16ರ ಅಪ್ರಾಪ್ತೆಗೆ ತಾಳಿ ಕಟ್ಟಿದ 17ರ ಬಾಲಕ, ಮದುವೆಯಾದ ಬೆನ್ನಲ್ಲೇ ಅರೆಸ್ಟ್!

ಇಬ್ಬರೂ ಅಪ್ರಾಪ್ತರು.  ಮದುವೆ ಮಾಡಿಸಿದ ಸಂತಸದಲ್ಲಿ ಹಿರಿಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನು 16ರ ಬಾಲಕಿಗೆ ಕೌನ್ಸಲಿಂಗ್ ನೀಡಲಾಗುತ್ತಿದೆ.

17 year old boy married 16 year old minor girl in Tamil nadu Police book case under child marriage act ckm

ಚೆನ್ನೈ(ಅ.11): ಸರಳ ವಿವಾಹ ಸಮಾರಂಭ, ಹಲವು ಹಿರಿಯರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಈ ಮದುವೆಯ ಸಾರಥ್ಯವನ್ನು ಪೋಷಕರಿಗಿಂತ ಅದೇ ಕುಟುಂಬದ ಹಲವು ಹಿರಿಯರು ವಹಿಸಿದ್ದರು. ಮದವೆ ನಡೆದ ಬೆನ್ನಲ್ಲೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ಸುಸೂತ್ರವಾಗಿ ಮದುವೆ ನಡೆಸಿದ ಬಳಿಕ ಈ ವಿಡಿಯೋವನ್ನು ಅದೇ ಕುಟುಂಬ ಸದಸ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಕಾರಣ ಇದು ಅಪ್ರಾಪ್ತರ ಮದುವೆಯಾಗಿತ್ತು. ಮದುಮಗನಿಗೆ 17 ವರ್ಷ, ವಧುವಿಗೆ 16 ವರ್ಷ. ಇದೇ ಕಾರಣಕ್ಕೆ ವಿಡಿಯೋ ಮಾಹಿತಿ ಪಡೆದ ಪೊಲೀಸರು ನೇರವಾಗಿ ಮದುವೆ ಮನಗೆ ಬಂದು 17 ಬಾಲಕ, ವಿಡಿಯೋ ಪೋಸ್ಟ್ ಮಾಡಿದ ಕುಟುಂಬ ಸದಸ್ಯನನ್ನು ಬಂಧಿಸಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದು ಕೌನ್ಸಲಿಂಗ್ ನೀಡಿದ್ದಾರೆ. ಅಷ್ಟಕ್ಕೂ ಈ ಬಾಲ್ಯವಿವಾಹ ನಡೆದಿರುವುದು ತಮಿಳುನಾಡಿನ ಕದ್ದಲೋರ್ ಜಿಲ್ಲೆಯಲ್ಲಿ.

ಅಪ್ರಾಪ್ತರ ಮದುವೆ ವಿಡಿಯೋ ವೈರಲ್ ಆಗಿತ್ತು. ಇವರ ವಯಸ್ಸಿನ ಕುರಿತು ತೀವ್ರ ಚರ್ಚೆಯಾಗಿತ್ತು. ಹತ್ತಿರದಿಂದ ಬಲ್ಲವರು ಇದು ಬಾಲ್ಯವಿವಾಹ ಎಂದು ಕಮೆಂಟ್ ಮಾಡಿದ್ದರು. ಹೀಗಾಗಿ ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತನಿಖೆ ಆರಂಭಿಸಿತು. ಬಳಿಕ ನೇರವಾಗಿ ಮದುಮಗನ ಮನೆಗೆ ಆಗಮಿಸಿ 17ರ ಅಪ್ರಾಪ್ತ ಹಾಗೂ 51 ವರ್ಷದ ಬಾಲಾಜಿ ಗಣೇಶ್ ಎಂಬಾತನನ್ನು ಅರೆಸ್ಟ್ ಮಾಡಿದ್ದರು. ಇನ್ನು ಅಪ್ರಾಪ್ತೆಯನ್ನು ವಶಕ್ಕೆ ಪಡೆದ ಮಕ್ಕಳ ರಕ್ಷಣಾ ಘಟಕ ಕೌನ್ಸಲಿಂಗ್ ನೀಡಿದೆ.

