ಮುಂಬೈ(ಫೆ. 01)  ಬಾಲಿವುಡ್ ನಲ್ಲಿ ಮಿಂಚಿ ಇದೀಗ ಅಡಲ್ಟ್ ಮನರಂಜನೆ ನೀಡುತ್ತಿರುವ ನಟಿ ಶೆರ್ಲಿನ್ ಚೋಪ್ರಾ ನಿರ್ದೇಶಕ ಸಾಜಿದ್ ಖಾನ್ ಮೇಲೆ ಆರೋಪ ಒಂದನ್ನು ಮಾಡಿದ್ದರು. ತನ್ನ ಎದುರಿನಲ್ಲಿಯೇ ಪ್ಯಾಂಟ್ ಬಿಚ್ಚಿದ್ದರು ಎಂದು ಆರೋಪಿಸಿದ್ದರು. ಈಗ ಅಂಥದ್ದೇ ಒಂದು ಪ್ರಕರಣ ಮುಂಬೈನ ಪಂಚತಾರಾ ಹೋಟೆಲ್ ನಿಂದ ವರದಿಯಾಗಿದೆ.

ವೆಬ್ ಸೀರಿಸ್ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.  ಶೌಚಾಲಯವೊಂದ ರಲ್ಲಿ ನಟಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಖಾಸಗಿ ಪೋಟೋ ಈತನ ಕೈ ಸೇರಿದ್ದು ಹೇಗೆ? 

ಹೊಟೆಲ್ ನ  37 ನೇ  ಮಹಡಿಯಲ್ಲಿ ಈ ಪ್ರಕರಣ ನಡೆದಿದೆ. ವೆಬ್ ಸೀರಿಸ್ ನ ಚಿತ್ರೀಕರಣದಲ್ಲಿ ನಟಿ ಭಾಗವಹಿಸಿದ್ಸದರು. ಈ ವೇಳೆ ಹೋಟೆಲ್ ನ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬ ನೀಚ ಕೆಲಸ ಮಾಡಿದ್ದಾನೆ. ನಟಿ ಮೇಲೆ ದೌರ್ಜನ್ಯ ಎಸಗಲು ಯತ್ನ ಮಾಡಿದ್ದು ಅಲ್ಲದೇ ತನ್ನ ಶಿಶ್ನವನ್ನು ಆಕೆ ಎದುರು ಪ್ರದರ್ಶನ ಮಾಡಿದ್ದಾನೆ,

ಶೂಟಿಂಗ್ ಮುಗಿಸಿದ ನಟಿ ಬಟ್ಟೆ ಬದಲಾಯಿಸಲು ರೆಸ್ಟ್ ರೂಂ ಗೆ ಹೋಗಿದ್ದಳು. ಈ ವೇಳೆ ಹಿಂದಿನಿಂದ ಬಂದು ಆಕೆಯನ್ನು ಹಿಡಿದುಕೊಂಡು ದೌರ್ಜನ್ಯ ಎಸಗಿದ್ದಾನೆ.

ನಟಿ ಆತನಿಂದ ತಪ್ಪಿಸಿಕೊಂಡಾಗ ಅವಳ ಎದುರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದಾನೆ.  ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿಕೊಳ್ಳಲಾಗಿದ್ದು ಆರೋಪಿಯನ್ನು ಶೀಘ್ರದಲ್ಲೇ  ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.