* ಶಾಸಕರಿಗೆ ಸೇರಿದ ಕಾರು ಅಪಘಾತ*ಸ್ಥಳದಲ್ಲಿಯೇ ಮಹಿಳೆ ಸಾವು* ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿಗೆ ಸೇರಿದ ಕಾರು* ತಾಯಿ ಮತ್ತು ಮಗ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು

ಹಾಸನ(ಅ. 03) ಶಾಸಕರ ಕಾರು ಬೈಕ್ ಗೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹಾಸನ‌ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತನಗರದ ಬಳಿ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ‌ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಯವರಿಗೆ ಸೇರಿದ ಕಾರಿನಿಂದ ಅಪಘಾತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಸಕರಿದ ಕಾರು ಬೇಲೂರಿನತ್ತ ಬರುತ್ತಿತ್ತು. ಈ ವೇಳೆ ಮುಂದೆ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ. ಶಾಸಕರ ಕಾರು ಚಲಾಯಿಸುತ್ತಿದ್ದವ ಪಾನಮತ್ತನಾಗಿದ್ದ ಎಂಬ ಆರೋಪ ಕೇಳಿ ಬಂದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆ‌ ಹೂವಮ್ಮ (55) ಸಾವಾಗಿದ್ದು ಪುತ್ರನಿಗೆ ಗಂಭೀರ ಗಾಯಗಳಾಗಿವೆ.

ಸೀದು ಹೋದ ಚಪಾತಿ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದವನ ಕೊಂದೇ ಬಿಟ್ಟ

ಕಾರ್‌ರಿಪೇರಿಗಾಗಿ ಬೆಂಗಳೂರಿಗೆ ಹೋಗುತ್ತಿರುವುದಾಗಿ ಶಾಸಕರ ಕಾರು ಚಾಲಕ ಹೇಳಿದ್ದಾನೆ. ಏಕಾ ಏಕಿ‌ ಬೈಕ್‌ ಬಲಕ್ಕೆ ಬಂದಿದ್ದರಿಂದ ಬೈಕ್ ಗೆ ಡಿಕ್ಕಿಯಾಗಿದೆ ಎನ್ನುತ್ತಿದ್ದಾನೆ. ಶಾಸಕರ ಕಾರು ಚಾಲಕ ಪಾನಮತ್ತನಾಗಿದ್ದರಿಂದಲೇ ಅಪಘಾತ ಎಂದು ಸ್ಥಳೀಯರು ಆರೋಪಿಸಿದ್ದು ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಿಜೆಪಿಯ ನಾಯಕ ಸಿಟಿ ರವಿ ಅವರ ಕಾರು ಕೆಲ ತಿಂಗಳ ಹಿಂದೆ ತುಮಕೂರು ಹೆದ್ದಾರಿಯಲ್ಲಿ ಅಪಘಾತಕ್ಕೆ ಗುರಿಯಾಗಿತ್ತು. ದುರಂತದಲ್ಲಿ ಪ್ರಾಣ ಹಾನಿಯಾಗಿತ್ತು.