟಾಘ ಹುಡುಗಿ ನಕಲಿ ಕೀ ಮಾಡಿ ಕೊಟ್ಟಿರುವುದು ಗೊತ್ತಾಗಿದೆ. ಇದೇ ಮಾಹಿತಿ ಆಧರಿಸಿ ಕಳ್ಳ ಲವರ್ ಬಂಧನ ಮಾಡಲಾಗಿದ್ದು ಆತ ತಪ್ಪು ಒಪ್ಪಿಕೊಂಡಿದ್ದಾನೆ.