16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು

ಮದುವೆಗೆ ಅಪ್ರಾಪ್ತ ಬಾಲಕಿ ಪೋಷಕರಿಗಿಂತ ಅವರ ಕುಟುಂಬಸ್ಥರು ಹೆಚ್ಚು ಆಸಕ್ತಿ ಹೊಂದಿದ್ದರು. 17 ಬಾಲಕ ಪ್ರಪೋಸಲ್ ಬಂದ ತಕ್ಷಣವೇ ಬಾಲಕಿ ಪೋಷಕರನ್ನು ಒಪ್ಪಿಸಿದ್ದಾರೆ. ಇಂತಹ ಒಳ್ಳೆಯ ಸಂಬಂಧ ಇನ್ನು ಬರುವುದಿಲ್ಲ. ಹುಡುಗ ಚಿರ ಯುವಕ. ಆತನ ಅಪ್ಪನಿಗೆ ವ್ಯವಾಹರವಿದೆ. ಮುಂದೆ ಅದು ಇದೇ ಹುಡುಗನಿಗೆ. ನಿಮ್ಮ ಮಗಳು ಚೆನ್ನಾಗಿರುತ್ತಾಳೆ. ಈ ಸಂಬಂಧ ಬೇಡ ಅಂದರೆ ಇನ್ಯಾರು ಬರುತ್ತಾರೆ ಮದುವೆಗೆ ಎಂದೆಲ್ಲಾ ಎರಡು ಕುಟುಂಬ ಹಿರಿಯರು ಬಾಲಕಿ ಪೋಷಕರ ತಲೆಕೆಡಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಾಲಕಿ ಪೋಷಕರು ಅನ್ಯ ದಾರಿ ಇಲ್ಲದೆ ಮದವೆಗೆ ಒಪ್ಪಿದ್ದಾರೆ. ಬಳಿಕ ಎರಡೂ ಕುಟುಂಬದ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ. 

 

Davanagere; ನಾಲ್ಕು ಬಾಲ್ಯವಿವಾಹಕ್ಕೆ ಬ್ರೇಕ್, ಕಣ್ತಪ್ಪಿಸಿ ಮದುವೆಯಾದವ ಅರೆಸ್ಟ್

ಹೆಣ್ಣುಮಕ್ಕಳ ಬಾಲ್ಯವಿವಾಹ: ಜಾರ್ಖಂಡ್‌ ನಂ.1
ವಾಮಾಚಾರದ ಹತ್ಯೆಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಖಂಡ್‌, ಕೇಂದ್ರ ಸರ್ಕಾರದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ ಅತಿ ಹೆಚ್ಚು ಅಪ್ರಾಪ್ತ ಬಾಲಕಿಯರ ವಿವಾಹದಲ್ಲೂ ಕುಖ್ಯಾತಿ ಗಳಿಸಿದೆ. ಪ್ರಾಪ್ತ ವಯಸ್ಸಿಗೆ ತಲುಪುವ ಮೊದಲೇ ಮದುವೆಗೆ ಒಳಗಾಗುತ್ತಿರುವ ಬಾಲಕಿಯರ ಪ್ರಮಾಣ ರಾಜ್ಯದಲ್ಲಿ ಶೇ.5.8ರಷ್ಟಿದೆ. ‘18 ವರ್ಷ ತುಂಬುವ ಮೊದಲೇ ಮುದುವೆಯಾಗುತ್ತಿರುವ ಬಾಲಕಿಯರ ಪ್ರಮಾಣ ದೇಶದಲ್ಲಿ ಶೇ.1.9 ಇದ್ದರೆ ಜಾರ್ಖಂಡ್‌ನಲ್ಲಿ ಶೇ.5.8ರಷ್ಟಿದೆ. ಆದರೆ ಕೇರಳದಲ್ಲಿ ಇದರ ಪ್ರಮಾಣ ಶೂನ್ಯವಾಗಿದೆ’ ಎಂದು ವರದಿ ತಿಳಿಸಿದೆ. ಜಾರ್ಖಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಪ್ರಮಾಣ ಶೇ.7.3 ಮತ್ತು ನಗರ ಪ್ರದೇಶಗಳಲ್ಲಿ ಶೇ.3ರಷ್ಟಿದೆ. ವಿಶ್ವದ ಅತಿದೊಡ್ಡ ಜನಸಂಖ್ಯಾ ಸಮೀಕ್ಷೆಯ ಮೂಲಕ ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಸಮೀಕ್ಷೆಯನ್ನು 2020ರಲ್ಲಿ ನಡೆಸಲಾಗಿದ್ದು, ಕಳೆದ ತಿಂಗಳು ಪ್ರಕಟಿಸಲಾಗಿದೆ. ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು 21 ವರ್ಷ ತುಂಬುವ ಮೊದಲೇ ವಿವಾಹವಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Latest Videos
Follow Us:
Download App:
  • android
  • ios